ಅಮಿರ್‌ ಖಾನ್‌ ಪುತ್ರಿಗೆ ಪ್ರಪೋಸ್‌ ಮಾಡಿದ ನೂಪುರ್‌ : ನಾಚಿ ನೀರಾಗಿ ಕಿಸ್‌ ಮಾಡಿದ ಇರಾ..!

ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್‌ಗೆ ಸೆಲೆಬ್ರಿಟಿ ಫಿಟ್ನೆಸ್ ಎಕ್ಸ್‌ಪರ್ಟ್ ನೂಪುರ್‌ ಶಿಖರೆ ಮಂಡಿಯೂರಿ ಲವ್‌ ಪ್ರಪೋಸಲ್‌ ಮಾಡಿದ್ದು, ಸ್ಟಾರ್‌ ಕಿಡ್‌ ಇರಾ ಮುತ್ತಿಕ್ಕುವ ಮೂಲಕ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Sep 23, 2022, 05:31 PM IST
  • ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್‌ಗೆ ಸೆಲೆಬ್ರಿಟಿ ಫಿಟ್ನೆಸ್ ಎಕ್ಸ್‌ಪರ್ಟ್ ನೂಪುರ್‌ ಶಿಖರೆ ಲವ್‌ ಪ್ರಪೋಸಲ್‌
  • ಸ್ಟಾರ್‌ ಕಿಡ್‌ ಇರಾ ಮುತ್ತಿಕ್ಕುವ ಮೂಲಕ ಸಮ್ಮತಿ ವ್ಯಕ್ತಪಡಿಸಿದ್ದು ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ
  • ಮಂಡಿಯೂರಿ ಉಂಗುರ ತೊಡಿಸಿ, ʼನನ್ನನ್ನು ಮದುವೆಯಾಗುವೆಯಾ?' ಎಂದು ಕೇಳಿದ ನೂಪರ್‌
ಅಮಿರ್‌ ಖಾನ್‌ ಪುತ್ರಿಗೆ ಪ್ರಪೋಸ್‌ ಮಾಡಿದ ನೂಪುರ್‌ : ನಾಚಿ ನೀರಾಗಿ ಕಿಸ್‌ ಮಾಡಿದ ಇರಾ..! title=

ಮುಂಬೈ : ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್‌ಗೆ ಸೆಲೆಬ್ರಿಟಿ ಫಿಟ್ನೆಸ್ ಎಕ್ಸ್‌ಪರ್ಟ್ ನೂಪುರ್‌ ಶಿಖರೆ ಮಂಡಿಯೂರಿ ಲವ್‌ ಪ್ರಪೋಸಲ್‌ ಮಾಡಿದ್ದು, ಸ್ಟಾರ್‌ ಕಿಡ್‌ ಇರಾ ಮುತ್ತಿಕ್ಕುವ ಮೂಲಕ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹೌದು, ಇರಾಗೆ ನೂಪುರ್‌ ಶಿಖರೆ ಉಂಗುರ ತೊಡಿಸಿ ಪ್ರಪೋಸ್‌ ಮಾಡಿದ್ದಾರೆ. ಈ ಪ್ರಸಂಗ ಸೈಕ್ಲಿಂಗ್‌ ಈವೆಂಟ್‌ ವೇಳೆ ನಡೆದಿದ್ದು, ಮಂಡಿಯೂರಿ ಉಂಗುರ ತೊಡಿಸಿ, ʼನನ್ನನ್ನು ಮದುವೆಯಾಗುವೆಯಾ?' ಎಂದು ಕೇಳಿದ ನೂಪರ್‌ ಮಾತಿಗೆ ನಾಚಿ ಇರಾ ಹೌದು ಎಂದು ಸಮ್ಮತಿಸಿದ್ದಾರೆ. ಈ ಹ್ಯಾಪಿ ಮೂವ್ಮೆಂಟ್‌ನ ವಿಡಿಯೊವನ್ನು ಇರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ʼಕೈಗಾರಿಕಾ ಉದ್ದೇಶಕ್ಕಾಗಿ ಹೆಚ್ಚುವರಿ 50 ಸಾವಿರ ಎಕರೆ ಜಮೀನು ಭೂ ಸ್ವಾಧೀನʼ

 
 
 
 

 
 
 
 
 
 
 
 
 
 
 

A post shared by Ira Khan (@khan.ira)

ಕಳೆದ ಎರಡು ವರ್ಷಗಳಿಂದ ಇರಾ ಹಾಗೂ ನೂಪುರ್‌ ಡೇಟಿಂಗ್‌ ಮಾಡುತ್ತಿದ್ದಾರೆ. ಈ ವಿಚಾರ ಅಮಿರ್‌ ಖಾನ್‌ ಅವರಿಗೂ ತಿಳಿದಿತ್ತು. ಅಲ್ಲದೆ, ಕುಟುಂಬ ಸಮೇತ ಎಂಜಾಯ್‌ ಮಾಡುತ್ತಿದ್ದ ಹಲವಾರು ಫೋಟೋಗಳನ್ನು ಈ ಎರಡು ಜೋಡಿ ಹಂಚಿಕೊಂಡಿದ್ದರು. ಇರಾ, ರೀನಾ ದತ್ತ ಹಾಗೂ ಅಮಿರ್‌ ಖಾನ್‌ ದಂಪತಿಯ ಮಗಳು.

ಇನ್ನು ವಿಡಿಯೋ ಕ್ಲಿಪ್‌ನಲ್ಲಿ, ಇರಾ ಇತರ ಜನರೊಂದಿಗೆ ಸೈಕ್ಲಿಂಗ್‌ ಈವೆಂಟ್‌ನ ಸ್ಟಾಂಡ್‌ ಹತ್ತಿರ ನಿಂತಿರುವುದನ್ನು ಕಾಣಬಹುದು. ಅಲ್ಲಿಗೆ ಬಂದ ನೂಪುರ್ ಮೊಣಕಾಲೂರಿ ʼನನ್ನನ್ನು ಮದುವೆಯಾಗುತ್ತೀರಾ?ʼ ಎಂದು ಕೇಳುತ್ತಾರೆ. ಇದಕ್ಕೆ ಇರಾ ಖುಷಿಯಿಂದ ಮೈಕ್ ತೆಗೆದುಕೊಂಡು ʼಹೌದುʼ ಎಂದು ಉತ್ತರಿಸುತ್ತಾಳೆ. ಅಲ್ಲದೆ, ಇಬ್ಬರು ಪರಸ್ಪರ ಕಿಸ್‌ ಮಾಡಿದ್ದಾರೆ. ಈ ವೇಳೆ ಅಲ್ಲಿದ್ದವರು ಚಪ್ಪಾಳೆ ತಟ್ಟುವ ಮೂಲಕ ಜೋಡಿಗೆ ಶುಭ ಕೋರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News