Prakash Raj Tweet : ಭಾತರದ ಮೂರನೇ ಚಂದ್ರಯಾನ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಆಗಸ್ಟ್ 23ರಂದು ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಇದಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಇದೇ ಸಮಯದಲ್ಲಿ ನಟ ಪ್ರಕಾಶ್ ರಾಜ್ ಚಂದ್ರಯಾನವನ್ನೆ ಅವಹೇಳನ ಮಾಡುವಂತೆ ಟ್ವಿಟರ್‌ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಜನರು ಅವರ ಮೇಲೆ ಗರಂ ಆಗಿದ್ದಾರೆ.
ಹೌದು ಇತ್ತೀಚೆಗೆ ಪ್ರಕಾಶ್ ರಾಜ್ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸರ್ ಎಂ ವಿ ಕಾಲೇಜಿನ ಸಭಾಂಗಣದಲ್ಲಿ ಆರೋಜಿಸಿದ್ದ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ಅದೇ ವೇಳೆ ಅವರು ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದರು.
ತಾಜಾ ಸುದ್ದಿ :~
ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದ್ರಶ್ಯ .. #VikramLander #justasking pic.twitter.com/EWHcQxc1jA
— Prakash Raj (@prakashraaj) August 20, 2023
ಇದನ್ನೂ ಓದಿ-ಧರ್ಮ ಕೈಯಲ್ಲಿ ತಲ್ವಾರ್! ನಾಯಕ್ ನಹೀ ಖಳ್ ನಾಯಕ್ ಅಂದ್ರು ಕ್ಯಾಟ್ಬರೀಸ್ :
ಈ ಕಾರಣದಿಂದಾಗಿ ಅವರು ಅಲ್ಲಿಂದ ಮರಳಿದ ಕೂಡಲೇ ಕಾಲೇಜು ವಿದ್ಯಾರ್ಥಿಗಳು ಪ್ರಕಾಶ್ ರಾಜ್ ಅವರು ಬಂದು ಹೋದ ಸ್ಥಳದಲ್ಲೆಲ್ಲಾ ಗೋಮೂತ್ರ ನೀರು ಸಿಂಪಡಿಸಿ ಸ್ವಚ್ಚಗೊಳಸಿದ್ದರು. ಇದಲ್ಲದೇ ಸಂಘ ಪರಿವಾರದವರು ಪ್ರಕಾಶ್ ರಾಜ್‌ಗೆ ಜೀವ ಬೆದರಿಕೆಯನ್ನೂ ಹಾಕಿದ್ದರು.
ಸದ್ಯ ಅವರು ಮತ್ತೆ ಚಂದ್ರಯಾನ 3 ಬಗ್ಗೆ ಅಪಹಾಸ್ಯ ಮಾಡಿ ಜನರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಚಂದ್ರಯಾನ 3 ನಮ್ಮ ದೇಶದ ಪ್ರತಿಷ್ಠೆ ಅದರ ಮೇಲೂ ಅಪಹಾಸ್ಯ ಮಾಡಿದ್ದಿರಾ..? ನಿಮಗೂ, ಆ ಕೆಟ್ಟ ಮನಸ್ಥಿತಿಗೊಂದು ದೊಡ್ದ ನಮಸ್ಕಾರ...ದೇಶದ ಏಳಿಗೆ ನೋಡಲು ನಿಮ್ಮಿಂದಾಗುತ್ತಿಲ್ಲ ಹಾಗಾದರೆ ನೀವು ಭಾರತದವರೇನಾ? ಚಂದ್ರಯಾನ 3 ವಿಚಾರದಲ್ಲಿಯೂ ರಾಜಕೀಯವನ್ನು ತರುವುದು ಒಳ್ಳೆಯದಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ-ಸಾಲದ ವಸೂಲಿಗಾಗಿ ನಟ ಸನ್ನಿ ಡಿಯೋಲ್ ಮನೆ ಹರಾಜಿಗಿಟ್ಟ ಬ್ಯಾಂಕ್..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.