ಜೂನ್ 21ಕ್ಕೆ ಸಂಭವಿಸಲಿದೆ ವರ್ಷದ ಮೊದಲ ಸೂರ್ಯಗ್ರಹಣ, ಈ ರಾಶಿಯ ಮೇಲೆ ಹೆಚ್ಚು ಪ್ರಭಾವ ಬೀರಲಿದೆ

ಜೂನ್ 21ಕ್ಕೆ ಸಂಭವಿಸಲಿದೆ ವರ್ಷದ ಮೊದಲ ಸೂರ್ಯಗ್ರಹಣ, ಈ ರಾಶಿಯ ಮೇಲೆ ಹೆಚ್ಚು ಪ್ರಭಾವ ಬೀರಲಿದೆ

Last Updated : May 18, 2020, 06:10 PM IST
ಜೂನ್ 21ಕ್ಕೆ ಸಂಭವಿಸಲಿದೆ ವರ್ಷದ ಮೊದಲ ಸೂರ್ಯಗ್ರಹಣ, ಈ ರಾಶಿಯ ಮೇಲೆ ಹೆಚ್ಚು ಪ್ರಭಾವ ಬೀರಲಿದೆ title=

ನವದೆಹಲಿ: ಬರುವ ಜೂನ್ 21ರಂದು ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಸಾಮಾನ್ಯವಾಗಿ ಸೂರ್ಯಗ್ರಹಣವನ್ನು ಪ್ರಮುಖ ಖಗೋಳ ಘಟನೆಯಾಗಿ ನೋಡಲಾಗುತ್ತದೆ ಜೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹಣ ಎಲ್ಲ ದ್ವಾದಶ ರಾಶಿತಲ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ.

ಏಪ್ರಿಲ್ 13 ರಂದು ಸೂರ್ಯನು ಮೇಷ ರಾಶಿಗೆ ಪ್ರವೆಶಿಸಲಿದ್ದಾನೆ .ಇದನ್ನು ಮೇಷ ಸಂಕ್ರಾಂತಿ ಎಂದೂ ಕರೆಯಲಾಗುತ್ತದೆ. ಜೂನ್ 21 ರಂದು ಸೂರ್ಯಗ್ರಹಣ ಸಮಯದಲ್ಲಿ ಸುತಕ್ ಅವಧಿ ಮಾನ್ಯವಾಗಿರುತ್ತದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಮತ್ತು ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಿದ್ದಾಗ, ಈ ಪರಿಸ್ಥಿತಿಯನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.

ಗ್ರಹಣದ ಸೂತಕ ಕಾಲ 
ಸೂರ್ಯಗ್ರಹಣ ಆರಂಭವಾಗುವ 12 ಗಂಟೆ ಮೊದಲಿನ ಕಾಲವನ್ನು ಸೂತಕ ಕಾಲ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನಡೆಸಬಾರದು. ಗ್ರಹಣ ಅಂತ್ಯವಾದ ಬಳಿಕ ಸೂತಕ ಕಾಲ ಕೂಡ ಅಂತ್ಯವಾಗುತ್ತದೆ. ಈ ಅವಧಿಯ ಮುಕ್ತಾಯದ ಬಳಿಕ ಮಾತ್ರ ಶುಭ ಕಾರ್ಯಗಳನ್ನು ನೆರವೇರಿಸಬೇಕು.

ಸೂರ್ಯಗ್ರಹಣದ ಅವಧಿ 
ಜೂನ್ 21 ರಂದು ಬೆಳಗ್ಗೆ 9: 15 ಕ್ಕೆ ಸೂರ್ಯಗ್ರಹಣ ಸಂಭವಿಸಲಿದ್ದು ಮಧ್ಯಾಹ್ನ 3 ರಿಂದ 3 ನಿಮಿಷಗಳವರೆಗೆ ಇರಲಿದೆ.

ಈ ಪ್ರದೇಶಗಳಲ್ಲಿ ಗೋಚರಿಸಲಿದೆ
ಭಾರತವನ್ನು ಹೊರತುಪಡಿಸಿ, ಈ ಗ್ರಹಣವನ್ನು ಆಗ್ನೇಯ ಯುರೋಪ್, ಹಿಂದೂ ಮಹಾಸಾಗರ, ಪೆಸಿಫಿಕ್ ಮಹಾಸಾಗರ, ಆಫ್ರಿಕಾ, ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕದ ಪ್ರಮುಖ ಭಾಗಗಳಲ್ಲಿ ಕಾಣಬಹುದಾಗಿದೆ.

ಯಾವ ರಾಶಿಯ ಮೇಲೆ ಇದು ಹೆಚ್ಚು ಪ್ರಭಾವ ಬೀರಲಿದೆ
ಮಿಥುನ ರಾಶಿಯ ಮೇಲೆ ಈ ಗ್ರಹಣ ಹೆಚ್ಚಿನ ಪ್ರಭಾವ ಬೀರಲಿದೆ. ಪಂಚಾಂಗದ ಅನುಸಾರ ಜೂನ್ 21ರಂದು ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ಇರಲಿದೆ. ಈ ದಿನ ಮಿಥುನ ರಾಶಿ ಹಾಗೂ ಮ್ರುಗಶೀರಾ ನಕ್ಷತ್ರದಲ್ಲಿ ಈ ಗ್ರಹಣ ಸಂಭವಿಸಲಿದೆ. ಹೀಗಾಗಿ ಮಿಥುನ ರಾಶಿಯ ಮೇಲೆ ಈ ಗ್ರಹಣ ಅತಿ ಹೆಚ್ಚು ಪ್ರಭಾವ ಬೀರಲಿದೆ.

Trending News