ಕಟ್ಟಡದ ಮೇಲಿಂದ ಬಿದ್ದು ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ನಿಧನ!

ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಅವರು ಇಂದು ಹರಿಯಾಣದ ಗುರುಗ್ರಾಮ್‌ದಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಗೀತಾಂಶ ಸೂದ್ ಜೊತೆ ರಿತೇಶ್ ಮದುವೆಯ ನಂತರ ಈ ದುರ್ಘಟನೆ ಸಂಭವಿಸಿದೆ.

Written by - Channabasava A Kashinakunti | Last Updated : Mar 10, 2023, 06:59 PM IST
  • ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್
  • ರಿತೇಶ್ ತಂದೆ ರಮೇಶ್ ಅಗರ್ವಾಲ್ ನಿಧನ
  • ಎರಡು ದಿನಗಳ ಹಿಂದೆ ಗೀತಾಂಶ ಸೂದ್ ಜೊತೆ ರಿತೇಶ್ ಮದುವೆ
ಕಟ್ಟಡದ ಮೇಲಿಂದ ಬಿದ್ದು ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ನಿಧನ! title=

ನವದೆಹಲಿ : ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಅವರು ಇಂದು ಹರಿಯಾಣದ ಗುರುಗ್ರಾಮ್‌ದಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಗೀತಾಂಶ ಸೂದ್ ಜೊತೆ ರಿತೇಶ್ ಮದುವೆಯ ನಂತರ ಈ ದುರ್ಘಟನೆ ಸಂಭವಿಸಿದೆ.

ಈ ಬಗ್ಗೆ ಮಾತಂದಿರುವ ರಿತೇಶ್ ಅಗರ್ವಾಲ್, ಹೃದಯ ಭಾರವಾಗಿದೆ, ನನ್ನ ಕುಟುಂಬ ಮತ್ತು ನಾನು, ನಮ್ಮ ಮಾರ್ಗದರ್ಶಿ ಬೆಳಕು ಮತ್ತು ಶಕ್ತಿಯಾಗಿದ್ದ ನನ್ನ ತಂದೆ ರಮೇಶ್ ಅಗರ್ವಾಲ್ ಮಾರ್ಚ್ 10 ರಂದು ನಿಧನರಾದರು ಎಂದು ಹಂಚಿಕೊಳ್ಳಲು ದುಃಖವಾಗಿದೆ. ಅವರು ಪೂರ್ಣ ಜೀವನವನ್ನು ನಡೆಸಿದರು ಮತ್ತು ನನಗೆ ಮತ್ತು ನಮ್ಮಲ್ಲಿ ಅನೇಕರಿಗೆ, ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡಿದರು. ಅವರ ನಿಧನದಿಂದ ನಮ್ಮ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ನನ್ನ ತಂದೆಯ ಸಹಾನುಭೂತಿ ಮತ್ತು ನಮ್ಮ ಕಷ್ಟದ ಸಮಯದಲ್ಲಿ ನಮ್ಮನ್ನು ಮುನ್ನಡೆಸಿದ ರೀತಿ ನನ್ನ ಕಣ್ಣ ಮುಂದಿದೆ. ಅವರ ಮಾತುಗಳು ನಮ್ಮ ಹೃದಯದಲ್ಲಿ ಆಳವಾಗಿ ಉಳಿದಿದೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News