Happy Birthday Nayanthara : ಸಾಮಾನ್ಯ ಮಹಿಳೆ ʼಲೇಡಿ ಸೂಪರ್‌ ಸ್ಟಾರ್‌ʼ ಆಗಿದ್ದು ಹೇಗೆ..!

ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕಿಯರ ಅವಧಿ ಸಿನಿರಂಗಕ್ಕೆ ಹೊಸ ಮುಖ ಕಾಲಿಡುವರೆಗೂ ಎನ್ನುವ ಮಾತು ಸಿನಿರಂಗದಲ್ಲಿದೆ. ಆದ್ರೆ, ಇಂತಹ ಮಾತನ್ನು ಸುಳ್ಳು ಮಾಡಿ ʼಲೇಡಿ ಸೂಪರ್‌ ಸ್ಟಾರ್‌ʼ ಆಗಿ ದಕ್ಷಿಣ ಭಾರತದ ಅಗ್ರಮಾನ್ಯ ಮಹಿಳಾ ನಟಿಯಲ್ಲಿ ಒಬ್ಬರಾಗಿ ನಯನತಾರ ಮಿಂಚುತ್ತಿದ್ದಾರೆ. ಇಂದು ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಆಂಕರ್‌, ಮಾಡೇಲ್‌ ಆಗಿ ಸಿನಿರಂಗಕ್ಕೆ ಕಾಲಿಟ್ಟ ನಟಿಯ ಹಿನ್ನೆಲೆ ನೋಡಿ ಬರೋಣ.

Written by - Krishna N K | Last Updated : Nov 18, 2022, 11:56 AM IST
  • ನಯನತಾರಾ ಅವರ ಹುಟ್ಟು ಹೆಸರು ಡಯಾನಾ ಮರಿಯಮ್ ಕುರಿಯನ್
  • ಕರ್ನಾಟಕದಲ್ಲಿ ಮಲಯಾಳಿ ಪೋಷಕರಿಗೆ ಜನಿಸಿದ ನಯನತಾರಾ
  • ಕನ್ನಡದ ಸೂಪರ್‌ ಸಿನಿಮಾ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚಿದ್ದಾರೆ
Happy Birthday Nayanthara : ಸಾಮಾನ್ಯ ಮಹಿಳೆ ʼಲೇಡಿ ಸೂಪರ್‌ ಸ್ಟಾರ್‌ʼ ಆಗಿದ್ದು ಹೇಗೆ..! title=

Happy Birthday Nayanthara : ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕಿಯರ ಅವಧಿ ಸಿನಿರಂಗಕ್ಕೆ ಹೊಸ ಮುಖ ಕಾಲಿಡುವರೆಗೂ ಎನ್ನುವ ಮಾತು ಸಿನಿರಂಗದಲ್ಲಿದೆ. ಆದ್ರೆ, ಇಂತಹ ಮಾತನ್ನು ಸುಳ್ಳು ಮಾಡಿ ʼಲೇಡಿ ಸೂಪರ್‌ ಸ್ಟಾರ್‌ʼ ಆಗಿ ದಕ್ಷಿಣ ಭಾರತದ ಅಗ್ರಮಾನ್ಯ ಮಹಿಳಾ ನಟಿಯಲ್ಲಿ ಒಬ್ಬರಾಗಿ ನಯನತಾರ ಮಿಂಚುತ್ತಿದ್ದಾರೆ. ಇಂದು ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಆಂಕರ್‌, ಮಾಡೇಲ್‌ ಆಗಿ ಸಿನಿರಂಗಕ್ಕೆ ಕಾಲಿಟ್ಟ ನಟಿಯ ಹಿನ್ನೆಲೆ ನೋಡಿ ಬರೋಣ.

ನಯನತಾರಾ (38) ಅವರ ಹುಟ್ಟು ಹೆಸರು ಡಯಾನಾ ಮರಿಯಮ್ ಕುರಿಯನ್. ಕರ್ನಾಟಕದಲ್ಲಿ ಮಲಯಾಳಿ ಪೋಷಕರಿಗೆ ಜನಿಸಿದ ನಯನತಾರಾ ತನ್ನ ಆರಂಭಿಕ ದಿನಗಳನ್ನು ಬೆಂಗಳೂರು, ದೆಹಲಿ ಮತ್ತು ಗುಜರಾತ್‌ನಲ್ಲಿ ಕಳೆದರು. ಅಂತಿಮವಾಗಿ ತನ್ನ ತಂದೆಯ ಮೂಲ ಸ್ಥಳವಾದ ಕೇರಳದ ತಿರುವಲ್ಲಾದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದರು. ಕೆಲವು ತಿಂಗಳ ಹಿಂದೆ, ನಯನತಾರಾ ಅವರ ನಿರೂಪಕಿಯಾಗಿದ್ದ ದಿನಗಳ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪಕ್ಕದ ಮನೆಯ ಹುಡುಗಿಯಂತಿದ್ದ ನಯನತಾರ ರೂಪಾಂತರಗೊಂಡು ಅದ್ಭುತ ನಟಿಯಾಗಿ ಮಾರ್ಪಟ್ಟಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇದು ನಟಿಯ ದೀರ್ಘ ಮತ್ತು ನಿರಂತರ ಶ್ರಮದ ಫಲ.

ಇದನ್ನೂ ಓದಿ: ನಾನು ಕನ್ನಡಿಗರ ದಾಸ ಅವರ ಮುಂದಷ್ಟೇ ಕೈಕಟ್ಟಿ ನಿಲ್ಲುತ್ತೇನೆ : ʼಕ್ರಾಂತಿʼ ನನ್ನ ಸೆಲೆಬ್ರೆಟಿಗಳ ಸಿನಿಮಾ..!

ಆಂಕರ್ ಮತ್ತು ಮಾಡೆಲ್ ಆಗಿದ್ದ ನಯನತಾರ ಅವರಿಗೆ ಮನಸ್ಸಿನಕ್ಕರೆ (2003) ಮಲಯಾಳಂ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಅವಕಾಶ ಒದಗಿಬಂತು. ಹಿಂಜರಿಕೆಯಿಂದ, 19 ವರ್ಷದ ಡಯಾನಾ ನಟಿಸಲು ಒಪ್ಪಿಕೊಂಡರು, ಅದು ಹಿಟ್ ಆಯಿತು. ಇನ್ನಷ್ಟು ಅವಕಾಶಗಳು ನಯನಾ ಅವರನ್ನು ಹುಡುಗಿಕೊಂಡು ಬಂದವು. ಅವುಗಳಲ್ಲಿ ಶರತ್‌ಕುಮಾರ್ ಅವರ ತಮಿಳು ಚಿತ್ರ ʼಅಯ್ಯʼ (2005). ಈ ಚಿತ್ರ ಬಿಡುಗಡೆಯಾಗುವ ಮೊದಲೇ, ರಜನಿಕಾಂತ್ ಅವರ ಚಂದ್ರಮುಖಿ (2005) ಸಿನಿಮಾಗೆ ನಯನತಾರಾ ಅವರನ್ನು ಆಯ್ಕೆ ಮಾಡಲಾಯಿತು. ಚೊಚ್ಚಲ ಪ್ರವೇಶದ ಎರಡು ವರ್ಷಗಳಲ್ಲಿ, ನಯನತಾರಾ ಸೂಪರ್‌ಸ್ಟಾರ್ ಜೊತೆ ನಟಿಸಿ ಸೈ ಎನಿಸಿಕೊಂಡರು. 

ನಯನತಾರಾ ಅವರು ತೆಲುಗು ಚಲನಚಿತ್ರೋದ್ಯಮಕ್ಕೆ ಲಕ್ಷ್ಮಿ (2006) ಸಿನಿಮಾದ ಮೂಲಕ ಪ್ರವೇಶಿಸಿದರು. ಇದು ವರ್ಷದ ಅತಿದೊಡ್ಡ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಅಂದಿನಿಂದ, ಸೂಪರ್ಸ್ಟಾರ್ಡಮ್ಗೆ ನಟಿಯ ಎಂಟ್ರೀ ಆಯಿತು. ಆದರೂ, ಅವರು ಕೆಲವು ವಿಶಿಷ್ಟ ಪಾತ್ರಗಳನ್ನು ಮಾಡಲು ಮುಂದಾಗಿ ಅದಕ್ಕಾಗಿ ಅವರು ದಿವಂಗತ ಚಿತ್ರನಿರ್ಮಾಪಕ ಜನನಾಥನ್ ಅವರ ಚಿತ್ರ ಇ. ಸಿನಿಮಾದಲ್ಲಿ ನಟ ಜೀವಾ ಜೊತೆ ಬಾರ್ ಡ್ಯಾನ್ಸರ್ ಪಾತ್ರವನ್ನು ನಿರ್ವಹಿಸಿದರು. ಹೀಗೆ ವಿಭಿನ್ನ ಪಾತ್ರಗಳಲ್ಲಿ ನಯನಾ ನಟಿಸಿದ್ದಾರೆ.

ಇದನ್ನೂಓದಿ: ʼಹಾಳ್‌ ಮಾಡೋಕೆ ಹತ್ತು ಜನ ಇದ್ರೆ ಕಾಯೋಕಂತ ಸಾವಿರ ಜನ ಇರ್ತಾರೆʼ : ಫ್ಯಾನ್ಸ್‌ನ ಹೊಗಳಿದ DBoss

ವಿಶೇಷ ಅಂದ್ರೆ ನಯನತಾರಾ ಮೊದಲು ತುಂಬಾ ದಪ್ಪವಾಗಿದ್ದರು. ಸತತ ಪರಿಶ್ರಮದಿಂದ ಅವರು ಬಳುಕುವ ಬಳ್ಳಿಯಂತಾದರು. ಅದಕ್ಕೆ ಪ್ರಭಾಸ್‌ ಜೊತೆ ನಟಿಸಿದ ಬಿಲ್ಲಾ ಸಿನಿಮಾವೇ ಸಾಕ್ಷಿ. ಯಾರಡಿ ನೀ ಮೋಹಿನಿ, ಬಾಸ್ ಎಂಜಿರ ಭಾಸ್ಕರನ್, ಶ್ರೀ ರಾಮ ರಾಜ್ಯಂ, ರಾಜಾ ರಾಣಿ ಮತ್ತು ನಾನು ರೌಡಿ ಧಾನ್ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಸಿನಿ ಪ್ರೇಕ್ಷರ ಮನೆ ಗೆದ್ದರು.

ಇನ್ನು ಕನ್ನಡಕ್ಕೆ ಕಾಲಿಟ್ಟ ನಟಿ ಸೂಪರ್‌ ಸ್ಟಾರ್‌ ಉಪೇಂದ್ರ ಅವರ ಜೊತೆ ಸೂಪರ್‌ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಹತ್ತಿರವಾದರು. ಹೆಚ್ಚಾಗಿ ಕನ್ನಡ ಸಿನಿಮಾ ಮಾಡಿಲ್ಲವೆಂದರೂ ನಯನತಾರ ಎಲ್ಲರಿಗೂ ಚಿರಪರಿಚಿತ. ಸದ್ಯ 38ನೇ ವಯಸ್ಸಿಗೆ ಕಾಲಿಟ್ಟ ಸುಂದರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುವ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News