Kabzaa Making : 30 ಲಾರಿ, 300 ಬೈಕ್‌, 70 ಜೀಪುಗಳು.. ʼಕಬ್ಜʼ ಅಂತಿಂತ ಸಿನಿಮಾ ಅಲ್ಲ ಗುರು..!

ಕಬ್ಜ ಸಿನಿಮಾ ಬಗ್ಗೆ ಕ್ರಿಯೇಟ್​ ಆಗಿರೋ ಕ್ರೇಜ್​ ಅಷ್ಟಿಷ್ಟಲ್ಲ. ಇಷ್ಟೊಂದು ಎಕ್ಸ್​ಪೆಕ್ಟೇಷನ್​ ಸುಮ್​ ಸುಮ್ಮನೆ ಮೂಡಿದ್ದಲ್ಲ. ಅದರ ಹಿಂದೆ ನಿರ್ದೇಶಕ ಆರ್​. ಚಂದ್ರು ಅವರ ಪರಿಶ್ರಮ ಇದೆ. ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ಕೆಲಸ ಮಾಡಿದ ದೊಡ್ಡ ಟೀಮ್​ ಇದೆ. ರೆಟ್ರೋ ಕಾಲದ ಕಥೆಯನ್ನ ತೆರೆಗೆ ತರೋದು ಅಂದ್ರೆ ಸುಲಭ ಅಲ್ಲ. ಆ ಕಾಲದ ರೀತಿ ಕಾಣೋಕೆ ಪ್ರಾಪರ್ಟೀಸ್​ ಬೇಕು. ಅದನ್ನೆಲ್ಲ ಹೊಂದಿಸುವಲ್ಲಿ ಆರ್​. ಚಂದ್ರು ಟೀಮ್​ ಸಿಕ್ಕಾಪಟ್ಟೆ ಎಫರ್ಟ್​ ಹಾಕಿದೆ. ಅದಕ್ಕೆ ಸಾಕ್ಷಿಯೇ ಈ ಸಿನಿಮಾದಲ್ಲಿ ಇರುವ ಕಾರುಗಳು ಕಲೆಕ್ಷನ್​.

Written by - YASHODHA POOJARI | Edited by - Krishna N K | Last Updated : Mar 6, 2023, 03:56 PM IST
  • ಕಬ್ಜ ಸಿನಿಮಾ ಬಗ್ಗೆ ಕ್ರಿಯೇಟ್​ ಆಗಿರೋ ಕ್ರೇಜ್​ ಅಷ್ಟಿಷ್ಟಲ್ಲ.
  • ಅದರ ಹಿಂದೆ ನಿರ್ದೇಶಕ ಆರ್​. ಚಂದ್ರು ಅವರ ಪರಿಶ್ರಮ ಇದೆ.
  • ರೆಟ್ರೋ ಕಾಲದ ಕಥೆಯನ್ನ ತೆರೆಗೆ ತರೋದು ಅಂದ್ರೆ ಸುಲಭ ಅಲ್ಲ.
Kabzaa Making : 30 ಲಾರಿ, 300 ಬೈಕ್‌, 70 ಜೀಪುಗಳು.. ʼಕಬ್ಜʼ ಅಂತಿಂತ ಸಿನಿಮಾ ಅಲ್ಲ ಗುರು..! title=

Kabzaa movie making : ಕಬ್ಜ ಸಿನಿಮಾ ಬಗ್ಗೆ ಕ್ರಿಯೇಟ್​ ಆಗಿರೋ ಕ್ರೇಜ್​ ಅಷ್ಟಿಷ್ಟಲ್ಲ. ಇಷ್ಟೊಂದು ಎಕ್ಸ್​ಪೆಕ್ಟೇಷನ್​ ಸುಮ್​ ಸುಮ್ಮನೆ ಮೂಡಿದ್ದಲ್ಲ. ಅದರ ಹಿಂದೆ ನಿರ್ದೇಶಕ ಆರ್​. ಚಂದ್ರು ಅವರ ಪರಿಶ್ರಮ ಇದೆ. ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ಕೆಲಸ ಮಾಡಿದ ದೊಡ್ಡ ಟೀಮ್​ ಇದೆ. ರೆಟ್ರೋ ಕಾಲದ ಕಥೆಯನ್ನ ತೆರೆಗೆ ತರೋದು ಅಂದ್ರೆ ಸುಲಭ ಅಲ್ಲ. ಆ ಕಾಲದ ರೀತಿ ಕಾಣೋಕೆ ಪ್ರಾಪರ್ಟೀಸ್​ ಬೇಕು. ಅದನ್ನೆಲ್ಲ ಹೊಂದಿಸುವಲ್ಲಿ ಆರ್​. ಚಂದ್ರು ಟೀಮ್​ ಸಿಕ್ಕಾಪಟ್ಟೆ ಎಫರ್ಟ್​ ಹಾಕಿದೆ. ಅದಕ್ಕೆ ಸಾಕ್ಷಿಯೇ ಈ ಸಿನಿಮಾದಲ್ಲಿ ಇರುವ ಕಾರುಗಳು ಕಲೆಕ್ಷನ್​.

ಕಬ್ಜ ಅಂದ್ರೆ ಬರೀ ಸಿನಿಮಾ ಅಲ್ಲ. ಅದು ನಿರ್ದೇಶಕ/ನಿರ್ಮಾಪಕ ಆರ್​. ಚಂದ್ರು ಕಂಡ ಬಹುದೊಡ್ಡ ಕನಸು. ಅದನ್ನು ನನಸಾಗಿಸೋಕೆ ಕೋಟಿ ಕೋಟಿ ಹಣ ಸುರಿಯಲಾಗಿದೆ. ಕ್ವಾಲಿಟಿಯಲ್ಲಿ ಕಾಂಪ್ರಮೈಸ್​ ಆಗುವ ಮಾತೇ ಇಲ್ಲ. ಇದು ಚಂದ್ರು ಪಾಲಿಸಿ. ಕಬ್ಜ ಸಿನಿಮಾದಲ್ಲಿ ಕಾಣಿಸುವ ಕಾರುಗಳನ್ನು ನೋಡಿದ್ರೆ ಗೊತ್ತಾಗುತ್ತೆ ನಿರ್ದೇಶಕರ ವಿಷನ್​ ಎಂಥದ್ದು ಅಂತ.

ಇದನ್ನೂ ಓದಿ: ಇಲ್ಲಿದೆ ನೋಡಿ ಕಬ್ಜ ಚಿತ್ರದಲ್ಲಿ ನಟಿಸಿರುವ ಕಲಾವಿದರ ಲಿಸ್ಟ್‌

ಇಂಡಿಯನ್​ ರಿಯಲ್​ ಸ್ಟಾರ್​ ಉಪೇಂದ್ರ, ಕಿಚ್ಚ ಸುದೀಪ್​, ಶ್ರೀಯಾ ಶರಣ್​ ಅವರ ಅಭಿಮಾನಿಗಳಿಗೆ ‘ಕಬ್ಜ’ ಸಿನಿಮಾ ಎಂದರೆ ಮನರಂಜನೆಯ ಹಬ್ಬ. ಪಾತ್ರಗಳ ರೀತಿಯೇ ಈ ಸಿನಿಮಾದಲ್ಲಿ ಆ ಕಾಲದ ಕಾರುಗಳು, ಬೈಕ್​ಗಳು, ಲಾರಿಗಳು ಗಮನ ಸೆಳೆಯಲಿವೆ. ಈಗಾಗಲೇ ಟ್ರೇಲರ್​ನಲ್ಲಿ ಅವುಗಳ ಝಲಕ್​ ಕಾಣ್ಸಿದೆ. ಮಿರಮಿರ ಮಿಂಚುವ ಕಾರುಗಳು ಹೈಲೈಟ್​ ಆಗಿವೆ.

ಕಬ್ಜ ಶೂಟಿಂಗ್​ಗಾಗಿ ಕಲಾ ಫಾರ್ಮ್​ನಿಂದ 30 ವಿಂಟೇಜ್​ ಕಾರುಗಳನ್ನ ತರಿಸಲಾಗಿತ್ತು. ಬೇರೆ ಬೇರೆ ಕಡೆಗಳಿಂದ 30 ಲಾರಿಗಳನ್ನ ತರಿಸಿ ಶೂಟಿಂಗ್​ ಮಾಡಲಾಗಿದೆ. ಬರೋಬ್ಬರಿ 300 ಬೈಕ್​ಗಳು ಬಳಕೆ ಆಗಿವೆ. 70 ಜೀಪುಗಳು ಕೂಡ ಅಬ್ಬರಿಸುತ್ತವೆ. 1945ರ ಕಾಲದ ಸೀನ್​ಗಳನ್ನ ತೆರೆ ಮೇಲೆ ಮೂಡಿಸೋಕೆ ಕಬ್ಜ ತಂಡ ಇಷ್ಟೆಲ್ಲ ಕಷ್ಟಪಟ್ಟಿದೆ. ಒಟ್ಟಿನಲ್ಲಿ ಸಿನಿಮಾ ನೋಡೋರಿಗೆ ರೆಟ್ರೋ ಜಮಾನದ ಫೀಲ್​ ಆಗಬೇಕು. ನೋಡಿದವರೆಲ್ಲ ವಾವ್​ ಅನ್ನಲೇಬೇಕು ಎನ್ನುವಂತಹ ಗುರಿ ಇಟ್ಕೊಂಡು ಮಾಡಿದ ಪ್ರಯತ್ನವೆಲ್ಲ ತೆರೆ ಮೇಲೆ ಕಾಣಿಸ್ತಿದೆ.

ಆರ್​. ಚಂದ್ರು ಒಬ್ಬ ಛಲಗಾರ. ಅಂದುಕೊಂಡ ರೀತಿಯೇ ಸಿನಿಮಾ ಮೂಡಿಬರಬೇಕು ಅಂತ ಪಟ್ಟು ಹಿಡಿಯುವ ಹಠವಾದಿ. ಕೊರೊನಾ ಲಾಕ್​ಡೌನ್​ ಕಾರಣಕ್ಕೆ ಶೂಟಿಂಗ್​ಗೆ ಅಡೆಚಣೆ ಉಂಟಾಗಿತ್ತು. ಆ ರೀತಿ ಎಷ್ಟೇ ಕಷ್ಟ ಬಂದ್ರೂ ಹಿಡಿದ ಕೆಲಸವನ್ನು ಅವರು ಅರ್ಧಕ್ಕೆ ಬಿಟ್ಟಿಲ್ಲ. ಅಂದುಕೊಂಡ ರೀತಿಯೇ ‘ಕಬ್ಜ’ ಲೋಕವನ್ನ ಅವರು ಕಟ್ಟಿದ್ದಾರೆ. ಅದರಲ್ಲಿನ ಪ್ರತಿಯೊಂದು ವಸ್ತುಗಳೂ ಪ್ರೇಕ್ಷಕರ ಕಣ್ಣಿಗೆ ಹಬ್ಬ.

ಇದನ್ನೂ ಓದಿ: Jr NTR:ಈ ನಟಿಯ ಹುಟ್ಟು ಹಬ್ಬಕ್ಕೆ ಜೂನಿಯರ್ ಎನ್‌ಟಿಆರ್ ಕಡೆಯಿಂದ ಗಿಫ್ಟ್‌!

ವಿಂಟೇಜ್​ ಕಾರುಗಳನ್ನ ಇಟ್ಕೊಂಡು ನೂರಾರು ದಿನಗಳ ಕಾಲ ಶೂಟಿಂಗ್​​ ಮಾಡೋದು ಸುಲಭ ಅಲ್ಲ. ಆ್ಯಕ್ಷನ್​ ಸೀಕ್ವೆನ್ಸ್​ ಮಾಡುವಾಗ ಮೈಯೆಲ್ಲ ಕಣ್ಣಾಗಿರಬೇಕು. ಒಂದು ಕಾರಿಗೂ ಹಾನಿ ಆಗದಂತೆ ನೋಡಿಕೊಳ್ಳಬೇಕು. ಯಾಕೆಂದ್ರೆ ಈ ವಾಹನಗಳಿಗೆ ಬೆಲೆ ಕಟ್ಟೋಕಾಗಲ್ಲ. ಇಂಥ ಸಾಕಷ್ಟು ಚಾಲೆಂಜ್​ಗಳ ನಡುವೆಯೇ ‘ಕಬ್ಜ’ ಸಿನಿಮಾ ನಿರ್ಮಾಣ ಆಗಿದೆ. 1945ರಿಂದ 1987ರವರೆಗೆ ಸಾಗುವ ಕಥೆಯಲ್ಲಿ ಯಾವ ಯಾವ ರೀತಿ ವಾಹನಗಳು ಬರುತ್ತವೋ ಅದೆನ್ನೆಲ್ಲ ಕಷ್ಟಪಟ್ಟು ಸಂಗ್ರಹಿಸಿ ಶೂಟಿಂಗ್​ ಮಾಡಲಾಗಿದೆ.

ಆರ್​. ಚಂದ್ರು ಅವರ ಈ ಪರಿಶ್ರಮದಿಂದಾಗಿ ಎಲ್ಲರೂ ಕಬ್ಜ ಚಿತ್ರದ ಬಗ್ಗೆ ಮಾತಾಡುವಂತಾಗಿದೆ. ಕ್ವಾಲಿಟಿ ಅಂದ್ರೆ ಕಬ್ಜ, ಕಬ್ಜ ಅಂದ್ರೆ ಕ್ವಾಲಿಟಿ ಅಂತ ಎಲ್ಲರೂ ಕಮೆಂಟ್​ ಮಾಡ್ತಿದ್ದಾರೆ. ಮೇಕಿಂಗ್​ ಸ್ಟೈಲ್​ ನೋಡಿ ಪರಭಾಷೆಯ ಮಂದಿ ಬಾಯಿ ಮೇಲೆ ಬೆರಳು ಇಟ್ಕೊಂಡಿದಾರೆ. ಕಬ್ಜ ಬ್ಲಾಕ್​ ಬಸ್ಟರ್​ ಹಿಟ್​ ಆಗೋದ್ರಲ್ಲಿ ಅನುಮಾನವೇ ಇಲ್ಲ ಎಂಬ ಟಾಕ್​ ಕ್ರಿಯೇಟ್​ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News