Shooting in South Africa: ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿ, 14 ಮಂದಿ ದುರ್ಮರಣ

Shooting in South Africa: ದಕ್ಷಿಣ ಆಫ್ರಿಕಾದ ಸೊವೆಟೊ ಟೌನ್‌ಶಿಪ್‌ನಲ್ಲಿರುವ ಬಾರ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿರುವ ಸುದ್ದಿ ಮುನ್ನೆಲೆಗೆ ಬಂದಿದೆ. ತಡರಾತ್ರಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Written by - Chetana Devarmani | Last Updated : Jul 10, 2022, 02:39 PM IST
  • ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿ
  • 14 ಮಂದಿ ದುರ್ಮರಣ
  • ತಡರಾತ್ರಿ ನಡೆದ ಗುಂಡಿನ ದಾಳಿ
Shooting in South Africa: ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿ, 14 ಮಂದಿ ದುರ್ಮರಣ  title=
ದಕ್ಷಿಣ ಆಫ್ರಿಕಾ

Shooting in South Africa: ದಕ್ಷಿಣ ಆಫ್ರಿಕಾದ ಸೊವೆಟೊ ಟೌನ್‌ಶಿಪ್‌ನ ಜೋಹಾನ್ಸ್‌ಬರ್ಗ್ ಬಳಿಯ ಬಾರ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿರುವ ಸುದ್ದಿ ಮುನ್ನೆಲೆಗೆ ಬಂದಿದೆ. ನಿನ್ನೆ ರಾತ್ರಿ 12.30ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ಲೆಫ್ಟಿನೆಂಟ್ ಇಲ್ಯಾಸ್ ಮಾವೆಲಾ ತಿಳಿಸಿದ್ದಾರೆ.

12 ಮಂದಿ ಸ್ಥಳದಲ್ಲೇ ಸಾವು:

ನಾವು ಸ್ಥಳಕ್ಕೆ ಬರುವಷ್ಟರಲ್ಲಿ 12 ಮಂದಿ ಸಾವನ್ನಪ್ಪಿದ್ದರು ಎಂದು ಪೊಲೀಸ್ ಲೆಫ್ಟಿನೆಂಟ್ ತಿಳಿಸಿದ್ದಾರೆ. ಇತರ 11 ಮಂದಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಇಬ್ಬರು ನಂತರ ಸಾವನ್ನಪ್ಪಿದರು, ಸಾವಿನ ಸಂಖ್ಯೆ 14 ಕ್ಕೆ ಏರಿದೆ ಎಂದು ಮಾವೆಲಾ ಹೇಳಿದರು.

ಇದನ್ನೂ ಓದಿ: ವೈದ್ಯಲೋಕಕ್ಕೆ ಅಚ್ಚರಿ: ಅರಿವಿಲ್ಲದೇ 20 ವರ್ಷ ಮುಟ್ಟಿನ ನೋವು ಅನುಭವಿಸಿದ ಪುರುಷ!

ಗುಂಡು ಹಾರಿಸಿ ಪರಾರಿಯಾದ ದಾಳಿಕೋರರು: 

ಮಾಹಿತಿಯ ಪ್ರಕಾರ, ದಾಳಿ ನಡೆದ ಬಾರ್ ವಾಟೊದ ಒರ್ಲಾಂಡೋ ಜಿಲ್ಲೆಯಲ್ಲಿದೆ. ಇದು ಜೋಹಾನ್ಸ್‌ಬರ್ಗ್‌ನ ಅತಿದೊಡ್ಡ ವಸಾಹತು. ದಾಳಿಕೋರ ಮಧ್ಯರಾತ್ರಿ ಬಾರ್‌ಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ್ದಾನೆ. ಗುಂಡು ಹಾರಿಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ ಗಾಯಗೊಂಡ 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ:

ಪೊಲೀಸ್ ಲೆಫ್ಟಿನೆಂಟ್ ಇಲ್ಯಾಸ್ ಮಾವೆಲಾ ಮಾತನಾಡಿ, ''ಪ್ರಾಥಮಿಕ ತನಿಖೆಯಿಂದ ಬಾರ್‌ನಲ್ಲಿ ಜನರು ಮೋಜು ಮಾಡುತ್ತಿದ್ದರು. ಈ ವೇಳೆ ದಾಳಿಕೋರ ಅಲ್ಲಿಗೆ ಬಂದು ಗುಂಡು ಹಾರಿಸಲು ಆರಂಭಿಸಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ" ಎಂದಿದ್ದಾರೆ. 

ಇದನ್ನೂ ಓದಿ: Explainer: ಶ್ರೀಲಂಕಾದ ಅಧ್ಯಕ್ಷ ರಾಜೀನಾಮೆ ನೀಡಿದರೆ ಮುಂದಿನ ನಡೆ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News