close

News WrapGet Handpicked Stories from our editors directly to your mailbox

ಇಂದು ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನ: ನೀವು ತಿಳಿಯಬೇಕಾದ 10 ಅಪರೂಪದ ಸಂಗತಿಗಳು

ಭಾರತದ ಸ್ವಾತಂತ್ರ್ಯಹೋರಾಟವು ಹಲವಾರು ಕ್ರಾಂತಿಕಾರಿ ಹೋರಾಟಗಾರ ತ್ಯಾಗದ ಪ್ರತಿಫಲವಾಗಿ ಸ್ವಾತಂತ್ರ್ಯ ದೊರೆಯಲು ಸಾಧ್ಯವಾಗಿದೆ. ಅಂತಹ ಮಹತ್ತರ ಹೋರಾಟ ಮಾಡಿದ ಯುವಕರಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲುವವರು ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್, ಅವರು ಕೇವಲ ತಮ್ಮ 23ನೇ ವಯಸ್ಸಿನಲ್ಲಿ ಬ್ರಿಟಿಷರ ವಿರುದ್ಧದ ಕೃತ್ಯಗಳಿಗಾಗಿ ಅವರಿಗೆ ಮರಣ ದಂಡನೆ ವಿಧಿಸಲಾಯಿತು.

Updated: Sep 28, 2019 , 03:47 PM IST
ಇಂದು ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನ: ನೀವು ತಿಳಿಯಬೇಕಾದ 10 ಅಪರೂಪದ ಸಂಗತಿಗಳು

ನವದೆಹಲಿ: ಭಾರತದ ಸ್ವಾತಂತ್ರ್ಯಹೋರಾಟವು ಹಲವಾರು ಕ್ರಾಂತಿಕಾರಿ ಹೋರಾಟಗಾರ ತ್ಯಾಗದ ಪ್ರತಿಫಲವಾಗಿ ಸ್ವಾತಂತ್ರ್ಯ ದೊರೆಯಲು ಸಾಧ್ಯವಾಗಿದೆ. ಅಂತಹ ಮಹತ್ತರ ಹೋರಾಟ ಮಾಡಿದ ಯುವಕರಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲುವವರು ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್, ಅವರು ಕೇವಲ ತಮ್ಮ 23ನೇ ವಯಸ್ಸಿನಲ್ಲಿ ಬ್ರಿಟಿಷರ ವಿರುದ್ಧದ ಕೃತ್ಯಗಳಿಗಾಗಿ ಅವರಿಗೆ ಮರಣ ದಂಡನೆ ವಿಧಿಸಲಾಯಿತು.

ಸೆಪ್ಟಂಬರ್ 28 ಅವರ ಜನ್ಮ ದಿನವಾಗಿರುವ ಹಿನ್ನಲೆಯಲ್ಲಿ ಈ ಸಂದರ್ಭದಲ್ಲಿ ಅಂತಹ ಮಹಾನ್ ನಾಯಕನ ಕುರಿತಾದ ಕೆಲವು ಅಪರೂಪದ ಸಂಗತಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವುದು ಸೂಕ್ತ ಎನಿಸುತ್ತದೆ. 

  • ಭಗತ್ ಸಿಂಗ್ ಅವರು ರಾಜಕೀಯವಾಗಿ ಸಕ್ರಿಯವಾಗಿರುವ ಕುಟುಂಬದಲ್ಲಿ ಜನಿಸಿದರು, ಅಲ್ಲಿ ಅವರ ಅಜ್ಜ ಲಾಹೋರ್‌ನ ಖಲ್ಸಾ ಪ್ರೌಢ ಶಾಲೆ ಮತ್ತು ಬ್ರಿಟಿಷ್ ಸರ್ಕಾರಕ್ಕೆ ನಿಷ್ಠೆಯಾಗಿರುದನ್ನು ಒಪ್ಪಲಿಲ್ಲ. ಅದರ ಪರಿಣಾಮವಾಗಿ ಮುಂದೆ ಅವರು ಆರ್ಯ ಸಮಾಜ ಸಂಸ್ಥೆಗೆ ಸೇರಿಕೊಳ್ಳಬೇಕಾಯಿತು.
  • ಜಲಿಯನ್ ವಾಲಾ ಬಾಗ್‌ನಲ್ಲಿ ನಡೆದ ಹತ್ಯಾಕಾಂಡದಿಂದ ತೀವ್ರ ಮನ ನೊಂದಿದ್ದ ಭಗತ್ ಸಿಂಗ್ ಅವರು ರಕ್ತಸಿಕ್ತ ಸ್ಥಳಕ್ಕೆ ಭೇಟಿ ನೀಡಲು ಆಗ ಬಾಲಕ ಭಗತ್ ಸಿಂಗ್ ಶಾಲೆಯನ್ನು ಬಂಕ್ ಮಾಡುತ್ತಿದ್ದನು.
  • ಚಿಕ್ಕ ವಯಸ್ಸಿನಿಂದಲೇ ಅವರು ತಮ್ಮ ಜೀವನವನ್ನು ದೇಶಕ್ಕೆ ಅರ್ಪಿಸಲು ನಿರ್ಧರಿಸಿದ್ದರು. ಇದರ ಪರಿಣಾಮವಾಗಿ ಅವು ಮುಂದೆ ಮದುವೆಯಾಗುವುದನ್ನು ನಿರಾಕರಿಸಿ ಮನೆ ಬಿಟ್ಟು ಕಾನ್ಪುರಕ್ಕೆ ಹೋದರು. ಅಲ್ಲಿ ಅವು ಮುಂದೆ ಹಿಂದೂಸ್ತಾನ್ ಸಮಾಜವಾದಿ ರಿಪಬ್ಲಿಕನ್ ಸಂಘಕ್ಕೆ ಸೇರಿದರು.
  • ಭಗತ್ ಸಿಂಗ್ ಅವರು ಸ್ವಾತಂತ್ರ ಸಂಗ್ರಾಮದಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಗೆ ಕಾರಣರಾದರು. 
  • ಭಗತ್ ಸಿಂಗ್ ಅವರು ಕ್ರಾಂತಿಕಾರಿ ವಿಚಾರಗಳಿಗೆ ಉತ್ತೇಜನ ನೀಡಿದ ಮಾರ್ಕ್ಸ್‌ವಾದಿ ಸಿದ್ಧಾಂತಗಳಿಂದ ಅವರು ಹೆಚ್ಚು ಪ್ರಭಾವಿತರಾದರು.  
  • ಅವರು ಕೋಮುವಾದಿ ಆಧಾರದ ಮೇಲೆ ಭಾರತದ ವಿಭಜನೆಯನ್ನು ಮೊದಲೇ ಊಹಿಸಿ ಏಕತೆ ಮತ್ತು ಏಕತೆಯ ಮಹತ್ವವನ್ನು ಒತ್ತಿ ಹೇಳಿದರು. 
  • ಭಗತ್ ಸಿಂಗ್ ಅವರು ತಮ್ಮನ್ನು ಬಂದೂಕಿನಿಂದ ಗುಂಡಿಕ್ಕಿ ಸಾಯಿಸಬೇಕೆಂದಿದ್ದರು, ಆದರೆ ಅವರ ಮನವಿಯನ್ನು ತಿರಸ್ಕರಿಸಿದ ಬ್ರಿಟಿಷರು ನೇಣುಗಂಬಕ್ಕೆ ಏರಿಸಿದ್ದರು. ಈ ವಿಚಾರವನ್ನು ಅವರ ಕೊನೆಯ ಲಿಖಿತ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.    
  • ಭಗತ್ ಸಿಂಗ್  ಮತ್ತು ಆಗ ಅವರ ಸಹಚರರು ಸಂಸತ್ತಿನಲ್ಲಿ ಬಾಂಬ್ ಎಸೆದು ತಮ್ಮ ವಿಚಾರವನ್ನು ಬ್ರಿಟಿಷರಿಗೆ ತಿಳಿಸುವ ಸಲುವಾಗಿ ಬಂಧನಕ್ಕೆ ಒಳಗಾದರು. ಆದರೆ ಅವರ ಉದ್ದೇಶ ನೋವನ್ನುಂಟು ಮಾಡುವುದಾಗಿರಲ್ಲ ಬದಲಾಗಿ ಸ್ವಾತಂತ್ರದ ಕುರಿತಾಗಿ ತಮ್ಮ ವಿಚಾರವನ್ನು ತಿಳಿಸುವುದಾಗಿತ್ತು. 
  • ಮುಂದೆ ಭಗತ್ ಸಿಂಗ್ ಬ್ರಿಟಿಷ್ ಪೋಲಿಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದಿದ್ದಕ್ಕಾಗಿ ಅವರಿಗೆ ಶಿಕ್ಷೆಯನ್ನು ವಿಧಿಸಲಾಯಿತು. ಮುಂದೆ ಭಗತ್ ಸಿಂಗ್ ಅವರನ್ನು  ಮಾರ್ಚ್ 23, 1931 ರಂದು ಅವರನ್ನು ಸಂಜೆ 7.30 ಕ್ಕೆ ಗಲ್ಲಿಗೇರಿಸಲಾಯಿತು ಮತ್ತು ಜೈಲಿನ ಅಧಿಕಾರಿಗಳು ಸಟ್ಲೆಜ್ ನದಿಯ ದಡದಲ್ಲಿ ರಹಸ್ಯವಾಗಿ ಅಂತ್ಯಕ್ರಿಯೆ ಮಾಡಿದರು.