ಹೆತ್ತಮ್ಮನಿಂದಲೇ ಹಲ್ಲೆಗೊಳಗಾದ ಮಗುವಿನ ಸಹಾಯಕ್ಕೆ ಮುಂದಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ !

Action Prince Dhruva Sarja: ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ದೇವರಿಲ್ಲ.. ತಾಯಿ ಮಡಿಲೇ ಸ್ವರ್ಗ ಅಂತಾರೆ.. ಆದರೆ ಇಲ್ಲೊಂದೆಡೆ ಮಗುವಿಗೆ ಸ್ವರ್ಗವಾಗಬೇಕಿದ್ದ ಮಡಿಲೇ ನರಕವಾಗಿದೆ.. 

Written by - Savita M B | Last Updated : Mar 6, 2024, 02:43 PM IST
  • ಸಾಮಾಜಿಕ ಕಳಕಳಿ ಹೊಂದಿರೋ ನಟ ಅದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.
  • ರೀಲ್ ಅಲ್ಲ ರಿಯಲ್ ಲೈಫ್ ನಲ್ಲೂ ಹೀರೋ ಆಗಿದ್ದಾರೆ ಆಕ್ಷನ್ ಪ್ರಿನ್ಸ್ ..
ಹೆತ್ತಮ್ಮನಿಂದಲೇ ಹಲ್ಲೆಗೊಳಗಾದ ಮಗುವಿನ ಸಹಾಯಕ್ಕೆ ಮುಂದಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ! title=

Action Prince Dhruva Sarja: ಇತ್ತೀಚೆಗಷ್ಟೇ ತಾಯಿಯ ಮಡಿಲೇ ಮಗುವಿಗೆ ನರಕಸದೃಶವಾಗಿರುವ ಘಟನೆಯೊಂದು ನಡೆದಿತ್ತು.. ಇದೀಗ ಆ ಮಗುವಿಗೆ ರಕ್ಷಾ ಕವಚವಾಗಿ ನಿಲ್ಲಲು ಕನ್ನಡದ ಸ್ಟಾರ್‌ ನಟ ಧ್ರುವ ಸರ್ಜಾ ಮುಂದೆ ಬಂದಿದ್ದಾರೆ..

ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ದೇವರಿಲ್ಲ.. ತಾಯಿ ಮಡಿಲೇ ಸ್ವರ್ಗ ಅಂತಾರೆ.. ಆದರೆ ಇಲ್ಲೊಂದೆಡೆ ಮಗುವಿಗೆ ಸ್ವರ್ಗವಾಗಬೇಕಿದ್ದ ಮಡಿಲೇ ನರಕವಾಗಿದೆ.. ಹೌದು, ಸ್ನೇಹಿತನ ಜೊತೆ ಸೇರಿ ತಾನೇ ಹೆತ್ತ ಮಗುವಿಗೆ ಕಿರುಕುಳ ನೀಡುತ್ತಿದ್ದ ನಿಷ್ಕರುಣಿ ಹೆಣ್ಣಿಗೆ ಸ್ಥಳೀಯರೇ ಕ್ಲಾಸ್‌ ತೆಗೆದುಕೊಂಡಿದ್ದಾರೆ.. ತಾಯಿ ಹಾಗೂ ಆಕೆಯ ಸ್ನೇಹಿತ  ಮಗುವಿಗೆ ಕಿರುಕುಳ ನೀಡುತ್ತಿರುವ  ಬಗ್ಗೆ ಆ ಮಗು ಅಕ್ಕಪಕ್ಕದವರ ಬಳಿ ಹೇಳಿಕೊಂಡಿತ್ತು. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

ಇದನ್ನೂ ಓದಿ- Bangalore International Film Festival: ಡೈರೆಕ್ಟರ್‌ M.S.ಸತ್ಯುಗೆ ಜೀವಮಾನ ಸಾಧನೆ ಪ್ರಶಸ್ತಿ.!

ಇದೀಗ ಇದನ್ನು ಗಮಿನಿಸಿದ ಸ್ಟಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮಗುವಿಗೆ ಸಹಾಯ ಮಾಡಲು ಮುಂದಾಗಿದ್ದಾರೆ..  ಸ್ವಂತ ಮಗುವಿನೊಂದಿಗೆ ಹೆತ್ತ ತಾಯಿಯ ವರ್ತನೆ ಬಗ್ಗೆ ಕೇಳಿ ನೊಂದುಕೊಂಡ ನಟ ಖುದ್ದು ತಾವೇ ಆ ಕಂದಮ್ಮನಿಗೆ ರಕ್ಷಾ ಕವಚವಾಗುವ ಭರವಸೆ ನೀಡಿದ್ದಾರೆ.. 

ಇದನ್ನೂ ಓದಿ- ಈ ಸೂಪರ್‌ಸ್ಟಾರ್ ಗೆ ಕಾಡಿತ್ತು ಅಂಗವೈಕಲ್ಯ.. ದೌರ್ಜನ್ಯಕ್ಕೆ ಒಳಗಾಗಿ ಜೀವನವೇ ಮುಗೀತು ಅಂದುಕೊಂಡಿದ್ದ ಈತ ಈಗ 3000 ಕೋಟಿ ಒಡೆಯ!

ಈ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ ಅವರು "ಮಗುವಿಗೆ ಏನು ಬೇಕೋ ಅದನ್ನ ಮಾಡ್ತೀನಿ.. ಮಗುವನ್ನ ನೇರವಾಗಿ ನೋಡೋ ಆಸೆ ಇದೆ. ಆದರೆ ಅದನ್ನ ಪ್ರಚಾರ ಅಂದುಕೊಳ್ಳಬಾರದು. ಅದಕ್ಕಾಗಿ ಏನೇ ಸಹಾಯ ಬೇಕಿದ್ರೂ ಮಾಡ್ತೀನಿ.. ಆದರೆ ಎಲ್ಲೂ ಗೊತ್ತಾಗಬಾರದು.. ದಯವಿಟ್ಟು ಪ್ರಚಾರ ಮಾಡಬೇಡಿ" ಅಂತ ಕೇಳಿಕೊಂಡಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News