BBK10: ಬಂದೇ ಬಿಡ್ತು ಬಿಗ್‌ಬಾಸ್ ಫಿನಾಲೆ; ಕಾಯ್ತಿದೆ ಸೆಲಬ್ರೇಷನ್‌ ಸರಮಾಲೆ!

who is the winner of bigg boss season 10: ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ ಆರಂಭವಾಗಿದ್ದು ನಿನ್ನೆ ಮೊನ್ನೆ ಎನ್ನುವ ಹಾಗೆ ನೆನಪಿದೆ. ವಾರ ವಾರಕ್ಕೂ, ದಿನದಿನಕ್ಕೂ ತನ್ನ ರಂಗು, ರಂಜನೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದ ಬಿಗ್‌ಬಾಸ್ ಕನ್ನಡದ ಗ್ರ್ಯಾಂಡ್ ಫಿನಾಲೆ ನೋಡನೋಡುತ್ತಿದ್ದಂತೆಯೇ ಬಂದೇ ಬಿಟ್ಟಿದೆ. 

Written by - Savita M B | Last Updated : Jan 27, 2024, 12:34 PM IST
  • ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ‘ಇಂದು’ ಎಂದು ಹೇಳುವ ಗಳಿಗೆ ಬಂದೇಬಿಟ್ಟಿದೆ.
  • ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಹದಿನಾರು ವಾರಗಳನ್ನು ದಾಟಿದೆ.
  • ಫಿನಾಲೆ ವಾರದಲ್ಲಿ ಆರು ಸ್ಪರ್ಧಿಗಳಷ್ಟೇ ಮನೆಯೊಳಗೆ ಇದ್ದಾರೆ.
BBK10: ಬಂದೇ ಬಿಡ್ತು ಬಿಗ್‌ಬಾಸ್ ಫಿನಾಲೆ; ಕಾಯ್ತಿದೆ ಸೆಲಬ್ರೇಷನ್‌ ಸರಮಾಲೆ! title=

Exciting moments in BBK10 grand finale: ಇನ್ನೊಂದು ವಾರ, ಇನ್ನೆರಡು ದಿನ ಎಂದೆಲ್ಲ ಕೌಂಟ್‌ಡೌನ್‌ಗಳು ಮುಗಿದು ಕೊನೆಗೂ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ‘ಇಂದು’ ಎಂದು ಹೇಳುವ ಗಳಿಗೆ ಬಂದೇಬಿಟ್ಟಿದೆ. ಹತ್ತೊಂಬತ್ತು ಸ್ಪರ್ಧಿಗಳ ಎಂಟ್ರಿಯ ಜೊತೆಗೆ ಶುರುವಾಗಿದ್ದ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಹದಿನಾರು ವಾರಗಳನ್ನು ದಾಟಿದೆ. ಫಿನಾಲೆ ವಾರದಲ್ಲಿ ಆರು ಸ್ಪರ್ಧಿಗಳಷ್ಟೇ ಮನೆಯೊಳಗೆ ಇದ್ದಾರೆ. 

ತಮ್ಮದೇ ಜರ್ನಿಯ ಸಿಹಿ-ಕಹಿ ನೆನಪುಗಳ ಮಳೆಯಲ್ಲಿ ತೋಯುತ್ತಿದ್ದಾರೆ. ಸೀಸನ್‌ ಉದ್ದಕ್ಕೂ ಅವರ ಪ್ರಯಾಣದಲ್ಲಿ ಮಾನಸಿಕವಾಗಿ ಜೊತೆಯಾಗಿದ್ದ ಪ್ರೇಕ್ಷಕರಿಗೂ ಇದು ಭಾವುಕ ಗಳಿಗೆ. ಎಲ್ಲ ಸ್ಪರ್ಧಿಗಳು ಎದುರಿಸಿದ ದಿನದಿನದ ಕ್ಷಣಕ್ಷಣದ ಅಗ್ನಿಪರೀಕ್ಷೆಯ ಪರಿಣಾಮವಾಗಿ ‘ಬಿಗ್‌ಬಾಸ್‌ ಕನ್ನಡ’ ರಿಯಾಲಿಟಿ ಷೋ ಮತ್ತೊಮ್ಮೆ ಅದ್ಭುತ ಗೆಲುವನ್ನು ಕಂಡಿದೆ. ಹಿಂದೆಂದೂ ಕಂಡಿರದ ಸ್ಪಂದನವನ್ನು ಕಂಡಿದೆ. ಯಶಸ್ಸಿನ ಸವಿಯನ್ನು ಮತ್ತೊಮ್ಮೆ ಉಂಡಿದೆ.

ಇದನ್ನೂ ಓದಿ-ಜಾಹೀರಾತಿನಲ್ಲಿ ಕಾಣಿಸಿಕೊಂಡ ಡಿವೈನ್‌ ಸ್ಟಾರ್: ಪಂಚೆಯುಟ್ಟು ತುಳುನಾಡ ಸಂಸ್ಕೃತಿ ಬಿಂಬಿಸಿದ ರಿಷಬ್!

ಬಿಗ್‌ಬಾಸ್ ಕನ್ನಡ ಮತ್ತು ಪ್ರೇಕ್ಷಕರ ನಡುವಿನ ಈ ಸುಧೀರ್ಘ ಪ್ರಯಾಣಕ್ಕೆ ಇಂದು ಮತ್ತು ನಾಳೆ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯೊಟ್ಟಿಗೆ ಅಲ್ಪವಿರಾಮ ಬೀಳಲಿದೆ. ಇಷ್ಟು ದೊಡ್ಡ ಷೋದ, ಇಷ್ಟು ದೊಡ್ಡ ಯಶಸ್ಸಿನ ಅಂತಿಮ ಘಟ್ಟವೂ ಅದ್ದೂರಿಯಾಗಿ ಇರಲೇಬೇಕಲ್ಲವೇ? ಅನುಮಾನವೇ ಬೇಡ, ಬಿಗ್‌ಬಾಸ್‌ ರಿಯಾಲಿಟಿ ಷೋದ ಈ ಸೀಸನ್‌ನ ಫಿನಾಲೆ ಕೂಡ ಸಖತ್ ಸ್ಪೆಷಲ್ ಆಗಿಯೇ ಇರಲಿದೆ. ಅದರ ಝಲಕ್ ಅನ್ನು ಜಿಯೊಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ನೋಡಬಹುದಾಗಿದೆ.

ಇಂದು ಮತ್ತು ನಾಳೆ, ಅಂದರೆ ಶನಿವಾರ-ಭಾನುವಾರ ರಾತ್ರಿ 7.30ಗೆ ಜಿಯೊಸಿನಿಮಾದಲ್ಲಿ ಬಿಗ್‌ಬಾಸ್ ಫಿನಾಲೆಯನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿಯೂ 7.30ಕ್ಕೆ ಫಿನಾಲೆ ವೀಕ್ಷಿಸಬಹುದು.

ಇದನ್ನೂ ಓದಿ-Padma Awards 2024: ಒಂದಕ್ಕಿಂತ ಹೆಚ್ಚು 'ಪದ್ಮ' ಪ್ರಶಸ್ತಿಗಳನ್ನು ಪಡೆದ ಸೆಲೆಬ್ರಿಟಿಗಳು ಇವರೇ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News