ಗಂಡಿಗೆ ತಾಳಿ ಕಟ್ಟಿ ವಿಶಿಷ್ಟವಾಗಿ ಮದುವೆಯಾದ ನಟಿ..! ಇದ್ಯಾವ ಸಂಪ್ರದಾಯ ಎಂದ ನೆಟ್ಟಿಗರು

Gouri and aditya bhaskar marriage : ಸೂಪರ್‌ ಹಿಟ್‌ 96 ಸಿನಿಮಾದಲ್ಲಿ ತ್ರಿಷಾ ಬಾಲ್ಯದ ಪಾತ್ರದಲ್ಲಿ ಗೌರಿ ಕಿಶನ್ ಕಾಣಿಸಿಕೊಂಡಿದ್ದರು. ಆದಿತ್ಯ ವಿಜಯ್ ಸೇತುಪತಿ ಪಾತ್ರವನ್ನು ನಿರ್ವಹಿಸಿದ್ದರು. ಈ ಜೋಡಿ ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಮೆಚ್ಚಿಸಿದರು. ಸಧ್ಯ ಈ ಜೋಡಿ ಮದುವೆಯಾಗಿದ್ದಾರೆ.

Written by - Krishna N K | Last Updated : Mar 30, 2024, 06:06 PM IST
    • ಗೌರಿ ಆದಿತ್ಯ 96 ಸಿನಿಮಾದಲ್ಲಿ ನಟಿಸಿದ್ದರು
    • ಈ ಜೋಡಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ
    • ಗೌರಿ ಆದಿತ್ಯಗೆ ತಾಳಿ ಕಟ್ಟಿದ ವಿಡಿಯೋ ವೈರಲ್‌ ಆಗಿದೆ.
ಗಂಡಿಗೆ ತಾಳಿ ಕಟ್ಟಿ ವಿಶಿಷ್ಟವಾಗಿ ಮದುವೆಯಾದ ನಟಿ..! ಇದ್ಯಾವ ಸಂಪ್ರದಾಯ ಎಂದ ನೆಟ್ಟಿಗರು title=
gouri kishan

Gouri kishan and Aditya bhaskar : ಕಾಲಿವುಡ್‌ ಸಿನಿಮಾ '96' ನಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಷಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರಿಬ್ಬರ ಬಾಲ್ಯದ ಪಾತ್ರಗಳನ್ನು ನಟಿ ಗೌರಿ ಕಿಶನ್ ಮತ್ತು ಆದಿತ್ಯ ನಿರ್ವಹಿಸಿದ್ದರು. ಇದೀಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

96 ಸಿನಿಮಾದಲ್ಲಿ ತ್ರಿಷಾ ಬಾಲ್ಯದ ಪಾತ್ರದಲ್ಲಿ ಗೌರಿ ಕಿಶನ್, ವಿಜಯ್ ಸೇತುಪತಿ ಬಾಲ್ಯದ ಪಾತ್ರವನ್ನು ಆದಿತ್ಯ ನಿರ್ವಹಿಸಿದ್ದರು. ಈ ಜೋಡಿ ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಇಬ್ಬರು ಮದುವೆಯಾಗಿದ್ದಾಗಿ ತಿಳಿದು ಬಂದಿದೆ.

ಇದನ್ನೂ ಓದಿ:Daniel Balaji: ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕಿರಾತಕ ಚಿತ್ರದ ಖಳನಟ!

ಮತ್ತೊಂದೆಡೆ ಗೌರಿಗೆ ಆದಿತ್ಯ ತಾಳಿ ಕಟ್ಟಬೇಕಿತ್ತು. ಆದರೆ ಗೌರಿಯೇ ನಟ ಆದಿತ್ಯಗೆ ತಾಳಿ ಕಟ್ಟುವ ಮೂಲಕ ವಿಶಿಷ್ಟವಾಗಿ ಮದುವೆಯಾಗಿದ್ದಾರೆ. ಈ ಕುರಿತು ವಿಡಿಯೋ ಸಹ ವೈರಲ್‌ ಆಗಿದೆ. ಬಟ್‌ ಇಲ್ಲೊಂದು ಬಿಗ್‌ ಟ್ವೀಸ್ಟ್‌ ಇದ್ದು,... ಅದೇನು ಅಂತ ತಿಳಿಯಲು ಮುಂದೆ ಓದಿ..

ಸಧ್ಯ ವೈರಲ್‌ ಆಗಿರುವ ಫೋಟೋ 'ಹಾಟ್ ಸ್ಪಾಟ್' ಎಂಬ ಚಿತ್ರಕ್ಕೆ ಸಂಬಂಧಿಸಿದ್ದು, ಈ ಸಿನಿಮಾದಲ್ಲಿ ಗೌರಿ ಆದಿತ್ಯ ಒಟ್ಟಿಗೆ ನಟಿಸಿದ್ದಾರೆ. ಮಾರ್ಚ್ 29 ತಮಿಳಿನಲ್ಲಿ ಬಿಡುಗಡೆಯಾದ ಚಿತ್ರದ ಪ್ರಚಾರದ ಭಾಗವಾಗಿ ಚಿತ್ರತಂಡ ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದೆ.

ಇದನ್ನೂ ಓದಿ:ಈ ನಟ-ನಟಿಯರು ರೊಮ್ಯಾನ್ಸ್‌ ಸೀನ್ ಮಾಡೋವಾಗ ಫುಲ್‌ ಕಂಟ್ರೋಲ್‌ ತಪ್ಪಿದ್ರು....!

ಇದನ್ನು ಅರಿಯದ ಅವರ ಅಭಿಮಾನಿಗಳು, ಆದಿತ್ಯ ಮತ್ತು ಗೌರಿ ಕಿಶನ್ ಮದುವೆಯಾಗುತ್ತಿರುವ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಅಂತ ನಂಬಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯೂ ಜೋರಾಗಿದ್ದು, ನೆಟ್ಟಿಗರು ಶುಭ ಕೋರುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News