ದೀಪಾವಳಿ ಹಬ್ಬದಂದು ಸಂಜೆ ವೇಳೆ ಇವುಗಳನ್ನು ಕಂಡರೆ ಬದಲಾಗುತ್ತೆ ನಿಮ್ಮ ಅದೃಷ್ಟ

              

  • Nov 14, 2020, 07:57 AM IST

ಅರಿಶಿನವನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಅರಿಶಿನದಿಂದ ಅಲಂಕೃತಗೊಂಡಿರುವ ಹಸುವನ್ನು ನೋಡುವುದರಿಂದ ನಿಮ್ಮ ಕಷ್ಟಗಳು ದೂರವಾಗಿ  ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲಸುತ್ತದೆ.

1 /6

ಬೆಂಗಳೂರು: ದೀಪಾವಳಿ ಹಬ್ಬವನ್ನು ಎಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಪವಿತ್ರ ಹಬ್ಬದಲ್ಲಿ  ಲಕ್ಷ್ಮೀದೇವಿಯನ್ನು ಪೂಜಿಸಲಾಗುತ್ತದೆ. ಇದರಿಂದಾಗಿ ತಾಯಿ ಲಕ್ಷ್ಮಿಯ ಆಶೀರ್ವಾದದಿಂದ  ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ದೀಪಾವಳಿಯ ದಿನದಂದು ಸಂಜೆ ಲಕ್ಷ್ಮೀ ಪೂಜೆಯ ಬಳಿಕ ಕೆಲವು ಪ್ರಾಣಿಗಳನ್ನು ಕಂಡರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಕೆಲವು ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಧರ್ಮಗ್ರಂಥಗಳ ಪ್ರಕಾರ ದೀಪಾವಳಿಯ ಸಂಜೆ ಇವುಗಳನ್ನು ಕಂಡರೆ ನಿಮ್ಮ ಅದೃಷ್ಟ ಬದಲಾಗುತ್ತದೆ.

2 /6

ಹಿಂದೂ ಧರ್ಮದಲ್ಲಿ ಹಸುವಿಗೆ ತಾಯಿಯ ಸ್ಥಾನಮಾನ ನೀಡಲಾಗುತ್ತದೆ. 33 ಕೋಟಿ ದೇವತೆಗಳು ಹಸುವಿನಲ್ಲಿ ವಾಸಿಸುತ್ತಾರೆ ಎಂದು ನಂಬಲಾಗಿದೆ. ಧರ್ಮಗ್ರಂಥಗಳ ಪ್ರಕಾರ ದೀಪಾವಳಿಯ ಸಂಜೆ ನೀವು ಅರಿಶಿನದಿಂದ ಅಲಂಕೃತಗೊಂಡಿರುವ ಹಸುವನ್ನು ನೋಡುವುದರಿಂದ ನಿಮ್ಮೊಂದಿಗೆ ದೇವರ ಆಶೀರ್ವಾದವಿದೆ ಎಂದರ್ಥ. ಇದರಿಂದ ನಿಮ್ಮ ಕಷ್ಟಗಳು ದೂರವಾಗಿ  ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬುದರ ಸಂಕೇತವಾಗಿದೆ. 

3 /6

ಧರ್ಮಗ್ರಂಥಗಳ ಪ್ರಕಾರ ದೀಪಾವಳಿ ದಿನದಂದು ನಿಮ್ಮ ಮನೆಯಲ್ಲಿ ಅಥವಾ ಮನೆಯ ಮುಂದೆ ಹೆಗ್ಗಣವನ್ನು ಕಂಡರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ನೀವು ತುಂಬಾ ಅದೃಷ್ಟವಂತರು ಮತ್ತು ಹಣಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳಲಿವೆ ಎಂಬುದು ನಂಬಿಕೆಯಾಗಿದೆ.  

4 /6

ಗೂಬೆ ಲಕ್ಷ್ಮೀದೇವಿಯ ವಾಹನ. ಗೂಬೆಗಳು ರಾತ್ರಿಯಲ್ಲಿ ಎಚ್ಚರಗೊಂಡು ಹಗಲಿನಲ್ಲಿ ಮಲಗುತ್ತವೆ. ಗೂಬೆ ಕತ್ತಲಲ್ಲಿ ಸಂಚರಿಸುತ್ತದೆ. ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಯಾವಾಗ, ಹೇಗೆ ಸಂಚರಿಸುತ್ತದೆ ಎಂದು ಯಾರಿಗೂ ಗೊತ್ತೇ ಆಗುವುದಿಲ್ಲ. ಲಕ್ಷ್ಮೀ ಕೂಡ ಹಾಗೆಯೇ ಯಾವಾಗ ಯಾರ ಮನೆಯ ಅದೃಷ್ಟದ ಬಾಗಿಲನ್ನು ತೆರೆಯುತ್ತಾಳೆ ಎಂದು ಯಾರಿಗೂ ತಿಳಿಯುವುದಿಲ್ಲ. ಆದ್ದರಿಂದ ದೀಪಾವಳಿಯಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ ನೀವು ಗೂಬೆಯನ್ನು ನೋಡಿದರೆ, ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯಲ್ಲಿ ಗೂಬೆ ಕಾಣಿಸಿಕೊಳ್ಳುವುದರಿಂದ ಕ್ರಮೇಣ ನಿಮ್ಮ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಮನೆಯಲ್ಲಿ ಲಕ್ಷ್ಮೀ ನೆಲೆಸಿ ಸಂತೋಷ ಇರುತ್ತದೆ ಎಂಬ ನಂಬಿಕೆಯಿದೆ.

5 /6

ಬಹಳಷ್ಟು ಜನರಿಗೆ ಕಪ್ಪು ಬೆಕ್ಕನ್ನು ಕಂಡರೆ ಭಯವಾಗುತ್ತದೆ. ನೀವು ಅದನ್ನು ಭಯದಿಂದ ಓಡಿಸುತ್ತೀರಿ. ಆದರೆ ಪುರಾಣಗಳಲ್ಲಿ ದೀಪಾವಳಿ ದಿನದಂದು ಬೆಕ್ಕು ಮನೆಗೆ ಭೇಟಿ ನೀಡುವುದು ಶುಭವೆಂದು ಪರಿಗಣಿಸಲಾಗಿದೆ. ಲಕ್ಷ್ಮೀ ಪೂಜೆ ಸಮಯದಲ್ಲಿ ನಿಮ್ಮ ಮನೆಗೆ ಕಪ್ಪು ಬೆಕ್ಕು ಬಂದರೆ ಅದನ್ನು ಅದೃಷ್ಟ ಎಂದು ಪರಿಗಣಿಸಿ. ದೀಪಾವಳಿಯಂದು ಕಪ್ಪು ಬೆಕ್ಕನ್ನು ಕಂಡರೆ ನಿಮ್ಮ ಆರ್ಥಿಕ ಸಂಕಷ್ಟ ದೂರವಾದಂತೆ.  ಅದೇ ಸಮಯದಲ್ಲಿ ನೀವು ದೀಪಾವಳಿಯಂದು ಕಪ್ಪು ಬೆಕ್ಕನ್ನು ಓಡಿಸಲು ಬೆನ್ನಟ್ಟಿದರೆ, ನೀವು ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬಹುದು ಎಂದು ಹೇಳಲಾಗುತ್ತದೆ. Diwali 2020: ದೀಪಾವಳಿಯಂದು ಈ ರತ್ನಗಳನ್ನು ಧರಿಸಿ ನಿಮ್ಮ ಹಣಕಾಸಿನ ಸಮಸ್ಯೆ ನಿವಾರಿಸಿ

6 /6

ಜನರು ಹಲ್ಲಿಯನ್ನು ನೋಡಿ ಹೆದರುತ್ತಾರೆ. ಆದರೆ ಲಕ್ಷ್ಮಿ ಪೂಜೆಯ ನಂತರ ಹಲ್ಲಿ ಮನೆಯ ಯಾವುದೇ ಭಾಗದಲ್ಲಿ ಕಂಡುಬಂದರೆ ಅದು ತಾಯಿ ಲಕ್ಷ್ಮಿಯ ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ.