ಮಹಿಳಾಪ್ರಧಾನ ʼತಪಸ್ಸಿʼ ಸಿನಿಮಾದಲ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್..!

V Ravichandran : ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಸಿನಿಮಾವಾಗಿರುವ ತಪಸ್ಸಿಯಲ್ಲಿ ಪ್ರಾಧ್ಯಾಪಕರಾಗಿ ಡಾಕ್ಟರ್ ವಿ ರವಿಚಂದ್ರನ್ ನಟಿಸ್ತಿದ್ದು, ಅಮ್ಮಯ್ರ ಗೋಸ್ವಾಮಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Written by - YASHODHA POOJARI | Edited by - Krishna N K | Last Updated : Mar 19, 2024, 07:02 PM IST
  • ಮಹಿಳಾ ಪ್ರಧಾನ ಸಿನಿಮಾದಲ್ಲಿ ಡಾಕ್ಟರ್‌ ವಿ. ರವಿಚಂದ್ರನ್
    ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಸಿನಿಮಾ
    ಸ್ಪೆನ್ಸರ್ ಮ್ಯಾಥ್ಯೂ ನಿರ್ದೇಶನದ ತಪಸ್ಸಿ ಚಿತ್ರದಲ್ಲಿ ರವಿಮಾಮ
ಮಹಿಳಾಪ್ರಧಾನ ʼತಪಸ್ಸಿʼ ಸಿನಿಮಾದಲ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್..! title=

Tapassi Kannada movie : ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಹೆಸರು ತಪಸ್ಸಿ..ಬೆಂಗಳೂರು ಮೂವೀಸ್ ಲಾಂಛನದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಸ್ಪೆನ್ಸರ್ ಮ್ಯಾಥ್ಯೂ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. 

ತಪಸ್ಸಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ರವಿಚಂದ್ರನ್, ಮಹಿಳಾ ಪ್ರಧಾನ ಸಿನಿಮಾ ಅಂದರೆ ರವಿಚಂದ್ರನ್ ಕರೆಯಬೇಕು ಅಲ್ವಾ ಅವರು? ಈ ಸಿನಿಮಾ ಮಾಡಿ ಮುಗಿಸಿದ್ದಾರೆ. ನನ್ನ ಭಾಗದ ಚಿತ್ರೀಕರಣವಷ್ಟೇ ಬಾಕಿ ಇದೆ. ಅದನ್ನು ಆರೇಳು ತಿಂಗಳಿನಿಂದ ನೀವೇ ಮಾಡಬೇಕು ಎಂಬ ಹಠ ಅವರದ್ದು. ಮ್ಯಾಥ್ಯೂ ನನಗೆ ತುಂಬಾ ಕ್ಲೋಸ್ ಫ್ರೆಂಡ್. ತುಂಬಾ ಶಿಸ್ತಿನಿಂದ ನಡೆದುಕೊಳ್ಳುವ ವ್ಯಕ್ತಿ. ರವಿ ಬೋಪಣ್ಣ ಸಿನಿಮಾದಿಂದ ನನಗೆ ಪರಿಚಯ. ಅದಕ್ಕೂ ಮುಂಚೆಯಿಂದಲೂ ಗಾಂಧಿನಗರದಲ್ಲಿ ಇದ್ದಾರೆ.  ಅವರೇ ಈ ಸ್ಟೋರಿ ಮಾಡಿದ್ದಾರೆ. ನೀವೇ ಮಾಡಬೇಕು. ಒಂದು ಸಾಮಾಜಿಕ ಸಂದೇಶ ಸಾರಬೇಕು. ತೂಕವಾದ ಪಾತ್ರ. ಇಡೀ ಸಿನಿಮಾಗೆ ನ್ಯಾಯ ಒದಗಿಸಲು ನನ್ನ ಸೆಲೆಕ್ಟ್ ಮಾಡಿದ್ದಾರೆ ಎಂದರು.

ಇದನ್ನೂ ಓದಿ:ಸಂವಿಧಾನದ ಮಹತ್ವ ಸಾರುತ್ತದೆ ಈ ಸಿನಿಮಾ , "ದಿ ರೂಲರ್ಸ್" ಚಿತ್ರದ ಟ್ರೈಲರ್ ಬಿಡುಗಡೆ

ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಮಾತನಾಡಿ, ರವಿಚಂದ್ರನ್ ಸರ್ ಅವರಿಂದಲೇ ಈ ಪ್ರಾಜೆಕ್ಟ್ ಶುರುವಾಗಿದೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಈ ಚಿತ್ರದಲ್ಲಿ ಸ್ಟ್ರಾಂಗ್ ಮೆಸೇಜ್ ಇದೆ. ಜನರಿಗೆ ಅದು ತಲುಪಬೇಕು ಎಂದರೆ ರವಿಚಂದ್ರನ್ ಸರ್ ಅಂತಹ ತಾಕತ್ತು ಇರುವ ವ್ಯಕ್ತಿ ಬಿಟ್ಟು ಬೇರೆ ಯಾರು ಇಲ್ಲ ಎನಿಸಿತು. ಇದು ಮಹಿಳಾ ಪ್ರಧಾನ ಸಿನಿಮಾ. ಇದ್ರಲ್ಲಿ ಒಂದು ಸ್ಟ್ರಾಂಗ್ ಮೆಸೇಜ್ ಇದೆ ಎಂದರು.

ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಸಿನಿಮಾವಾಗಿರುವ ತಪಸ್ಸಿಯಲ್ಲಿ ಪ್ರಾಧ್ಯಾಪಕರಾಗಿ ಡಾಕ್ಟರ್ ವಿ ರವಿಚಂದ್ರನ್ ನಟಿಸ್ತಿದ್ದು, ಅಮ್ಮಯ್ರ ಗೋಸ್ವಾಮಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ವಿನಯ ಪ್ರಸಾದ್, ಪ್ರಜ್ವಲ್, ಸಚಿನ್, ಅನುಷ ಕಿಣಿ, ಭಾಸ್ಕರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಇದನ್ನೂ ಓದಿ:‘ವೆಂಕ್ಯಾ’ನಿಗೆ ಸಿಕ್ತು ಸಿದ್ಧಾರೂಢರ ಆಶೀರ್ವಾದ.. ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

ತಪಸ್ಸಿ ಸಿನಿಮಾಗೆ ವಿರೇಶ್ ಕ್ಯಾಮರಾ ಹಿಡಿಯುತ್ತಿದ್ದು, ಅರುಣ್. ಪಿ.ಥಾಮಸ್ ಸಂಕಲನ, ಆರವ್ರಿಷಿಕ್ ಸಂಗೀತ ನಿರ್ದೇಶನವಿರಲಿದೆ. ಸ್ಪೆನ್ಸರ್ ಮ್ಯಾಥ್ಯೂ ನಿರ್ದೆಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದು, ಆರ್ ಗಂಗಾಧರ್ ಕಾರ್ಯಕಾರಿ ನಿರ್ಮಾಪಕನಾಗಿ ಸಾಥ್ ಕೊಟ್ಟಿದ್ದಾರೆ. ಬೆಂಗಳೂರು ಸುತ್ತಮುತ್ತ ‘ತಪಸ್ಸಿ’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News