Diwali 2020: ಇಂದು ನಿಮ್ಮ ವೃತ್ತಿಗೆ ಅನುಗುಣವಾಗಿ ಲಕ್ಷ್ಮಿ ಪೂಜೆ ಮಾಡಿ, ಇಲ್ಲಿದೆ ಶುಭ ಮುಹೂರ್ತದ ಡಿಟೇಲ್ಸ್

ಇಂದು ನವೆಂಬರ್ 14. ಇಡೀ ದೇಶಾದ್ಯಂತ ದೀಪಗಳ ಹಬ್ಬ ದೀಪಾವಳಿಯ ಸಡಗರ ಸಂಭ್ರಮ ಮನೆಮಾಡಿದೆ. ಇಂದಿನ ಶುಭ ಅವಸರದಂದು ನೀವು ನಿಮ್ಮ ವೃತ್ತಿಗೆ ಅನುಗುಣವಾಗಿ ಮಹಾಲಕ್ಷ್ಮಿಯ ಪೂಜೆಯನ್ನು ಸಲ್ಲಿಸಿ ಅವಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ಹಾಗಾದರೆ ಬನ್ನಿ ಯಾವು ವೃತ್ತಿಯ ಜನರು ಯಾವ ಶುಭ ಮುಹೂರ್ತದಲ್ಲಿ ದೇವಿ ಲಕ್ಷ್ಮಿಗೆ ಪೂಜೆ ಸಲ್ಲಿಸಬೇಕು ಮತ್ತು ಅದರಿಂದಾಗುವ ವಿಶೇಷ ಲಾಭಗಳೇನು ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ.  

Last Updated : Nov 14, 2020, 10:42 AM IST
Diwali 2020: ಇಂದು ನಿಮ್ಮ ವೃತ್ತಿಗೆ ಅನುಗುಣವಾಗಿ ಲಕ್ಷ್ಮಿ ಪೂಜೆ ಮಾಡಿ, ಇಲ್ಲಿದೆ ಶುಭ ಮುಹೂರ್ತದ ಡಿಟೇಲ್ಸ್ title=

ನವದೆಹಲಿ: ಇಂದು ನವೆಂಬರ್ 14. ದೇಶಾದ್ಯಂತ ದೀಪಾವಳಿ (Diwali 2020) ಹಬ್ಬದ ಆಚರಣೆಯ ಸಡಗರ ಸಂಭ್ರಮದಿಂದ ಮಾಡಲಾಗುತ್ತದೆ. ಹಿಂದೂ ಧರ್ಮಶಾಸ್ತ್ರಗಳ ಅನುಸಾರ ಇದು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದು. ಕಾರ್ತಿಕ ತಿಂಗಳ ಅಮಾವಾಸ್ಯೆಯ ದಿನ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇಂದು ಕಾರ್ತಿಕ ಅಮಾವಾಸ್ಯೆ ಮಧ್ಯಾಹ್ನ 2.00 ರಿಂದ 2.25ರವರೆಗೆ ಪ್ರಾರಂಭವಾಗಲಿದ್ದು, ಇದು ನವೆಂಬರ್ 15ರ ಭಾನುವಾರ ಬೆಳಗ್ಗೆ 10.07ರವರೆಗೆ ಇರಲಿದೆ. ಇಂದು ಸ್ವಾತಿ ನಕ್ಷತ್ರ ಸೂರ್ಯೋದಯದಿಂದ ರಾತ್ರಿ 08.09ರವರೆಗೆ ಇರಲಿದೆ. ಹೀಗಾಗಿ ಇಂದು ನಾವು ನಿಮಗೆ ನಿಮ್ಮ ವೃತ್ತಿಗೆ ಅನುಗುಣವಾಗಿ ದೀಪಾವಳಿ ಪೂಜೆಯ ಶುಭ ಮುಹೂರ್ತದ ಕುರಿತು ಹೇಳಲಿದ್ದೇವೆ. ಈ ಶುಭ ಮುಹೂರ್ತದಲ್ಲಿ ನೀವೂ ಕೂಡ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿ ವಿಶೇಷ ಲಾಭ ಪಡೆಯಬಹುದು.

ಇದನ್ನು ಓದಿ- ದೀಪಾವಳಿ ಹಬ್ಬದಂದು ಸಂಜೆ ವೇಳೆ ಇವುಗಳನ್ನು ಕಂಡರೆ ಬದಲಾಗುತ್ತೆ ನಿಮ್ಮ ಅದೃಷ್ಟ

ವೃಶ್ಚಿಕ ಲಗ್ನ
ಇಂದು ಬೆಳಗ್ಗೆ 06.58 ನಿಮಿಷದಿಂದ 10.15 ರವರೆಗೆ ವೃಶ್ಚಿಕದ ಬಳಿಕ ಧನು ಲಗ್ನ ಇರಲಿದೆ. ವೃಶ್ಚಿಕ ಲಗ್ನದಲ್ಲಿ ಕೇತು ಹಾಗೂ ಧನು ಲಗ್ನದಲ್ಲಿ ಬೃಹಸ್ಪತಿ ತಮ್ಮ ತಮ್ಮ ಮನೆಯಲ್ಲಿ ವಿರಾಜಮಾನರಾಗಿದ್ದಾರೆ. ಈ ಲಗ್ನದಲ್ಲಿ ಆಟೋಮೊಬೈಲ್, ವರ್ಕ್ ಶಾಪ್, ತಾಮ್ರ. ಹಿತ್ತಾಳೆ, ಕಂಚು ಹಾಗೂ ಸ್ಟೀಲ್ ಉದ್ಯಮದಲ್ಲಿ ತೊಡಗಿರುವವರು ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿದರೆ ದೇವಿ ಪ್ರಸನ್ನಳಾಗುತ್ತಾಳೆ.

ಧನು ಲಗ್ನ
ಕೆಲ ವ್ಯಾಪಾರಿಗಳಿಗೆ ದೀಪಾವಳಿ ಪೂಜೆಗಾಗಿ ಧನು ಲಗ್ನ ಎಲ್ಲಕ್ಕಿಂತ ಉತ್ತಮವಾಗಿದೆ. ಆದರೆ ಯುತ ಲಗ್ನ ಕೂಡ ತುಂಬಾ ಬಲಿಷ್ಟವಾಗಿದೆ. ಹೀಗಾಗಿ ವೈದ್ಯರು, ಹೋಟೆಲ್ ಉದ್ಯಮದಲ್ಲಿ ಮತ್ತು ಟ್ರಾನ್ಸ್ಪೋರ್ಟ್ ಉದ್ಯಮದಲ್ಲಿ ತೊಡಗಿರುವ ವ್ಯಾಪಾರಿಗಳು ಈ ಮುಹೂರ್ತದಲ್ಲಿ ಲಕ್ಷ್ಮಿ ಪೂಜೆ ಮಾಡುವುದು ಉತ್ತಮ.

ಇದನ್ನು ಓದಿ- Diwali 2020: ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲು ಈ ಬಾರಿ ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ರಂಗೋಲಿ ಬಿಡಿಸಿ

ಅಭಿಜೀತ ಮುಹೂರ್ತ
ದೀಪಾವಳಿಯ ದಿನ ಬೆಳಗ್ಗೆ 11.21 ರಿಂದ ಮಧ್ಯಾಹ್ನ 01.02 ರವರೆಗೆ ಮಕರ ಲಗ್ನ ಇರಲಿದೆ. ಈ ಮುಹೂರ್ತದಲ್ಲಿ ವಕೀಲರು, ಅಕೌಂಟೆಂಟ್ ಹಾಗೂ ಪ್ರಾಪರ್ಟಿ ಡೀಲರ್ ಗಳು ಲಕ್ಷ್ಮಿಗೆ ಪೂಜೆ ಸಲ್ಲಿಸಿದರೆ ಉತ್ತಮ.

ಕುಂಭ ಹಾಗೂ ಮೀನ ಲಗ್ನ
ಇಂದು ಮಧ್ಯಾಹ್ನ 01.03 ರಿಂದ 02.30 ರವರೆಗೆ ಕುಂಭ ಲಗ್ನ ಹಾಗೂ 03.54  ಗಂಟೆಯ ವರೆಗೆ ಮೀನ ಲಗ್ನ ಇದೆ. ಇದು ಮಂಗಳ-ಶುಕ್ರರ ದೆಸೆ ಹೊಂದಿರುವುದಿಂದ ಅನೇಕ ದೋಷಗಳನ್ನು ದೂರ ಮಾಡುತ್ತದೆ. ಈ ಶುಭ ಮುಹೂರ್ತದಲ್ಲಿ ದೀಪಾವಳಿಯ ಲಕ್ಷ್ಮಿ ಪೂಜೆ ಮಾಡಿಸುವವರು ಹಾಗೂ ಮಾಡುವವರು ಇಬ್ಬರಿಗೂ ಕೂಡ ಮಾಲಾಮಾಲ್ ಆಗಲಿದ್ದಾರೆ. ಮೀನ ಲಗ್ನದಲ್ಲಿ ಫೈನಾನ್ಸರ್ ಹಾಗೂ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುವವರು ಪೂಜೆ ಸಲ್ಲಿಸಿದರೆ ಶುಭಕರ.

ಇದನ್ನು ಓದಿ- Diwali 2020: ಈ ದೀಪಾವಳಿ ವಾಸ್ತುಶಾಸ್ತ್ರದ ಪ್ರಕಾರ ತೋರಣ ಹಚ್ಚಿ, ಸಫಲತೆ ಹಾಗೂ ಸಮೃದ್ಧಿಯ ಬಾಗಿಲು ತೆರೆಯಿರಿ

ಪ್ರದೋಷ ಕಾಲ
ದೀಪಾವಳಿಯ ಮಾಹಾಲಕ್ಷ್ಮಿ ಪೂಜೆಯ ವೇಳೆ ಪ್ರದೋಷ ಕಾಲಕ್ಕೆ ಹೆಚ್ಚಿನ ಮಹತ್ವವಿದೆ. ಇದು ಸಂಜೆ 5.28 ರಿಂದ 07.52ರವರೆಗೆ ಇರಲಿದೆ. ಪ್ರದೋಷ ಕಾಲದಲ್ಲಿ ವೃಷ ಲಗ್ನ ಸ್ಥರವಾದ ಲಗ್ನವಾಗಿದೆ. ಈ ಪ್ರದೋಷ ಕಾಲದಲ್ಲಿ ವಿಶಾಖಾ ನಕ್ಷತ್ರದಿಂದ ನಿರ್ಮಾಣಗೊಂಡ ನಾಲ್ಕು ಯೋಗಗಳು ವ್ಯಾಪಾರಿಗಳಿಗೆ ದೀಪಾವಳಿ, ಮಹಾಲಕ್ಷ್ಮಿ, ಕುಬೇರ, ತಕ್ಕಡಿ ಇತ್ಯಾದಿಗಳ ಪೂಜೆಗೆ ಕಲ್ಯಾಣಕಾರಿ ಎಂದು ಸಾಬೀತಾಗುತ್ತದೆ.

ಕರ್ಕ ಲಗ್ನ 
ಈ ಮುಹೂರ್ತ ರಾತ್ರಿ 10.30 ರಿಂದ 11.50ರವರೆಗೆ ಇರಲಿದೆ. ಉತ್ತರ ರಾತ್ರಿ ಲಗ್ನವಾಗಿರುವ ಸಿಂಹ ಲಗ್ನ ರಾತ್ರಿ 12.05 ರಿಂದ 02.22ರವರೆಗೆ ಇರಲಿದೆ. ಈ ಶುಭ ಲಗ್ನದಲ್ಲಿ ಮಹಾ ಲಕ್ಷ್ಮಿಗೆ ಪೂಜೆ ಸಲ್ಲಿಸುವುದರಿಂದ ವ್ಯಾಪಾರದಲ್ಲಿ ಭಾರಿ ಪ್ರಗತಿಯಾಗಲಿದೆ.

Trending News