ಹಠಾತ್ ಅನಾರೋಗ್ಯದಿಂದ ತಮಿಳು ನಟ ವಿಕ್ರಮ್ ಧಿಡೀರ್ ಆಸ್ಪತ್ರೆಗೆ ದಾಖಲು

ಶುಕ್ರವಾರದಂದು ತಮಿಳು ನಟ ವಿಕ್ರಮ್ ಅವರ ಆರೋಗ್ಯದಲ್ಲಿ ಧೀಡಿರ್ ಏರುಪೇರಾಗಿದ್ದರಿಂದಾಗಿ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Written by - Manjunath N | Last Updated : Jul 8, 2022, 04:08 PM IST
  • ಇತ್ತೀಚಿಗಷ್ಟೇ ಅವರು ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಮಹಾನ್ ಚಿತ್ರದಲ್ಲಿ ಕಾಣಿಸಿಕೊ0ಡಿದ್ದರು,
  • ವಿಶೇಷವೆಂದರೆ ಈ ಚಿತ್ರದಲ್ಲಿ ಅವರ ಮಗ ಧ್ರುವ ವಿಕ್ರಮ್ ನಾಯಕನಾಗಿ ನಟಿಸಿದ್ದಾರೆ.
ಹಠಾತ್ ಅನಾರೋಗ್ಯದಿಂದ ತಮಿಳು ನಟ ವಿಕ್ರಮ್ ಧಿಡೀರ್ ಆಸ್ಪತ್ರೆಗೆ ದಾಖಲು  title=

ಚೆನ್ನೈ: ಶುಕ್ರವಾರದಂದು ತಮಿಳು ನಟ ವಿಕ್ರಮ್ ಅವರ ಆರೋಗ್ಯದಲ್ಲಿ ಧೀಡಿರ್ ಏರುಪೇರಾಗಿದ್ದರಿಂದಾಗಿ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಅವರು ಆರೈಕೆಯಲ್ಲಿದ್ದು, ಇಂದು ಸಾಯಂಕಾಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇಂದು ಸಂಜೆ ಅವರು ನಿರ್ದೇಶಕ ಮಣಿರತ್ನಂ ಅವರ ಬಹುನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು ಎನ್ನಲಾಗಿದೆ.ಸದ್ಯ ನಟ ವಿಕ್ರಮ್ ಅವರ ಮುಂದೆ ಹಲವಾರು ಚಿತ್ರಗಳ ಯೋಜನೆಗಳಿವೆ, ಅದರಲ್ಲಿ ಪ್ರಮುಖವಾಗಿ ಪೊನ್ನಿಯಿನ್ ಸೆಲ್ವನ್, ನಾಗರಹಾವು ಮತ್ತು ಪಾ ರಂಜಿತ್ ಅವರ ನಿರ್ದೇಶನದ ಚಿತ್ರಗಳು ಸೇರಿವೆ.

ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ

ಇತ್ತೀಚಿಗಷ್ಟೇ ಅವರು ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಮಹಾನ್ ಚಿತ್ರದಲ್ಲಿ ಕಾಣಿಸಿಕೊ0ಡಿದ್ದರು, ವಿಶೇಷವೆಂದರೆ ಈ ಚಿತ್ರದಲ್ಲಿ ಅವರ ಮಗ ಧ್ರುವ ವಿಕ್ರಮ್ ನಾಯಕನಾಗಿ ನಟಿಸಿದ್ದಾರೆ.ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಕಂಡಿತ್ತು.ಅವರ ಇನ್ನೊಂದು ಬಹು ಬಹುನಿರೀಕ್ಷಿತ ಚಿತ್ರ ಕೋಬ್ರಾ ಆಗಸ್ಟ್ 11 ರಂದು ತೆರೆಗೆ ಬರಲಿದೆ, ಈ ಚಿತ್ರದಲ್ಲಿ ಮಾಜಿ ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್, ಕನ್ನಡ ನಟಿ ಶ್ರೀನಿಧಿ ಶೆಟ್ಟಿ, ಮಿರ್ನಾಲಿನಿ ರವಿ, ಕೆಎಸ್ ರವಿಕುಮಾರ್ ಮತ್ತು ಮಿಯಾ ಜಾರ್ಜ್ ಅವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಇದನ್ನೂ ಓದಿ: ಶಿಂಷಾ ಮಾರಮ್ಮನಿಗೆ ಇಂಗ್ಲೀಷ್ ನಲ್ಲಿ ಪತ್ರ: ಬಗೆ ಬಗೆಯ ಬೇಡಿಕೆಗಳು, ಹರಕೆಗಳು!!

ಇನ್ನೊಂದೆಡೆಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪೊನ್ನಿಯಿನ್ ಸೆಲ್ವನ್: ಭಾಗ 1, ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಜಯಂ ರವಿ, ಶರತ್ ಕುಮಾರ್ ಮತ್ತು ತ್ರಿಷಾ ನಟಿಸಿದ್ದು, ಈ ಚಿತ್ರವು ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News