ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಜೊತೆ‌ ಮದುವೆ ಫಿಕ್ಸ್!?.. ಲವ್ ವದಂತಿಗಳಿಗೆ ಬಿತ್ತು ಫುಲ್‌ಸ್ಟಾಪ್!!

Vijay Deverakonda and Rashmika Mandanna: ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ನಡುವಿನ ಸಂಬಂಧದ ವದಂತಿಗಳು ಹರಡಲು ಕಾರಣ ಕಳೆದ ಕೆಲವು ವರ್ಷಗಳಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಜಯ್ ಮತ್ತು ರಶ್ಮಿಕಾ ಒಬ್ಬರ ನಂತರ ಒಬ್ಬರು ಕಾಣಿಸಿಕೊಂಡರು. 

Written by - Savita M B | Last Updated : Nov 21, 2024, 07:40 AM IST
  • ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ತಮ್ಮ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಕಾಲಕಾಲಕ್ಕೆ ಸ್ಪಷ್ಟನೆ ನೀಡುತ್ತಲೇ ಇದ್ದಾರೆ
  • ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರನ್ನು ಪ್ರೀತಿಸುತ್ತಿದ್ದರಿಂದ ಈ ಕಾಮೆಂಟ್ ಮಾಡಿದ್ದಾರೆ
ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಜೊತೆ‌ ಮದುವೆ ಫಿಕ್ಸ್!?.. ಲವ್ ವದಂತಿಗಳಿಗೆ ಬಿತ್ತು ಫುಲ್‌ಸ್ಟಾಪ್!!  title=

Deverakonda and Rashmika marriage: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ತಮ್ಮ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಕಾಲಕಾಲಕ್ಕೆ ಸ್ಪಷ್ಟನೆ ನೀಡುತ್ತಲೇ ಇದ್ದಾರೆ. ಆದರೂ ಇಂತಹ ಸುದ್ದಿಗಳು ಬರುತ್ತಲೇ ಇವೆ. ಈ ಮಧ್ಯೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಇಬ್ಬರೂ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ಇರುವ ಪೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ-ಹಿಂದೂ ಆಗಿದ್ದ AR Rahman ತಂದೆಯ ಸಾವಿನ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇಕೆ? ಹಿಂದೂ ಆಗಿದ್ದಾಗ ಅವರ ನಿಜವಾದ ಹೆಸರೇನಾಗಿತ್ತು?

 ವಿಜಯ್ ದೇವರಕೊಂಡ ಫೋಟೋ ತೆಗೆದಿರುವ ಹಿನ್ನಲೆಯಲ್ಲೇ ರಶ್ಮಿಕಾ ಕೂಡ ಫೋಟೋ ತೆಗೆಸಿಕೊಂಡಿದ್ದಾರೆ.. ಇದರಿಂದ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿರುವುದು ಖಚಿತವಾಗಿದೆ.. ರಶ್ಮಿಕಾ ತನ್ನ ಸಹಾಯಕಿಯ ಮದುವೆಗೆ ಹೈದರಾಬಾದ್‌ಗೆ ಹೋಗಿದ್ದು, ವಿಜಯ್‌ ದೇವರಕೊಂಡ ಮನೆಯಲ್ಲಿ ನಟಿ ಸ್ಟೇ ಮಾಡಿದ್ದಾರೆ ಎನ್ನಲಾಗಿದೆ.. ಅದೇ ವೇಳೆ ರಶ್ಮಿಕಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ರಶ್ಮಿಕಾ ವಿಜಯ್ ಮನೆಯಲ್ಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಇತ್ತೀಚೆಗೆ, ವಿಜಯ್ ದೇವರಕೊಂಡ ಪ್ರೀತಿಯ ಬಗ್ಗೆ ಕೆಲವು ಕಾಮೆಂಟ್ ಮಾಡಿ "ಪ್ರೀತಿಯು ಆಗುತ್ತೇ ಹುಡುಗರೇ. ನೀವು ಇನ್ನೂ ಚಿಕ್ಕವರಾಗಿದ್ದೀರಿ ಆದ್ದರಿಂದ ಸ್ವಲ್ಪ ಸಮಯ ನೀಡಿ. ಪುರುಷರು ಮೊದಲು ಬೆಳೆಯಬೇಕು. ಪ್ರೀತಿ ಕೆಟ್ಟ ವಿಷಯವಲ್ಲ. ಆದರೆ ಅದಕ್ಕೆ ಸ್ವಲ್ಪ ಸಮಯ ಕೊಡಬೇಕು" ಎಂದಿದ್ದರು.. 

ಇದನ್ನೂ ಓದಿ-ಅಂದು ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದ ಈ ಚೆಲುವೆ.. ಇಂದು 170 ಕೋಟಿ ರೂಪಾಯಿ ಒಡತಿ! ಒಂದೇ ಸಿನಿಮಾದಿಂದ ಬದಲಾಯ್ತು ಹಣೆಬರಹ

 ಇಷ್ಟೇ ಅಲ್ಲ "30ರ ಹರೆಯದ ಪುರುಷರು ಪ್ರೀತಿಯ ವಿಚಾರದಲ್ಲಿ 20ರ ಮಧ್ಯದಲ್ಲಿರುವವರಿಗಿಂತ ಉತ್ತಮವಾಗಿ ಯೋಚಿಸುತ್ತಾರೆ. ಇದು ನನ್ನ ವೈಯಕ್ತಿಕ ಅನುಭವ. ನಮ್ಮ 20 ರಿಂದ 30 ವರ್ಷ ವಯಸ್ಸಿನಲ್ಲಿ ನಾವು ಅಸ್ಥಿರರಾಗಿದ್ದೇವೆ. ಯಾವುದು ಏನೆಂದು ನಿರ್ಧರಿಸಲು ಸಾಧ್ಯವಿಲ್ಲ. ಸಮಯ ಬಂದಾಗ ಅವು ತಾನಾಗೇ ಆಗುತ್ತವೆ. ಬಲವಂತದಿಂದ ಏನನ್ನೂ ಮಾಡಬೇಡಿ'' ಎಂದು ಹೇಳಿದ್ದಾರೆ... ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರನ್ನು ಪ್ರೀತಿಸುತ್ತಿದ್ದರಿಂದ ಈ ಕಾಮೆಂಟ್ ಮಾಡಿದ್ದಾರೆ ಎಂದು ನೆಟಿಜನ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಇದೀಗ ವಿಜಯ್ ದೇವರಕೊಂಡ ಅವರ ಈ ವಿಡಿಯೋ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News