K Shivaram Death : ನಟ, ನಿವೃತ್ತ IAS ಅಧಿಕಾರಿ ಕೆ.ಶಿವರಾಂ ಇನ್ನಿಲ್ಲ

K Shivaram Death : ನಟ, ನಿವೃತ್ತ IAS ಅಧಿಕಾರಿ ಕೆ.ಶಿವರಾಂ  ನಿಧನರಾಗಿದ್ದಾರೆ.ಬೆಂಗಳೂರಿನ HCG ಆಸ್ಪತ್ರೆಯಲ್ಲಿ ಶಿವರಾಮ್ ಕೊನೆ ಉಸಿರೆಳೆದಿದ್ದಾರೆ.   

Written by - Ranjitha R K | Last Updated : Feb 29, 2024, 01:31 PM IST
  • ನಟ, ನಿವೃತ್ತ IAS ಅಧಿಕಾರಿ ಕೆ.ಶಿವರಾಂ ನಿಧನ
  • ಬೆಂಗಳೂರಿನ HCG ಆಸ್ಪತ್ರೆಯಲ್ಲಿ ವಿಧಿವಶ
  • ಮೋದಿ ರಸ್ತೆಯ ಸ್ವಗ್ರಹದಲ್ಲಿ ಅಂತಿಮ ದರ್ಶನ
K Shivaram Death : ನಟ, ನಿವೃತ್ತ IAS ಅಧಿಕಾರಿ ಕೆ.ಶಿವರಾಂ ಇನ್ನಿಲ್ಲ title=

ಬೆಂಗಳೂರು : K Shivaram Death :  ನಟ, ನಿವೃತ್ತ IAS ಅಧಿಕಾರಿ ಕೆ.ಶಿವರಾಂ  ನಿಧನರಾಗಿದ್ದಾರೆ. ಇತ್ತೀಚಿಗೆ ಹೃದಯಘಾತಕ್ಕೆ ಒಳಗಾಗಿದ್ದ ಅವರನ್ನು ಬೆಂಗಳೂರಿನ HCG ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವರಾಂ ಮೃತಪಟ್ಟಿದ್ದಾರೆ. 

ಕೆ, ಶಿವರಾಮ್ ವಿಧಿವಶ :ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸ್ಯಾಂಡಲ್‌ವುಡ್ ನಟ ಕೆ ಶಿವರಾಮ್ ಚಿಕಿತ್ಸೆ  ಇಹಲೋಕ ತ್ಯಜಿಸಿದ್ದಾರೆ.ಕೆ ಶಿವರಾಮ್ ಅವರ ದೀರ್ಘಕಾಲದ ಸ್ನೇಹಿತ ನಾಗೇಶ್ ಕಾಳೇನಹಳ್ಳಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಶಿವರಾಮ್ ಸಾವಿನ  ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ :  ಮೃಣಾಲ್ ಠಾಕೂರ್ ಸಹೋದರಿಯನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಅಕ್ಕ-ತಂಗಿಯ ಅಪರೂಪದ ಪೋಟೋ!

ಕನ್ನಡದಲ್ಲೇ ಐಎಎಸ್ ಪರೀಕ್ಷೆ : ಕೆ ಶಿವರಾಮ್ ಅವರು ಏಪ್ರಿಲ್ 6, 1953 ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪ ಜನಿಸಿದರು. 1985ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವರಾಂ, ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.  

ಬಾ ನಲ್ಲೆ ಮಧುಚಂದ್ರಕ್ಕೆ ಮೊದಲ ಚಿತ್ರ :1993ರಲ್ಲಿ ತೆರೆಗೆ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಬಾ ನಲ್ಲೆ ಮಧುಚಂದ್ರಕ್ಕೆ' ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಕೆ ಶಿವರಾಮ್, 'ವಸಂತ ಕಾವ್ಯ', 'ಸಾಂಗ್ಲಿಯಾನ ಭಾಗ 3', 'ಪ್ರತಿಭಟನೆ', 'ಯಾರಿಗೆ ಬೇಡ' ಚಿತ್ರಗಳಲ್ಲಿ ನಟಿಸಿದ್ದಾರೆ. 

ಇದನ್ನೂ ಓದಿ :  Prabhas: ಬಾಡಿಗೆ ಮನೆಯಲ್ಲಿ ಪ್ರಭಾಸ್ ರಾಯಲ್ ಲೈಫ್... ತಿಂಗಳ ಹೌಸ್‌ ರೆಂಟ್‌ ಎಷ್ಟು ಗೊತ್ತಾ?

ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆ : 2013 ರಲ್ಲಿ, ಕೆ. ಶಿವರಾಮ್ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ನಿವೃತ್ತರಾದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು. 2014 ರಲ್ಲಿ, ಅವರು ಜನತಾ ದಳ (ಜಾತ್ಯತೀತ) ಸದಸ್ಯರಾಗಿ, ಬಿಜಾಪುರ ಲೋಕಸಭಾ ಕ್ಷೇತ್ರದಿಂದ  ಸ್ಪರ್ಧಿಸಿ ರಮೇಶ್ ಜಿಗಜಿಣಗಿ ವಿರುದ್ಧ ಸೋತಿದ್ದರು. 2014 ರಲ್ಲಿ, ಮತ್ತೆ ಕಾಂಗ್ರೆಸ್‌ಗೆ ಸೇರಿಕೊಂಡರು. ನಂತರ ಅವರು ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News