ಇಂದಿನಿಂದ ಮರದ ಅಂಬಾರಿ ಹೊತ್ತು ತಾಲೀಮು ನಡೆಸಲಿರುವ ಅರ್ಜುನ

ವಿಶ್ವ ವಿಖ್ಯಾತ ಮೈಸೂರು ದಸರಾ ಸಮಾರಂಭದಲ್ಲಿ ಅಂಬಾರಿ ಹೊರುವ ಅರ್ಜುನನಿಗೆ ಇಂದಿನಿಂದ ತಾಲೀಮು ನಡೆಸಲಾಗುತ್ತಿದೆ.

Last Updated : Sep 18, 2017, 12:17 PM IST
ಇಂದಿನಿಂದ ಮರದ ಅಂಬಾರಿ ಹೊತ್ತು ತಾಲೀಮು ನಡೆಸಲಿರುವ ಅರ್ಜುನ title=

ಮೈಸೂರು: ಜಗತ್ಪ್ರಸಿದ್ದ ಮೈಸೂರು ದಸರಾಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಇಂದಿನಿಂದ ಮರದ ಅಂಬಾರಿ ಹೊರಿಸಿ ಅಭ್ಯಾಸ ನಡೆಸಲಾಗುತ್ತಿದೆ. ಅರ್ಜುನನ ಬೆನ್ನಿಗೆ ಮರದ ಅಂಬಾರಿ ಇರಿಸಿ ತಾಲೀಮು ನಡೆಸಲಾಗುತ್ತಿದೆ. 

ಜಂಬೂ ಸವಾರಿಯಲ್ಲಿ ಅರ್ಜುನ 750ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಬೇಕಾಗಿರುವುದರಿಂದ ಇಂದಿನಿಂದ 250 ಕೆಜಿ ತೂಕದ ಮರದ ಅಂಬಾರಿ ಮತ್ತು 500ಕೆಜಿ ತೂಕದ ಮರಳಿನ ಮೂಟೆಗಳನ್ನು ಅರ್ಜುನನ ಬೆನ್ನಿಗೆ ಕಟ್ಟಿ ತಾಲೀಮು ನಡೆಸಲಾಗುತ್ತಿದೆ. ಅರ್ಜುನನಿಗೆ ವಿಜಯ ಮತ್ತು ವರಲಕ್ಷ್ಮಿ ಸಾಥ್ ನೀಡಲಾಗುತ್ತಿದೆ.

ಮತ್ತೊಂದೆಡೆ ಜಂಬೂ ಸವಾರಿಯಲ್ಲಿ ಪಾಲ್ಗೊಳುವ ಎಲ್ಲಾ ಆನೆಗಳಿಗೂ ಸಹ ಅಭ್ಯಾಸ ನಡೆಸಲಾಗುತ್ತಿದೆ. ದಿಸಿಎಫ್ ಏಡುಕುಂಡಲ, ಆನೆ ವೈದ್ಯ ಡಾ.ನಾಗರಾಜ್ ಮರದ ಅಂಬಾರಿಗೆ ಪೂಜೆ ಸಲ್ಲಿಸುವ ಮೂಲಕ ತಾಲೀಮು ನಡೆಸಲು ಚಾಲನೆ ನೀಡಿದರು.

Trending News