Divorce Rumors: ಈ ಕಾರಣಕ್ಕೆ ದೂರ ಉಳಿದಿದ್ದೇವೆ..! ವಿಚ್ಛೇದನದ ಬಗ್ಗೆ ಜ್ಯೋತಿಕಾ ಸೂರ್ಯ ಕ್ಲಾರಿಟಿ

Jyothika Suriya divorce rumors update: ನಟಿ ಜ್ಯೋತಿಕಾ ಮತ್ತು ನಟ ಸೂರ್ಯ ವಿಚ್ಛೇದನ ಪಡೆಯುತ್ತಿದ್ದಾರೆ, ಅದಕ್ಕಾಗಿಯೇ ಜ್ಯೋತಿಕಾ ತನ್ನ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಈ ಕುರಿತು ನಟಿ ಸ್ಪಷ್ಟತೆ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.

Written by - Krishna N K | Last Updated : Jan 27, 2024, 12:26 PM IST
  • ಜ್ಯೋತಿಕಾ ಮತ್ತು ನಟ ಸೂರ್ಯ ವಿಚ್ಛೇದನ ಪಡೆಯುತ್ತಿದ್ದಾರೆ
  • ನಟಿ ಜ್ಯೋತಿಕಾ ತನ್ನ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ
  • ಸೂಪರ್‌ ಸ್ಟಾರ್‌ ನಟ ಸೂರ್ಯ ಮತ್ತು ಜ್ಯೋತಿಕಾ ದೂರವಾಗಲಿದ್ದಾರೆ
Divorce Rumors: ಈ ಕಾರಣಕ್ಕೆ ದೂರ ಉಳಿದಿದ್ದೇವೆ..! ವಿಚ್ಛೇದನದ ಬಗ್ಗೆ ಜ್ಯೋತಿಕಾ ಸೂರ್ಯ ಕ್ಲಾರಿಟಿ title=

Clarity on Suriya Jyothika relationship : ಭಾರತೀಯ ಚಿತ್ರರಂಗದಲ್ಲಿ ಆಗಾಗ ನಟ ನಟಿಯರ ಡಿವೋರ್ಸ್‌ ಸುದ್ದಿಗಳು ಮುನ್ನೆಲೆಗೆ ಬರುತ್ತಿವೆ. ಇತ್ತೀಚಿಗೆ ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ವಿಚ್ಛೇದನ ಸುದ್ದಿ ಸದ್ದು ಮಾಡಿತ್ತು. ಇದೀಗ ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ಸೂರ್ಯ ಮತ್ತು ಜ್ಯೋತಿಕಾ ದೂರವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು.. ನಟ ಸೂರ್ಯ ಮತ್ತು ಜ್ಯೋತಿಕಾ ಇಂಡಿಯನ್‌ ಸಿನಿರಂಗದಕ್ಕ ಕ್ಯೂಟ್‌ ಜೋಡಿಗಳಲ್ಲಿ ಒಂದು. ಇಬ್ಬರು ಒಟ್ಟಿಗೆ ಅನೇಕ ಬ್ಲಾಕ್‌ಬಸ್ಟರ್ ಹಿಟ್‌ ಸಿನಿಮಾಗಳನ್ನು ಸಹ ನೀಡಿದ್ದಾರೆ. ಶೂಟಿಂಗ್‌ ವೇಳೆ ಪರಿಚಯವಾಗಿದ್ದ ಜೋಡಿ ನಡುವೆ ಪ್ರೀತಿ ಹುಟ್ಟಿತ್ತು, ನಂತರ ಮದುವೆಯಾಗಿತ್ತು. ಸಧ್ಯ ಇಬ್ಬರ ಮಕ್ಕಳ ಜೊತೆ ಸುಖ ಜೀವನ ನಡೆಸುತ್ತಿದ್ದಾರೆ. 

ಇದನ್ನೂ ಓದಿ:ಗಣರಾಜ್ಯೋತ್ಸವದಂದು ಓಟಿಟಿಗೆ ಲಗ್ಗೆಯಿಟ್ಟ ಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಬಿ!

ಆದರೆ ಇತ್ತೀಚೆಗಷ್ಟೇ ಜ್ಯೋತಿಕಾ ಮುಂಬೈಗೆ ತೆರಳಿದ್ದು, ಕೆಲವು ವರ್ಷಗಳಿಂದ ಅಲ್ಲಿಯೇ ಇದ್ದಾರೆ ಎನ್ನಲಾಗಿದೆ. ಇದರೊಂದಿಗೆ ವದಂತಿಯೊಂದು ಹೊರಬಿದ್ದಿದ್ದು, ಜ್ಯೋತಿಕಾ ಮತ್ತು ಸೂರ್ಯ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ನಟಿ ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ವಾಸ್ತವವಾಗಿ, ಕಳೆದ ಕೆಲವು ತಿಂಗಳುಗಳಿಂದ ಈ ಬಗ್ಗೆ ವಿವಿಧ ವದಂತಿಗಳು ಹರಡುತ್ತಿವೆ, ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯು ಸಹ ಶುರುವಾಗಿದೆ. ಆದರೆ ಈ ಕುರಿತು ಸೂರ್ಯ ಅಥವಾ ಜ್ಯೋತಿಕಾ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಅದು ನಿಜವೆಂದು ಎಲ್ಲರೂ ಭಾವಿಸಿದ್ದರು. ಇದೀಗ ಜ್ಯೋತಿಕಾ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 

ಇದನ್ನೂ ಓದಿ: ಬಂದೇ ಬಿಡ್ತು ಬಿಗ್‌ಬಾಸ್ ಫಿನಾಲೆ; ಕಾಯ್ತಿದೆ ಸೆಲಬ್ರೇಷನ್‌ ಸರಮಾಲೆ!

ಜ್ಯೋತಿಕಾ ಮದುವೆಯಾದ ನಂತರ ಸಿನಿಮಾಗಳಲ್ಲಿ ನಟಿಸುವುದಲ್ಲಿ ನಿಲ್ಲಿಸಿದ್ದರು. ಇತ್ತೀಚೆಗೆ ಅವರು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಸಧ್ಯ ಎರಡು ಬಾಲಿವುಡ್ ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ. ಆ ಶೂಟಿಂಗ್‌ಗೆ ಹೋಗುವುದಕ್ಕಾಗಿ ಮತ್ತು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರು ಮುಂಬೈಗೆ ತೆರಳಿದ್ದಾರೆ. ಶೂಟಿಂಗ್ ಹಾಗೂ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗಬಾರದು ಅಂತ ಈ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಚನೈಗೆ ಮರಳುವುದಾಗಿ ತಿಳಿಸಿದ್ದಾರೆ.

ಇನ್ನು ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಜ್ಯೋತಿಕಾ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಅವರ 'ಕಥಲ್' ಚಿತ್ರ ಒಟಿಟಿಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಉತ್ತಮ ಪ್ರತಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ, ಜ್ಯೋತಿಕಾ ನಟನೆಯ 'ಸೈಥಾನ್' ಚಿತ್ರದ ಟೀಸರ್ ಗಣರಾಜ್ಯೋತ್ಸವದಂದು ಬಿಡುಗಡೆಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News