Kamal Movie: 100 ಕೋಟಿಯ ಥಗ್ ಲೈಫ್ ಚಿತ್ರದಿಂದ ಹೊರ ನಡೆದ ದುಲ್ಕರ್!

Kamal Hassan Thug Life Film: ಭಾರತದ ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದ ಮುಂಬರುವ 100 ಕೋಟಿಯ ಬಜೆಟ್‌ನ ಥಗ್ ಲೈಫ್ ಚಿತ್ರದಿಂದ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹೊರನಡೆದಿದ್ದಾರೆ. ಇದಕ್ಕೆ ಕಾರಣವೇನು ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Mar 6, 2024, 10:09 AM IST
  • ಕಮಲ್‌ ಮತ್ತು ಮಣಿರತ್ನಂ ಕಾಂಬೋದಲ್ಲಿ ಥಗ್ ಲೈಫ್ ಚಿತ್ರ ಮೂಡಿಬರಲಿದ್ದು, ಇದಕ್ಕಾಗಿ ಇಬ್ಬರು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
  • ಥಗ್ ಲೈಫ್ ಚಿತ್ರದಲ್ಲಿ ನಟ ದುಲ್ಕರ್ ಸಲ್ಮಾನ್ ಅಭಿನಯಿಸುತ್ತಿದ್ದಾರೆಂದು ಈ ಮೊದಲೇ ಘೋಷಣೆಯಾಗಿದ್ದು, ಇದೀಗ ಈ ನಟ ಮನಸ್ಸು ಬದಲಾಯಿಸಿಕೊಂಡಿದ್ದಾರೆ.
  • ಸದ್ಯ ಮಾಲಿವುಡ್‌ ನಟ ದುಲ್ಕರ್ ಸಲ್ಮಾನ್ ಬೇರೆ ಬೇರೆ ಭಾಷೆಗಳ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.
Kamal Movie: 100 ಕೋಟಿಯ ಥಗ್ ಲೈಫ್ ಚಿತ್ರದಿಂದ ಹೊರ ನಡೆದ ದುಲ್ಕರ್! title=

Dulquer Salmaan Walks Out From Thug Life: ಬಹುಭಾಷಾ ನಟ ಕಮಲ್ ಹಾಸನ್ ಹಾಗೂ ಪ್ಯಾನ್‌ ಇಂಡಿಯಾ ಸ್ಟಾರ್‌ ಡೈರೆಕ್ಟರ್ ಮಣಿರತ್ನಂ ಇಬ್ಬರು 100 ಕೋಟಿ ಬಜೆಟ್‌ನಲ್ಲಿ ಹೊಸದೊಂದು ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಕಮಲ್‌ ಮತ್ತು ಮಣಿರತ್ನಂ ಕಾಂಬೋದಲ್ಲಿ ಥಗ್ ಲೈಫ್ ಚಿತ್ರ ಮೂಡಿಬರಲಿದ್ದು, ಇದಕ್ಕಾಗಿ ಇಬ್ಬರು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಈ ಸಿನಿಮಾದಿಂದ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಹೊರ ನಡೆದಿದ್ದಾರೆ ಎನ್ನಲಾಗ್ತಿದೆ.

ಥಗ್ ಲೈಫ್ ಎಂಬ ಬಿಗ್​ ಬಜೆಟ್ ಚಿತ್ರದಲ್ಲಿ ನಟ ದುಲ್ಕರ್ ಸಲ್ಮಾನ್ ಅಭಿನಯಿಸುತ್ತಿದ್ದಾರೆಂದು ಈ ಮೊದಲೇ ಘೋಷಣೆಯಾಗಿದ್ದು, ಆದರೇ ಇದೀಗ ಈ ನಟ ಮನಸ್ಸು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಚಿತ್ರತಂಡ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ  ನೀಡಿಲ್ಲ. ನಟ ದುಲ್ಕರ್ ‘ಥಗ್ ಲೈಫ್’ನಿಂದ ದೂರ ಉಳಿದಿದ್ದಾರೆಂಬ ವದಂತಿಗಳ ನಡುವೆ ಇತ್ತ ಅಭಿಮಾನಿಗಳು ಸಿನಿಮಾ ನಿರ್ಮಾಣ ತಂಡದಿಂದ ಅಧಿಕೃತ ಹೇಳಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.‌

ಇದನ್ನೂ ಓದಿ: Aamir Khan : ಹೊಸ ಅವತಾರದಲ್ಲಿ ಅಮಿರ್‌ ಖಾನ್.. ಅಭಿಮಾನಿಗಳಲ್ಲಿ ಹೆಚ್ಚಾಯ್ತು ಕುತೂಹಲ!

ಸದ್ಯ ಮಾಲಿವುಡ್‌ ನಟ ದುಲ್ಕರ್ ಸಲ್ಮಾನ್ ಬೇರೆ ಬೇರೆ ಭಾಷೆಗಳ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಟ ‘ಕಿಂಗ್ ಆಫ್ ಕೋಥಾ’ ಎಂಬ ಮಲಯಾಳಂ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ, ಪ್ರಸ್ತುತ ಲಕ್ಕಿ ಬಾಸ್ಕರ್, 1965: ಪುರಾನನೂರು ಮತ್ತು ಕಾಂತ ಸೇರಿದಂತೆ ಮೂರು ಸಿನಿಮಾಗಳಲ್ಲಿ ಬಣ್ಣ ಹಚ್ಚಲಿದ್ದಾರೆ. ಇದೀಗ ದುಲ್ಕರ್‌ ಥಗ್ ಲೈಫ್‌ನಲ್ಲಿ ಮೇನ್‌ ರೋಲ್‌ನಲ್ಲಿ ನಟಿಸಲಿದ್ದು, ಆದ್ರೆ ಸದ್ಯಕ್ಕೆ ಈ ನಟ ಚಿತ್ರದಿಂದ ಹೊರ ನಡೆದಿದ್ದಾರೆಂಬ ನ್ಯೂಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೊದಲು ಥಗ್ ಲೈಫ್‌ನಿಂದ ಕಮಲ್ ಪೋಸ್ಟರ್ ರಿಲೀಸ್‌ ಆಗಿದ್ದು, ಇದರಲ್ಲಿ ಕಮಲ್​ ಕಣ್ಣುಗಳು ಮಾತ್ರ ಕಾಣ್ತಿದೆ.ಇನ್ನೂ ಮುಖ ಮತ್ತು ದೇಹವನ್ನು ಕಾಣದಂತೆ ಬಟ್ಟೆಯಲ್ಲಿ ಪ್ಯಾಕ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಜಯಂ ರವಿ, ತ್ರಿಶಾ ಕೃಷ್ಣನ್, ನಾಸರ್, ಗೌತಮ್ ಕಾರ್ತಿಕ್ ಮತ್ತು ಐಶ್ವರ್ಯ ಲಕ್ಷ್ಮಿ ಪ್ರಮುಖ ತಾರಾ ಬಳಗವೇಯಿದೆ. ಆದ್ರೆ ನಟ ದುಲ್ಕರ್ ಸಲ್ಮಾನ್ ಮಾತ್ರ ಈ ಚಿತ್ರದಿಂದ ಹೊರಗುಳಿಯುತ್ತಾರೆ ಎಂಬ ಸುದ್ದಿ ಹೊರಬಿದ್ದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News