Udaipur Murder Case : ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಶಿರಚ್ಛೇದವನ್ನು ಬೆಂಬಲಿಸಿದ ವ್ಯಕ್ತಿಯನ್ನು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿಯನ್ನು ನೋಯ್ಡಾ ಸೆಕ್ಟರ್ 168 ರ ಛಪ್ರೌಲಿ ಗ್ರಾಮದ ನಿವಾಸಿ ಆಸಿಫ್ ಖಾನ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಪರಾಧದ ವೀಡಿಯೊವನ್ನು ಹಂಚಿಕೊಂಡು, ಕನ್ಹಯ್ಯಾ ಲಾಲ್‌ನನ್ನು ಕೊಂದವರ ಪರವಾಗಿ ಕಾಮೆಂಟ್ ಮಾಡಿದ್ದಾನೆ ಎಂದು ವರದಿಯಾಗಿದೆ.
ಪ್ರಕರಣ ದಾಖಲಿಸಿಕೊಂಡಿದ್ದ ನೋಯ್ಡಾ ಪೊಲೀಸರು
ನೋಯ್ಡಾ ಪೊಲೀಸರು ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 505(2) ಮತ್ತು 295A ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು. ಎಕ್ಸ್‌ಪ್ರೆಸ್‌ವೇ ಕಾಲುವೆ ಪ್ರದೇಶದ ಬಳಿ ವ್ಯಕ್ತಿಯನ್ನ ಬಂಧಿಸಿದ್ದಾರೆ. ಸಧ್ಯ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬರ್ಬರ ಹತ್ಯೆಯಾದ ಕನ್ಹಯ್ಯ
ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಇಬ್ಬರು ವ್ಯಕ್ತಿಗಳು
ಟೈಲರ್ ಕನ್ಹಯ್ಯಾ ಲಾಲ್ ನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆರೋಪಿಗಳು ಗ್ರಾಹಕರ ಸೋಗಿನಲ್ಲಿ ಬಂದು, ಅಳತೆ ಮಾಡುವಾಗ ಕನ್ಹಯ್ಯಾನನ್ನು ಕೊಲೆ ಮಾಡಿದ್ದಾರೆ. ಸಧ್ಯ ಇಡೀ ದೇಶದಲ್ಲಿ ಆಕ್ರೋಶದ ವಾತಾವರಣ ನಿರ್ಮಾಣವಾದೆ.
ಕನ್ಹಯ್ಯ ಹತ್ಯೆ ನಂತರ ಉದಯಪುರದಲ್ಲಿ ಸೆಕ್ಷನ್ 144
ಉದಯಪುರದಲ್ಲಿ ವಾತಾವರಣ ಹದಗೆಡುವ ಮೊದಲೇ ನಗರದಲ್ಲಿ ಸೆಕ್ಷನ್ 144 ಹೇರಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ, ಆರೋಪಿಗಳಿಬ್ಬರೂ ಪಾಕಿಸ್ತಾನ ಮೂಲದ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.