Sakshi tanwar Life Story: ಬಾಲಿವುಡ್ ಹೀರೋಯಿನ್ ಗಳು ತಮ್ಮ ಸ್ಟಾರ್ ಪಟ್ಟವನ್ನು ಸಾಧಿಸಲು ಮತ್ತು ಅದನ್ನು ಉಳಿಸಿಕೊಳ್ಳಲು ಪ್ರತಿನಿತ್ಯ ಹರಸಾಹಸಪಡುತ್ತಾರೆ. ಪ್ರತಿದಿನ ಒಂದಲ್ಲಾ ಒಂದು ಫ್ಯಾಶನ್ ಬಟ್ಟೆಗಳಲ್ಲಿ ಸೋಷಿಯಲ್ ಮಿಡಿಯಾದ ಮುಂದೆ ಬಂದು ಅಭಿಮಾನಿಗಳನ್ನು ರಂಜಿಸುತ್ತಾರೆ.. ಆದರೆ ಈ ಎಲ್ಲ ಚಮತ್ಕಾರಗಳಿಂದ ದೂರ ಉಳಿದು.. ಒಳ್ಳೆ ಹೆಸರು ಗಳಿಸಿದ ನಟಿಯೊಬ್ಬರು ಇದ್ದಾರೆ.
ಅವರೇ ನಟಿ ಸಾಕ್ಷಿ ತನ್ವರ್. ನಿನ್ನೆಯಷ್ಟೇ ಇವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.. 'ಬಡೆ ಅಚ್ಚೆ ಲಗ್ತೆ ಹೈ' ಸಿರೀಯಲ್ ಮೂಲಕ ಟಿವಿ ಜಗತ್ತನ್ನು ಆಳಿದ ಸಾಕ್ಷಿ ತನ್ವಾರ್ 1973 ರಲ್ಲಿ ರಾಜಸ್ಥಾನದ ಅಲ್ವಾರ್‌ನಲ್ಲಿ ಜನಿಸಿದರು.. ಇವರು ಸೂಪರ್ ಹಿಟ್ ಟಿವಿ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಲೋಕದ ಶ್ರೇಷ್ಠ ನಟಿ ಎಂದು ಗುರುತಿಸಿಕೊಂಡಿದ್ದಾರೆ.
ಸಾಕ್ಷಿ ತನ್ವಾರ್ ಅವರು 2001 ರಲ್ಲಿ 'ಕರಮ್' ಧಾರಾವಾಹಿ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ಸಂಸಾರ್, ಕುಟುಂಬ, ದೇವಿ, ವಿರಾಸತ್, ಧಡ್ಕನ್ ಧಾರಾವಾಹಿಗಳಲ್ಲಿ ನಟಿಸಿ ಟಿವಿ ಲೋಕದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಇದುವರೆಗೆ ಸಾಕ್ಷಿ ತನ್ವರ್ 38ಕ್ಕೂ ಹೆಚ್ಚು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ.
2016 ರಲ್ಲಿ ಬಿಡುಗಡೆಯಾದ ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಸಾಕ್ಷಿ ತನ್ವರ್ ನಟಿಸಿದ್ದರು. ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರ ಬಾಲಿವುಡ್ ಇತಿಹಾಸದಲ್ಲಿ ಅತಿ ದೊಡ್ಡ ಸೂಪರ್ ಹಿಟ್ ಚಿತ್ರವಾಯಿತು.
ಸಾಕ್ಷಿ.. ಈ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಸಾಕಷ್ಟು ಮೆಚ್ಚುಗೆಯನ್ನು ಪಡೆದರು. ಆದರೆ ಚಿತ್ರರಂಗದಲ್ಲಿ ಅನೇಕ ಉತ್ತಮ ಯಶಸ್ಸನ್ನು ಸಾಧಿಸಿದರೂ ಈಕೆ ಮದುವೆಯಾಗಲಿಲ್ಲ. ಇತ್ತೀಚೆಗೆಷ್ಟೇ ಸಮೀರ್ ಕೊಚ್ಚರ್ ಅವರನ್ನು ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ತಿಳಿದುಬಂದಿದೆ..
ಪ್ರಸ್ತುತ ಈಕೆಗೆ 51 ವರ್ಷ. ಇದುವರೆಗೂ ಮದುವೆಯಾಗದ ಸಾಕ್ಷಿ ತನ್ವಾರ್ 45ನೇ ವಯಸ್ಸಿನಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಪ್ರಸ್ತುತ ಮುಂಬೈನಲ್ಲಿ ಮಗಳೊಂದಿಗೆ ಒಂಟಿಯಾಗಿ ವಾಸವಾಗಿದ್ದಾರೆ. ಟಿವಿ ಲೋಕದಲ್ಲಿ ಇಂದಿಗೂ ತಾರೆ.. ಮಹಾನ್ ನಟಿ ಎಂದು ಹೆಸರಾಗಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.