'ಕಾಟೇರ' ಸಿನಿಮಾಗೆ 100ರ ಸಂಭ್ರಮ..! ಕೇಕ್ ಕಟ್‌ ಮಾಡಿ ಸೆಲೆಬ್ರೇಟ್‌ ಮಾಡಿದ ಟೀಮ್

Kaatera 100 days celebration : ಬ್ಲಾಕ್ಬಸ್ಟರ್‌ ಹಿಟ್‌ ಕಾಟೇರ ಸಿನಿಮಾ ಬಿಡುಗಡೆಯಾಗಿ ಇಂದಿಗೆ 100 ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ಕಳೆದ ವರ್ಷ ಡಿಸೆಂಬರ್-29 ರಂದು ರಿಲೀಸ್ ಆಗಿತ್ತು. 

Written by - Krishna N K | Last Updated : Apr 13, 2024, 11:08 AM IST
    • 100 ದಿನ ಪೂರೈಸಿದ ಕಾಟೇರ ಸಿನಿಮಾ
    • ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದ ಚಿತ್ರತಂಡ
    • ದರ್ಶನ್‌, ಆರಾಧನಾ ನಟನೆಯ ಕಾಟೇರ ಚಿತ್ರ
'ಕಾಟೇರ' ಸಿನಿಮಾಗೆ 100ರ ಸಂಭ್ರಮ..! ಕೇಕ್ ಕಟ್‌ ಮಾಡಿ ಸೆಲೆಬ್ರೇಟ್‌ ಮಾಡಿದ ಟೀಮ್ title=

Darshan Kaatera : ಸ್ಯಾಂಡಲ್‌ವುಡ್‌ ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾ ಕಾಟೇರ. ಕಳೆದ ಕೆಲವು ದಿನಗಳ ಹಿಂದೆ ʼಕಾಟೇರʼ ತಂಡ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ 50 ದಿನದ ಸಂಭ್ರಮವನ್ನ ಆಚರಿಸಿತ್ತು. ಚಿತ್ರಕ್ಕಾಗಿ ಕೆಲಸ ಮಾಡಿದವರಿಗೆ ಅಂದು ಗೌರವಿಸಲಾಗಿತ್ತು. ಇದೀಗ ಚಿತ್ರ ಯಶಸ್ವಿಯಾಗಿ 100 ದಿನವನ್ನ ಪೂರೈಸಿದೆ. 

ಹೌದು.. 29 ಡಿಸೆಂಬರ್‌ 2023 ರಂದು ಬಿಡುಗಡೆಯಾದ ಕಾಟೇರ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಗಳಿಸಿತ್ತು. ಈ ಚಿತ್ರದಲ್ಲಿ ದರ್ಶನ್‌ ವಿಶಿಷ್ಠ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಲ್ಲದೆ, ದೇಶಿ ಕಥಾ ಹಂದರ ಹೊಂದಿರುವ ಈ ಸಿನಿಮಾ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು.

ಇದನ್ನೂ ಓದಿ:ಸೀತಾರಾಮ ಸೀರಿಯಲ್ ಅಶೋಕ್ ನಿಜವಾದ ಪತ್ನಿ ಯಾರು ಗೊತ್ತಾ? ಇವರ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರ!!   

ರೈತರ ಮೇಲಿನ ದಬ್ಬಾಳಿಕೆ, ಉಳುವವನೇ ಭೂಮಿಯ ಒಡೆಯ ಕಾಯ್ದೆ ಹೀಗೆ ಸಾಮಾಜಿಕ ನ್ಯಾಯ ನೀತಿಗಳನ್ನು ಹೊತ್ತು ತೆರೆ ಮೇಲೆ ಬಂದ ಕಾಟೇರ ಸಿನಿಮಾ ತನ್ನ ಮೊದಲ ಪ್ರದರ್ಶನದಿಂದಲೇ ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಬರುವಂತೆ ಮಾಡಿತು. ಅಲ್ಲದೆ, ರೈತರು ಟ್ರ್ಯಾಕ್ಟರ್‌ ಮೂಲಕ ಬಂದು ಈ ಸಿನಿಮಾವನ್ನು ನೋಡಿ ಹೊಗಳಿದ್ದರು.

ಇನ್ನು 100 ದಿನದ ಸೆಲೆಬ್ರೇಷನ್ ಅನ್ನು ಚಿತ್ರತಂಡ ತುಂಬಾ ಸಿಂಪಲ್‌ ಆಗಿ ಸೆಲೆಬ್ರೇಟ್‌ ಮಾಡಿತು. ಡೈರೆಕ್ಟರ್ ತರುಣ್ ಸುಧೀರ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸೇರಿದಂತೆ ತಂಡದ ಇತರ ಸದಸ್ಯರು ಈ ಸಂಭ್ರಮದಲ್ಲಿದ್ದರು. ಕೇಕ್‌ ಕಟ್‌ ಮಾಡಿ ತಂಡ ಸಂಭ್ರಮಿಸಿತು. ಸಧ್ಯ ನಟ ದರ್ಶನ್ ಎಡಗೈ ಸರ್ಜರಿಗೆ ಒಳಗಾಗಿದ್ದು, ರೆಸ್ಟ್ ಪಡೆಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News