ಕೆವೈಸಿ ಅಪ್ ಡೇಟ್ ಸೋಗಿನಲ್ಲಿ ದಾಖಲೆ ಪಡೆದು 9 ಲಕ್ಷ ಎಗರಿಸಿ ಆನ್ ಲೈನ್ ವಂಚಕರು..!

ನಗರ ಆಗ್ನೇಯ ವಿಭಾಗದ ಸೆನ್‌ ಪೊಲೀಸ್ ಠಾಣೆ ಕಾನ್ ಸ್ಟೇಬಲ್‌ನ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಲೋಕಾಯುಕ್ತ ನಿವೃತ್ತ ರಿಜಿಸ್ಟ್ರಾರ್ ಅವರ ಬ್ಯಾಂಕಿನಿಂದ ಸೈಬರ್ ಖದೀಮರು ಎಗರಿಸಿದ್ದ 9 ಲಕ್ಷ ರೂಪಾಯಿ‌ ತಡೆದು ಮತ್ತೆ ದೂರುದಾರರಿಗೆ ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Jul 20, 2022, 10:43 PM IST
  • ರಾಜಸ್ತಾನದಲ್ಲಿದ್ದ ಮ್ಯಾನೇಜರ್ ಕೂಡಲೇ ಕಾರ್ಯಪ್ರವೃತ್ತರಾಗಿ ಸೈಬರ್ ಖದೀಮರ ಬ್ಯಾಂಕ್ ಅಕೌಂಟ್ ಖಾತೆಯನ್ನ ಫ್ರೀಜ್ ಮಾಡಿದ್ದಾರೆ.‌
  • ಅಕೌಂಟ್ ನಲ್ಲಿದ್ದ 9 ಲಕ್ಷ ಹಣವನ್ನ ದೂರುದಾರರಿಗೆ ವಾಪಸ್ ಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆವೈಸಿ ಅಪ್ ಡೇಟ್ ಸೋಗಿನಲ್ಲಿ ದಾಖಲೆ ಪಡೆದು 9 ಲಕ್ಷ ಎಗರಿಸಿ ಆನ್ ಲೈನ್ ವಂಚಕರು..!  title=

ಬೆಂಗಳೂರು: ನಗರ ಆಗ್ನೇಯ ವಿಭಾಗದ ಸೆನ್‌ ಪೊಲೀಸ್ ಠಾಣೆ ಕಾನ್ ಸ್ಟೇಬಲ್‌ನ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಲೋಕಾಯುಕ್ತ ನಿವೃತ್ತ ರಿಜಿಸ್ಟ್ರಾರ್ ಅವರ ಬ್ಯಾಂಕಿನಿಂದ ಸೈಬರ್ ಖದೀಮರು ಎಗರಿಸಿದ್ದ 9 ಲಕ್ಷ ರೂಪಾಯಿ‌ ತಡೆದು ಮತ್ತೆ ದೂರುದಾರರಿಗೆ ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Gandhada Gudi: ಪವರ್ ಸ್ಟಾರ್ ಪುನೀತ್ ‘ಗಂಧದ ಗುಡಿ’ಗೆ ಹೊಂಬಾಳೆ ಫಿಲ್ಮ್ಸ್ ಸಾಥ್!

ಕೆವೈಸಿ ಅಪ್ ಡೇಟ್ ಮಾಡುವುದಾಗಿ ಬ್ಯಾಂಕ್ ಹೆಸರೇಳಿಕೊಂಡು ನಿವೃತ್ತ ಲೋಕಾಯುಕ್ತ ರಿಜಿಸ್ಟ್ರಾರ್ ರೊಬ್ಬರಿಗೆ ಕರೆ ಮಾಡಿದ ಆನ್ ಲೈನ್ ವಂಚಕರು ಎಲ್ಲಾ ದಾಖಲಾತಿಗಳನ್ನ ಪೋನ್ ನಲ್ಲಿ‌ ಪಡೆದುಕೊಂಡು ಕ್ಷಣಾರ್ಧದಲ್ಲಿ ಜೀವಮಾನವೀಡಿ ಸಂಪಾದಿಸಿದ್ದ 9 ಲಕ್ಷ ಪಿಂಚಣಿ ಹಣ ಎಗರಿಸಿದ್ದರು‌.‌No description available.

ಹಣ ಕಳೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ‌ ದೂರುದಾರರು ಕೂಡಲೇ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.‌ಈ ವೇಳೆ ರಜೆಯಿದ್ದರೂ ಅನ್ಯ ಕಾರ್ಯನಿಮಿತ್ತ ಠಾಣೆಗೆ ಬಂದಿದ್ದ ಕಾನ್ ಸ್ಟೇಬಲ್ ಆಶ್ತಪ್ ಸಬ್ ಪಿಂಜಾರ, ದೂರು ದಾಖಲಿಸಿಕೊಳ್ಳದೆ ಕೂಡಲೇ ಕೆನೆರಾ ಬ್ಯಾಂಕ್ ಮ್ಯಾನೇಜರ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ‌.‌‌No description available.

ಇದನ್ನೂ ಓದಿ : ಸಿಸಿಬಿ ಅಧಿಕಾರಿಗಳ ಬಿಗ್ ಹಂಟ್.. ಮೊಬೈಲ್ ಬಿಡಿಭಾಗ ಕೊಳ್ಳುವ ಮುನ್ನ ಎಚ್ಚರ..!

ರಾಜಸ್ತಾನದಲ್ಲಿದ್ದ ಮ್ಯಾನೇಜರ್ ಕೂಡಲೇ ಕಾರ್ಯಪ್ರವೃತ್ತರಾಗಿ  ಸೈಬರ್ ಖದೀಮರ ಬ್ಯಾಂಕ್ ಅಕೌಂಟ್ ಖಾತೆಯನ್ನ ಫ್ರೀಜ್ ಮಾಡಿದ್ದಾರೆ.‌ ಅಕೌಂಟ್ ನಲ್ಲಿದ್ದ 9 ಲಕ್ಷ ಹಣವನ್ನ ದೂರುದಾರರಿಗೆ ವಾಪಸ್ ಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಂಚ ತಡವಾಗಿದ್ದರೂ ಸೈಬರ್ ಖದೀಮರು ಪಾಲಾಗುತಿತ್ತು. ಫ್ರೀಜ್ ಆದ ಹಣ ತನ್ನ ಖಾತೆಗೆ ರಿಟರ್ನ್ ಆದ ಹಿನ್ನಲೆ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆಗೆ ದೂರುದಾರರು ಧನ್ಯವಾದ ಹೇಳಿದ್ದಾರೆ. ಸಿಬ್ಬಂದಿ ತೋರಿದ ಸಮಯಪ್ರಜ್ಞೆಗೆ ಡಿಸಿಪಿ ಸಿ.ಕೆ.ಬಾಬಾ ಶ್ಲಾಘನೆ‌ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ಶೇರ್ ಮಾಡಿದ ಐಎಎಸ್ ಅಧಿಕಾರಿ..! ಟ್ವಿಟ್ಟರ್ ನಲ್ಲಿ ಏನಂದ್ರು ಗೊತ್ತಾ ಫಾಲೋವರ್ಸ್

ಯಾವ ಬ್ಯಾಂಕ್ ನವರು ಸಹ ಕರೆ ಮಾಡಿ ದಾಖಲೆ ಕೇಳುವುದಿಲ್ಲ. ಹಿರಿಯ ನಿವೃತ್ತ ಹೊಂದಿದ ವ್ಯಕ್ತಿಗಳನ್ನ ಟಾರ್ಗೆಟ್ ಮಾಡಿ ವಂಚನೆ ಹೆಚ್ಚಾಗುತ್ತಿದೆ‌.ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಡಿಸಿಪಿ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News