Ajaydevagan: ಅಜಯ್ ದೇವಗನ್‌ ನಟಿಸಿದ ಮೊದಲ ಸಿನಿಮಾ ತಮಿಳಿನ ರೀಮೇಕ್!!

Ajaydevagan: ದೇಶಾದ್ಯಂತ ಅನೇಕರು ಸುದೀಪ್​ಗೆ ಬೆಂಬಲ ಸೂಚಿಸಿದ್ದು, ಹಲವರು ಅಜಯ್ ದೇವಗನ್ ಪರ ನಿಂತಿದ್ದಾರೆ. ಇಬ್ಬರೂ ಸ್ಟಾರ್‌ ನಟರೂ ಈ ವಿಚಾರದ ಮಾತುಕತೆಯನ್ನು ಅಲ್ಲಿಗೆಯೇ ನಿಲ್ಲಿಸೋಣ ಎಂದು ಹೇಳಿದ್ದರೂ ಕೂಡ ಟ್ವಿಟರ್​ನಲ್ಲಿ ಈ ಕುರಿತ ಹಲವು ಅಂಶಗಳು ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿವೆ. ಈ ಎಲ್ಲ ಚರ್ಚೆಗಳ ಬೆನ್ನಲ್ಲೇ ಅಜಯ್‌ ಮಾಡಿರುವ ಸೌತ್‌ ಸಿನಿಮಾಗಳ ಹಿಂದಿ ರೀಮೇಕ್‌ ವಿಚಾರವೂ ಮುನ್ನೆಲೆಗೆ ಬಂದಿದೆ. 

Written by - Chetana Devarmani | Last Updated : Apr 28, 2022, 03:23 PM IST
  • ರಾಷ್ಟ್ರ ಭಾಷೆ ಕುರಿತ ಸುದೀಪ್ ಮಾತಿಗೆ ಅಜಯ್ ದೇವಗನ್ ರಿಪ್ಲೈ
  • ಅಜಯ್ ದೇವಗನ್‌ ನಟಿಸಿದ ಮೊದಲ ಸಿನಿಮಾ ತಮಿಳಿನ ರೀಮೇಕ್
  • ಸೌತ್‌ ಸಿನಿಮಾಗಳ ಹಿಂದಿ ರೀಮೇಕ್‌ ವಿಚಾರವೂ ಮುನ್ನೆಲೆಗೆ ಬಂದಿದೆ
Ajaydevagan: ಅಜಯ್ ದೇವಗನ್‌ ನಟಿಸಿದ ಮೊದಲ ಸಿನಿಮಾ ತಮಿಳಿನ ರೀಮೇಕ್!!  title=
ಅಜಯ್ ದೇವಗನ್‌

ಕನ್ನಡ ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್‌ ನಟ ಅಜಯ್ ದೇವಗನ್ ನಡುವಿನ ‘ರಾಷ್ಟ್ರ ಭಾಷೆ’ ಕುರಿತ ಟ್ವೀಟ್ ಮಾತುಕತೆ ಇದೀಗ ದೊಡ್ಡಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ದೇಶಾದ್ಯಂತ ಅನೇಕರು ಸುದೀಪ್​ಗೆ ಬೆಂಬಲ ಸೂಚಿಸಿದ್ದು, ಹಲವರು ಅಜಯ್ ದೇವಗನ್ ಪರ ನಿಂತಿದ್ದಾರೆ. ಇಬ್ಬರೂ ಸ್ಟಾರ್‌ ನಟರೂ ಈ ವಿಚಾರದ ಮಾತುಕತೆಯನ್ನು ಅಲ್ಲಿಗೆಯೇ ನಿಲ್ಲಿಸೋಣ ಎಂದು ಹೇಳಿದ್ದರೂ ಕೂಡ ಟ್ವಿಟರ್​ನಲ್ಲಿ ಈ ಕುರಿತ ಹಲವು ಅಂಶಗಳು ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿವೆ. 

ಇದನ್ನೂ ಓದಿ: Samantha: ಇಂದು ಕೋಟಿಗಟ್ಟಲೇ ಸಂಭಾವನೆ ಪಡೆಯೋ ಸಮಂತಾ ಮೊದಲ ಸಂಬಳ ಇದು.!

ಕಿಚ್ಚನ ಮಾತಿಗೆ ಚಿತ್ರರಂಗದ ತಾರೆಯರಾದ ರಮ್ಯಾ, ಸತೀಶ್ ನೀನಾಸಂ, ಶ್ರೀನಗರ ಕಿಟ್ಟಿ ಸೇರಿದಂತೆ ಹಲವರು ದನಿಗೂಡಿಸಿದ್ದಾರೆ. ಇನ್ನೂ ಕೇವಲ ಸಿನಿರಂಗದವರು ಮಾತ್ರವಲ್ಲ ರಾಜಕೀಯ ನಾಯಕರು ಸಹ ಸುದೀಪ್‌ ಮಾತಿಗೆ ಬೆಂಬಲ ಸೂಚಿಸಿದ್ದು, ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಎಲ್ಲ ಚರ್ಚೆಗಳ ಬೆನ್ನಲ್ಲೇ ಅಜಯ್‌ ಮಾಡಿರುವ ಸೌತ್‌ ಸಿನಿಮಾಗಳ ಹಿಂದಿ ರೀಮೇಕ್‌ ವಿಚಾರವೂ ಮುನ್ನೆಲೆಗೆ ಬಂದಿದೆ. 

ಅಜಯ್ ದೇವಗನ್ ಬಾಲನಟನಾಗಿ ನಟಿಸಿದ ಮೊದಲ ಸಿನಿಮಾವೇ ಸೌತ್‌ ಇಂಡಸ್ಟ್ರಿಯ ಡಬ್‌ ಮೂವಿ.  ತಮಿಳಿನ 'ಮುಲ್ಲಮ್ ಮುಲ್ಲ' ಚಿತ್ರದ ರೀಮೇಕ್ 'ಪ್ಯಾರಿ ಬೆಹನಾ' ಸಿನಿಮಾದ ಮೂಲಕ ಅಜಯ್‌ ದೇವಗನ್‌ ಸಿನಿ ಜರ್ನಿ ಆರಂಭಿಸಿದರು. ಇದೀಗ ಸುದೀಪ್‌ ಮತ್ತು ಅಜಯ್‌ ದೇವಗನ್‌ ನಡುವಿನ ಸರಣಿ ಟ್ವೀಟ್‌ ಬಳಿಕ ಈ ವಿಚಾರ ಮುನ್ನೆಲೆಗೆ ಬಂದಿದೆ. ಅಜಯ್ ದೇವಗನ್ ನಾಯಕನಾಗಿ ಎಂಟ್ರಿ ಕೊಟ್ಟು ಸೂಪರ್ ಡೂಪರ್ ಹಿಟ್ ಆದ ಸಿನಿಮಾ 'ಫೂಲ್ ಔರ್ ಕಾಂಟೆ'. ಇದು ಸಹ ಮಲಯಾಳಂ ಸಿನಿಮಾ 'ಪರಂಪರಾ'ದ ರೀಮೇಕ್ ಎಂಬುದು ಗಮನಾರ್ಹವಾಗಿದೆ. ಅಜಯ್ ದೇವಗನ್ ಸಿನಿಮಾ ಜೀವನದ ಮತ್ತೊಂದು ಸೂಪರ್ ಹಿಟ್ ಸಿನಿಮಾ 'ದೀವಾನಗಿ' ತಮಿಳಿನ 'ಕಾದಲ್ ಕಿರುಕ್ಕುನ್' ಸಿನಿಮಾದ ರೀಮೇಕ್.  

ಕನ್ನಡದ ಸಿನಿಮಾಗಳನ್ನೂ ಅಜಯ್ ದೇವಗನ್ ರೀಮೇಕ್ ಮಾಡಿದ್ದಾರೆ. ಅಜಯ್‌ ನಟನೆಯ 'ಆಲ್ ದಿ ಬೆಸ್ಟ್' ಸಿನಿಮಾ ಕನ್ನಡದ 'ಗಲಾಟೆ ಸಂಸಾರ' ಚಿತ್ರದ ರೀಮೇಕ್. 'ಸನ್ ಆಫ್ ಸರ್ದಾರ್' ಹೆಸರಿನ ಸಿನಿಮಾದಲ್ಲಿ ಅಜಯ್ ನಟಿಸಿದ್ದು ಆ ಸಿನಿಮಾ ಎಸ್.ನಾರಾಯಣ್ ನಟನೆಯ 'ಬಲಗಾಲಿಟ್ಟು ಒಳಗೆ ಬಾ' ಸಿನಿಮಾದ ರೀಮೇಕ್ ಆಗಿದೆ. ಇದಲ್ಲದೇ ಅಜಯ್‌ ದೇವಗನ್‌ಗೆ ಆಕ್ಷನ್‌ ಸ್ಟಾರ್‌ ಪಟ್ಟ ತಂದು ಕೊಟ್ಟ 'ಸಿಂಘಂ' ಸಿನಿಮಾ ತಮಿಳಿನ 'ಸಿಂಗಂ' ನ ರೀಮೇಕ್‌. 

ಇದನ್ನೂ ಓದಿ: ಕಿಚ್ಚ ಸುದೀಪ್ vs ಅಜಯ್ ದೇವಗನ್ : ಇಬ್ಬರ ನಡುವೆ ಟ್ವಿಟ್ಟರ್ ವಾರ್

ಅಜಯ್ ನಟಿಸಿರುವ 'ಹಿಮ್ಮತ್‌ವಾಲಾ' ಸಿನಿಮಾ ತೆಲುಗಿನ 'ಊರಿಕಿ ಮನಗಾಡು' ಸಿನಿಮಾದ ಸೀನ್‌ ಟು ಸೀನ್ ರೀಮೇಕ್.'ಏಕಲವ್ಯನ್' ತಮಿಳು ಸಿನಿಮಾ ರೀಮೇಕ್ 'ಸಿಂಘಂ ರಿಟರ್ನ್ಸ್'. ಸೂಪರ್ ಹಿಟ್ ಸಿನಿಮಾ 'ದೃಶ್ಯಂ' ಸಿನಿಮಾ ಮಲಯಾಳಂನ 'ದೃಶ್ಯಂ' ಸಿನಿಮಾದ ರೀಮೇಕ್. ಇವುಗಳಷ್ಟೆ ಅಲ್ಲದೆ, ಮರಾಠಿ ಹಾಗೂ ಇಂಗ್ಲೀಷ್‌ನ ಹಲವಾರು ಸಿನಿಮಾಗಳನ್ನು ರೀಮೇಕ್ ಮಾಡಿ ಯಶಸ್ಸು ಗಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News