"ಗಂಡ ಹೆಂಡತಿ ಜಗಳ ಬೀದಿಗೆ ಬಂದಿದೆ" ಸುದೀಪ್‌ ಬಗ್ಗೆ ರವಿಚಂದ್ರನ್‌ ಹೇಳಿದ್ದೇನು?

Ravichandran on allegations against Sudeep: ಕಿಚ್ಚ ಸುದೀಪ್‌ ಮೇಲಿನ ಆರೋಪಗಳ ಬಗ್ಗೆ ನಟ ರವಿಚಂದ್ರನ್‌ ಮಾತನಾಡಿದ್ದಾರೆ. "ನಾನು ಯಾರನ್ನು ಮಾತಿನಲ್ಲಿ ನಂಬಲ್ಲ. ದಾಖಲೆ ಬೇಕು. ನನ್ನ ಮುಂದೆ ದಾಖಲೆ ಇಡಬೇಕು" ಎಂದಿದ್ದಾರೆ.  

Written by - Chetana Devarmani | Last Updated : Jul 18, 2023, 05:00 PM IST
  • "ನಾನು ಯಾರನ್ನು ಮಾತಿನಲ್ಲಿ ನಂಬಲ್ಲ. ದಾಖಲೆ ಬೇಕು"
  • "ನನ್ನ ಮಗನ ಮೇಲೆ ಆರೋಪ ಬಂದಿದೆ, ಬಿಟ್ಟು ಕೊಡುವ ಮಾತಿಲ್ಲ"
  • ನಿರ್ಮಾಪಕರ ಭೇಟಿ ಬಳಿಕ ಮಾತನಾಡಿದ ನಟ ರವಿಚಂದ್ರನ್‌
"ಗಂಡ ಹೆಂಡತಿ ಜಗಳ ಬೀದಿಗೆ ಬಂದಿದೆ" ಸುದೀಪ್‌ ಬಗ್ಗೆ ರವಿಚಂದ್ರನ್‌ ಹೇಳಿದ್ದೇನು?  title=
Ravichandran

ಬೆಂಗಳೂರು: ನಟ ಕಿಚ್ಚ ಸುದೀಪ್‌ ಮತ್ತು ನಿರ್ಮಾಪಕ ಎಂ ಎನ್‌ ಕುಮಾರ್‌ ನಡುವಿನ ಅಡ್ವಾನ್ಸ್‌ ಜಟಾಪಟಿ ಮುಗಿಯುವ ಹಾಗೇ ಕಾಣುತ್ತಿಲ್ಲ. ಇದೀಗ ಈ ವಿಚಾರವಾಗಿ ನಟ ರವಿಚಂದ್ರನ್‌ ಪ್ರತಿಕ್ರಿಯಿಸಿದ್ದು, "ಗಂಡ ಹೆಂಡತಿ ಜಗಳ ಈಗ ಬೀದಿಗೆ ಬಂದಿದೆ" ಎಂದಿದ್ದಾರೆ. ಅಲ್ಲದೇ "ಸುದೀಪ್‌ ನನ್ನ ಮಗನಂತೆ, ಅವನ ಮೇಲೆ ಆರೋಪ ಬಂದಿದೆ. ಬಿಟ್ಟು ಕೊಡುವ ಮಾತಿಲ್ಲ" ಎಂದು ಹೇಳಿದ್ದಾರೆ. 

ಸುದೀಪ್ ಮತ್ತು ನಿರ್ಮಾಪಕ ಕುಮಾರ್ ನಡುವಿನ ವಿವಾದದ ಕುರಿತು ನಟ ರವಿಚಂದ್ರನ್ ಮಾತನಾಡಿದ್ದಾರೆ. ನಿರ್ಮಾಪಕರ ಭೇಟಿ ಬಳಿಕ ಮಾತನಾಡಿದ ರವಿಚಂದ್ರನ್‌, "ಸದ್ಯಕ್ಕೆ ಪರಿಸ್ಥಿತಿ ಸರಿಯಿಲ್ಲ. ಆಗ ಮನಸ್ಥಿತಿ ಕೂಡ ಸರಿ ಇರಲ್ಲ. ಮೊದಲು ಎಲ್ಲರೂ ಕೂಲ್‌ ಆಗಬೇಕು. ಆಮೇಲೆ ನಮಗೆ ಇಡೀ ಸ್ಟೋರಿ ಗೊತ್ತಿರಲ್ಲ. ಮಾಧ್ಯಮಗಳು ತೋರಿಸಿದ್ದೂ ಇಲ್ಲ ಅವರು ಹೇಳಿದ್ದನ್ನೇ ನಂಬಬೇಕು. ಪೂರ್ತಿ ವಿಚಾರ ನಮಗೂ ಗೊತ್ತಿಲ್ಲ, ಆದರೆ ಸುದೀಪ್‌ಗೆ ಹರ್ಟ್‌ ಆಗಿದ್ದು ಮಾತ್ರ ಸತ್ಯ" ಎಂದು ಹೇಳಿದರು. 

ಇದನ್ನೂ ಓದಿ: "ನನಗೆ ನ್ಯಾಯ ಬೇಕು".. ಸುದೀಪ್‌ ವಿರುದ್ಧ ಪ್ರೊಡ್ಯೂಸರ್‌ ಕುಮಾರ್ ಪ್ರೊಟೆಸ್ಟ್‌

"ಅದು ಎಷ್ಟು ಹರ್ಟ್‌ ಆಗಿದೆ. ಯಾವ ಕಾರಣಕ್ಕೆ ಅಷ್ಟೊಂದು ನೋವಾಗಿದೆ, ಅಥವಾ ಇವರಿಗೆ ಏನು ನೋವಾಗಿದ್ದು ಅನ್ನೋದು ನನಗೆ ಗೊತ್ತಿಲ್ಲ. ಇವರ ಮಾತುಗಳನ್ನು ಕೇಳಿ ಯಾವ ತೀರ್ಮಾನನು ತಗೋಳೊಕೆ ಆಗಲ್ಲ. ಎಲ್ಲರೂ ನಮ್ಮ ಮನೆಯವರೇ, ಸದ್ಯಕ್ಕೆ ಎಲ್ಲರೂ ಕೂಲ್‌ ಆಗಬೇಕು" ಎಂದರು.

"ನಾನು ಯಾರನ್ನು ಮಾತಿನಲ್ಲಿ ನಂಬಲ್ಲ. ದಾಖಲೆ ಬೇಕು. ನನ್ನ ಮುಂದೆ ದಾಖಲೆ ಇಡಬೇಕು. ದಾಖಲೆ ಕೊಟ್ಟ ಮೇಲೆ ಮಾತುಕತೆ ಏನೆಲ್ಲ ನಡಿದಿದೆ ಅದನ್ನು ತಿಳಿದುಕೊಳ್ಳಬೇಕು. ಅದೆಲ್ಲ ಎಷ್ಟು ಸತ್ಯ ಅನ್ನೋದನ್ನು ಲೆಕ್ಕ ಹಾಕಬೇಕು. ಆಮೇಲೆ ನಾನು ಸುದೀಪ್‌ ಬಳಿ ಮಾತಡಬೇಕೋ ಬೇಡವೋ ಅಂತ ತೀರ್ಮಾನ ಮಾಡ್ತಿನಿ" ಎಂದು ಹೇಳಿದರು.

"ಫಸ್ಟ್‌ ನಾನು ಕುಮಾರ್‌ಗೆ ಹೇಳೋದು, ಧರಣಿ ಬಿಟ್ಟು ಎದ್ದೇಳಿ. ಇದೆಲ್ಲ ಬೇಡ, ಕೂಲ್‌ ಆಗಿ ಮೊದಲು. ನನಗಿಂತ ಮೊದಲೇ ಅವರಿಬ್ಬರು ಒಟ್ಟಿಗೆ ಸಿನಿಮಾ ಮಾಡಿದವರು. ಏನೋ ಮಿಸ್‌ ಅಂಡರ್‌ಸ್ಟಾಂಡಿಂಗ್‌ ಬಂದಿದೆ. ಗಂಡ ಹೆಂಡಿ ಜಗಳ ಇದ್ದಂಗೆ ಇದು, ಆದರೆ ಈಗ ಬೀದಿಗೆ ಬಂದಿದೆ. ಇಬ್ಬರ ಮಧ್ಯೆ ಸರಿ ಮಾಡೋಕೆ ಆದ್ರೆ, ಸರಿ ಹೋದ್ರೆ ಅದಕ್ಕಿಂತ ಸಂತೋಷ ಬೇರೆಯಿಲ್ಲ" ಎಂದರು. 

"ಆದರೆ ಯಾರ ಮೇಲೂ ನಾವು ಈಗಲೇ ತೀರ್ಮಾ ತಗೋಳೋಕೆ ಆಗಲ್ಲ. ಇವರು ಸರಿನಾ, ಅವರು ಸರಿನಾ ನನಗೂ ಗೊತ್ತಿಲ್ಲ. ಈಗ ನನ್ನ ಮಗನ ಮೇಲೆ ಆರೋಪ ಬಂದಿದೆ. ನಾನು ಆ ಅಭಿಮಾನ ಬಿಟ್ಟು ಕೊಡಲ್ಲ" ಎಂದು ರವಿಚಂದ್ರನ್‌ ಹೇಳಿದರು.

ಇದನ್ನೂ ಓದಿ: Sudeep: ಸುದೀಪ್ ಮೇಲಿನ ಆರೋಪಗಳ ಹಿಂದೆ ಸೂರಪ್ಪ ಬಾಬು ಕೈವಾಡ?  

ಸುದೀಪ್‌ ಹಣ ತೆಗೆದುಕೊಂಡು ಸಿನಿಮಾ ಮಾಡುತ್ತಿಲ್ಲ ಎಂದು ನಿರ್ಮಾಪಕ ಕುಮಾರ್‌ ಆರೋಪ ಮಾಡಿದ್ದರು. ಅಲ್ಲದೇ ಸುದೀಪ್‌ ಪತ್ನಿ ಕೂಡ ತಮ್ಮಿಂದ ಹಣ ಪಡೆದಿದ್ದಾರೆ ಎಂದಿದ್ದರು. ಈ ಆರೋಪಗಳಿಂದ ಆಕ್ರೋಶಗೊಂಡ ಸುದೀಪ್‌ ನಿರ್ಮಾಪಕ ಕುಮಾರ್‌ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದಮ್ಮೆ ಹಾಕಿದ್ದಾರೆ. ಈ ಸಂಬಂಧ ಸುದೀಪ್‌ ಕೋರ್ಟ್‌ಗೆ ಹೋಗುತ್ತಿದ್ದಂತೆ ನಿರ್ಮಾಪಕ ಕುಮಾರ್‌ ಉಲ್ಟಾ ಹೊಡೆದು, ನಾನು ಅವರ ಮೇಲೆ ದೂರು ನೀಡಿಲ್ಲ ಮನವಿ ಮಾಡಿದ್ದೆ ಅಷ್ಟೇ ಎಂದಿದ್ದರು. ಇದಲ್ಲದೇ, ನಿನ್ನೆಯಿಂದ ಕುಮಾರ್‌ ಫಿಲ್ಮ್‌ ಚೇಂಬರ್‌ ಬಳಿ ಧರಣಿ ಕುಳಿತಿದ್ದಾರೆ. ನ್ಯಾಯ ಸಿಗುವವರೆಗೆ ಪ್ರೊಟೆಸ್ಟ್‌ ನಿಲ್ಲಿಸಲ್ಲ ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News