ಈ ಗ್ರಾಮದಲ್ಲಿ ರಾತ್ರಿ ಹೊತ್ತಲ್ಲಿ 'ಗಾಳಿಪಟ' ಹಾರಿಸಲು ಕಾರಣ...

ರಾತ್ರಿಯಲ್ಲಿ ಗಾಳಿಪಟಗಳನ್ನು ಹಾರಿಸುವ ಸಂಪ್ರದಾಯವು ಬಕ್ರೋಲ್ ಗ್ರಾಮದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಹಳ್ಳಿಯ ಜನರು ತಮ್ಮ ಛಾವಣಿಯ ಮೇಲೆ ದೀಪಗಳನ್ನು ಜೋಡಿಸಿ ಗಾಳಿಪಟ ಹಾರಿಸುತ್ತಾರೆ. 

Last Updated : Jan 15, 2020, 02:54 PM IST
ಈ ಗ್ರಾಮದಲ್ಲಿ ರಾತ್ರಿ ಹೊತ್ತಲ್ಲಿ 'ಗಾಳಿಪಟ' ಹಾರಿಸಲು ಕಾರಣ... title=

ಪ್ರತಿ ಹಬ್ಬಕ್ಕೂ ತನ್ನದೇ ಆದ ಆಚಾರ, ವಿಚಾರ, ಸಂಪ್ರದಾಯವಿದೆ. ಅಂತೆಯೇ ಪ್ರತಿ ಗ್ರಾಮವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅದೇ ರೀತಿ ಗುಜರಾತ್‌ನ ಆನಂದ್‌ನ ಬಕ್ರೋಲ್ ಗ್ರಾಮದಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ ಜನರು ರಾತ್ರಿಯಿಡೀ ಗಾಳಿಪಟಗಳನ್ನು ಹಾರಿಸುತ್ತಾರೆ. ರಾತ್ರಿಯಲ್ಲಿ ಗಾಳಿಪಟಗಳನ್ನು ಹಾರಿಸುವ ಸಂಪ್ರದಾಯವು ಬಕ್ರೋಲ್ ಗ್ರಾಮದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ.  ಹಳ್ಳಿಯ ಜನರು ತಮ್ಮ ಛಾವಣಿಯ ಮೇಲೆ ದೀಪಗಳನ್ನು ಜೋಡಿಸಿ ಗಾಳಿಪಟ ಹಾರಿಸುತ್ತಾರೆ. 

ಅಷ್ಟಕ್ಕೂ ಇಲ್ಲಿನ ಜನರು ರಾತ್ರಿ ಹೊತ್ತಲ್ಲಿ ಗಾಳಿಪಟ ಹಾರಿಸಲು ಕಾರಣ ಏನೆಂದು ತಿಳಿದರೆ ನಿಮಗೂ ಆಶ್ಚರ್ಯವಾಗುತ್ತೆ. ಬೆಳಕಿನ ಸಮಯದಲ್ಲಿ ಗಾಳಿಪಟ ಹಾರಿಸುವುದರಿಂದ ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಆದರೆ ರಾತ್ರಿ ವೇಳೆ ಹೆಚ್ಚಿನ ಪಕ್ಷಿಗಳು ತಮ್ಮ ಗೂಡುಗಳಿಗೆ ಹೋಗುತ್ತವೆ. ಪಕ್ಷಿಗಳು ಗಾಯಗೊಳ್ಳುವ ಅಥವಾ ಅವುಗಳನ್ನು ಕೊಲ್ಲುವ ಅಪಾಯ ತಪ್ಪುತ್ತದೆ. ಹಾಗಾಗಿ ರಾತ್ರಿಯಿಡೀ ಗಾಳಿಪಟ ಹಾರಿಸಲಾಗುತ್ತದೆ ಎಂದು ಇಲ್ಲಿನ ಜನ ಹೇಳುತ್ತಾರೆ. 

ರಾತ್ರಿ ಸಮಯದಲ್ಲಿ ಗಾಳಿಪಟ ಹಾರಿಸುವುದರಿಂದ ಅನೇಕ ಪಕ್ಷಿಗಳ ಜೀವವನ್ನು ಉಳಿಸಬಹುದು. ಸಾಮಾನ್ಯವಾಗಿ ಜನರು ಹಗಲಿನಲ್ಲಿ ಹಾರುವ ಗಾಳಿಪಟಗಳನ್ನು ಆನಂದಿಸುತ್ತಾರೆ, ಆದರೆ ಬಕ್ರೋಲ್ ಗ್ರಾಮದ ಜನರು ರಾತ್ರಿಯಲ್ಲಿ ಗಾಳಿಪಟ ಹಾರುವ ಮೂಲಕ ಉತ್ತರಾಯಣ ಹಬ್ಬವನ್ನು ಆಚರಿಸುತ್ತಾರೆ. ಈ ಹಳ್ಳಿಯ ಅನೇಕ ಜನರು ಅಮೆರಿಕ, ಯುಕೆ, ಕೆನಡಾದಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಎನ್‌ಆರ್‌ಐ ಕುಟುಂಬಗಳು ಸಹ ಉತ್ತರಾಯಣದ ಸಂದರ್ಭದಲ್ಲಿ ಗ್ರಾಮಕ್ಕೆ ಬಂದು ಗಾಳಿಪಟ ಹಾರಾಟದಲ್ಲಿ ಭಾಗವಹಿಸುತ್ತವೆ.

ದೂರದಿಂದಲೂ ಬಕ್ರೋಲ್ ಗ್ರಾಮದ ಈ ವೈಶಿಷ್ಟ್ಯವನ್ನು ನೋಡಲು ಜನರು ಬರುತ್ತಾರೆ. ಜನರು ರಾತ್ರಿಯಲ್ಲಿ ಒಟ್ಟಿಗೆ ಸೇರಿಕೊಂಡು ರಾತ್ರಿ ಉತ್ತರಾಯಣವನ್ನು ಆನಂದಿಸುತ್ತಾರೆ. ಇದರಲ್ಲಿ, ಪಕ್ಷಿಗಳಿಗೆ ಹಾನಿಯಾಗದಂತೆ ಅನೇಕ ಜನರು ವಿಶೇಷ ಕಾಳಜಿ ವಹಿಸುತ್ತಾರೆ. 
'ಬದುಕು ಬದುಕಲು ಬಿಡು' ಎಂಬಂತೆ ಈ ಗ್ರಾಮದ ಜನರ ಇಂತಹ ಸಂಪ್ರದಾಯ ಇತರರಿಗೆ ಸ್ಫೂರ್ತಿ ಎಂದರೆ ತಪ್ಪಾಗಲಾರದು.

Trending News