ನವದೆಹಲಿ: ಬರುವ ಭಾನುವಾರ ಆಷಾಢ ಪೌರ್ಣಿಮೆ ಅಥವಾ ಗುರು ಪೌರ್ಣಿಮೆ ಇದೆ. ಈ ದಿನ ಕಳೆದ ಚಂದ್ರಗ್ರಹಣದ ಬರೋಬ್ಬರಿ ಒಂದು ತಿಂಗಳ ಬಳಿಕ ಮತ್ತೆ ಜುಲೈ 5ಕ್ಕೆ ಚಂದಿರನಿಗೆ ಗ್ರಹಣ ಹಿಡಿಯಲಿದೆ. ಆದರೆ, ಈ ಚಂದ್ರಗ್ರಹಣದ ತಾತ್ಕಾಲಿಕ ಪ್ರಭಾವ ಭಾರತದಲ್ಲಿ ನಾವು ನೋಡಲಾಗುವುದಿಲ್ಲ. ವಿಶ್ವದ ಇತರೆ ಭಾಗಗಳಲ್ಲಿ ಈ ಚಂದ್ರ ಗ್ರಹಣ ಬೆಳಗ್ಗೆ 8.37 ಕ್ಕೆ ಆರಂಭಗೊಳ್ಳಲಿದೆ. ಬೆಳಗ್ಗೆ 9.59 ಕ್ಕೆ ಗ್ರಹಣ ಉಚ್ರಾಯ ಸ್ಥಿತಿಗೆ ತಲುಪಲಿದ್ದು, ಬೆಳಗ್ಗೆ 11.37ಕ್ಕೆ ಇದು ಅಂತ್ಯವಾಗಲಿದೆ. ಈ ಗ್ರಹಣದ ಒಟ್ಟು ಅವಧಿ 2 ಗಂಟೆ 43 ನಿಮಿಷ 44 ಸೆಕೆಂಡ್ ಗಳಾಗಿರಲಿದೆ.
ವರ್ಷವಿಡಿ ವಿವಿಧ ಒಟ್ಟು 6 ಗ್ರಹಣಗಳನ್ನು ಹೊತ್ತು ತಂದ ವರ್ಷ 2020 ರ ಜುಲೈ ತಿಂಗಳು ಇದೀಗ ಮತ್ತೊಂದು ಗ್ರಹಣಕ್ಕೆ ಸಾಕ್ಷಿಯಾಗಲಿದೆ. ಈ ಬಾರಿ ಜುಲೈ 5ಕ್ಕೆ ಅಂದರೆ ಗುರುಪೌರ್ಣಿಮೆಯ ದಿನ ಚಂದಿರನಿಗೆ ಗ್ರಹಣ ಹಿಡಿಯಲಿದೆ. ಕಳೆದ ಜೂನ್ 5 ರಂದು ಚಂದ್ರಗ್ರಹಣ ಸಂಭವಿಸಿದ್ದು, ಜೂನ್ 21ರಂದು ಸೂರ್ಯ ಗ್ರಹಣ ಸಂಭವಿಸಿತ್ತು. ಈ ಬಾರಿಯ ಚಂದ್ರಗ್ರಹಣ ತನ್ನೊಂದಿಗೆ ಹಲವು ಸಣ್ಣ ಹಾಗೂ ದೊಡ್ಡ ಪ್ರಭಾವಗಳನ್ನು ಹೊತ್ತು ತರಲಿದೆ.
ಸೂತಕ ಕಾಲ ಪ್ರಭಾವಶಾಲಿಯಾಗಿರುವುದಿಲ್ಲ
ಈ ಬಾರಿಯ ಚಂದ್ರ ಗ್ರಹಣ ಗುರುಪೌರ್ಣಿಮೆಯ ದಿನ ಸಂಭವಿಸಲಿದೆ. ಈ ಗ್ರಹಣದ ವಿಶೇಷತೆ ಎಂದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಹೀಗಾಗಿ ಭಾರತದಲ್ಲಿ ಇದರ ಸೂತಕ ಕಾಲ ಕೂಡ ಪ್ರಭಾವಶಾಲಿಯಾಗಿರುವುದಿಲ್ಲ.
ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣ ಧನು ರಾಶಿಯಲ್ಲಿ ಸಂಭವಿಸಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಜೂನ್ 30ರಂದೇ ದೇವ ಗುರು ಬೃಹಸ್ಪತಿ ಧನು ರಾಶಿಗೆ ಪ್ರವೇಶಿಸಿದ್ದಾರೆ. ಈ ರಾಶಿಯಲ್ಲಿ ರಾಹು ಮೊದಲಿನಿಂದಲೇ ವಿರಾಜಮಾನನಾಗಿದ್ದಾನೆ. ಇಂತಹುದರಲ್ಲಿ ಗ್ರಹಣದ ವೇಳೆ ಬೃಹಸ್ಪತಿಯ ಮೇಲೆ ರಾಹುವಿನ ದೃಷ್ಟಿ ಧನು ರಾಶಿಯ ಮೇಲೆ ನೇರ ಪ್ರಭಾವ ಬೀರಲಿದೆ.
ಚಂದ್ರ ಸ್ವಲ್ಪ ಶಕ್ತಿಹೀನನಾದ ಕಾರಣ ಈ ರಾಶಿಯ ಜನರು ಸ್ವಲ್ಪ ಕಷ್ಟ ಕಾಲ ಎದುರಿಸಬೇಕಾಗಿ ಬರಲಿದೆ. ಚಂದ್ರಗ್ರಹಣದ ವೇಳೆ ಮನಸ್ಸು ಅಶಾಂತವಾಗಿರಲಿದೆ ಹಾಗೂ ನಕಾರಾತ್ಮಕ ಭಾವನೆಗಳಿಂದ ಮನಸ್ಸು ಕೂಡಿರಲಿದೆ. ಮನಸ್ಸನ್ನು ಏಕಾಗ್ರಚಿತ್ತಗೊಳಿಸಲು ನಿಮ್ಮ ಆರಾಧ್ಯ ಇಷ್ಟದೇವರ ಧ್ಯಾನ ಮಾಡಿ.