ಮಲತಂದೆಯಿಂದಲೇ ಖ್ಯಾತ ನಟಿ ಮತ್ತು ಅವಳ ಕುಟುಂಬದ ಹತ್ಯೆ..! ಮಹತ್ವದ ತೀರ್ಪು ನೀಡಿದ ನ್ಯಾಯಾಲಯ

Laila Khan Murder case : 13 ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದ ಬಾಲಿವುಡ್ ನಟಿ ಲೈಲಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ನಟಿಯ ಮಲತಂದೆಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಲೈಲಾ ಖಾನ್ ಮತ್ತು ಆಕೆಯ ತಾಯಿ ಹಾಗೂ ನಾಲ್ವರು ಒಡಹುಟ್ಟಿದವರನ್ನು 2011 ರಲ್ಲಿ ನಟಿಯ ಮಲತಂದೆ ಪರ್ವೇಜ್ ತಕ್ ಹತ್ಯೆಗೈದಿದ್ದ.

Written by - Krishna N K | Last Updated : May 25, 2024, 09:20 AM IST
    • ಬಾಲಿವುಡ್ ನಟಿ ಲೈಲಾ ಖಾನ್ ಹತ್ಯೆ ಪ್ರಕರಣ
    • ನಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ
    • ಲೈಲಾ ಖಾನ್ ಮತ್ತು ಆಕೆಯ ತಾಯಿ ಹಾಗೂ ನಾಲ್ವರು ಒಡಹುಟ್ಟಿದವರ ಹತ್ಯೆ ಮಾಡಲಾಗಿತ್ತು.
ಮಲತಂದೆಯಿಂದಲೇ ಖ್ಯಾತ ನಟಿ ಮತ್ತು ಅವಳ ಕುಟುಂಬದ ಹತ್ಯೆ..! ಮಹತ್ವದ ತೀರ್ಪು ನೀಡಿದ ನ್ಯಾಯಾಲಯ title=

Laila Khan Murder Verdict : ಮುಂಬೈ ಸೆಷನ್ಸ್ ಕೋರ್ಟ್ ಈ ಕೊಲೆ ಪ್ರಕರಣವನ್ನು ‘ಅತ್ಯಂತ ಅಪರೂಪ’ ಎಂದು ಪರಿಗಣನೆಗೆ ತೆಗೆದುಕೊಂಡು ಆರೋಪಿಗೆ ಮರಣದಂಡನೆ ವಿಧಿಸಿದೆ. ಮೇ 9 ರಂದು, ನ್ಯಾಯಾಲಯವು ಪರ್ವೇಜ್ ತಕ್ ಅವರನ್ನು ಕೊಲೆ ಮತ್ತು ಸಾಕ್ಷ್ಯ ನಾಶದ ಅಪರಾಧಿ ಎಂದು ಘೋಷಿಸಿತು.

ಕೊಲೆಯ ಅಪರಾಧಕ್ಕಾಗಿ ಪರ್ವೇಜ್ ತಕ್‌ಗೆ ಮರಣದಂಡನೆ ವಿಧಿಸಲಾಗಿದೆ ಮತ್ತು ನ್ಯಾಯಾಲಯವು ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 10,000 ದಂಡ ವಿಧಿಸಲಾಗಿದೆ. ಆದರೆ, ಬಾಂಬೆ ಹೈಕೋರ್ಟ್ ಮರಣದಂಡನೆಯನ್ನು ದೃಢೀಕರಿಸಬೇಕಿದೆ.

ಇದನ್ನೂ ಓದಿ: Rajinikanth : ಸೂಪರ್ ಸ್ಟಾರ್ ರಜನಿಕಾಂತ್‌ಗೆ ಯುಎಇ ಗೋಲ್ಡನ್ ವೀಸಾ ಗೌರವ..!

ಆಸ್ತಿ ವಿಚಾರಕ್ಕಾಗಿ ಫೆಬ್ರವರಿ 2011 ರಲ್ಲಿ ಮಹಾರಾಷ್ಟ್ರದ ಇಗತ್‌ಪುರಿಯಲ್ಲಿರುವ ಬಂಗಲೆಯಲ್ಲಿ ನಟಿ ಲೈಲಾ, ತಾಯಿ ಸೆಲಿನಾ ಮತ್ತು ನಾಲ್ವರು ಒಡಹುಟ್ಟಿದವರನ್ನು ಪರ್ವೇಜ್ ತಕ್ ಹತ್ಯೆಗೈದು ಪರಾರಿಯಾಗಿದ್ದ. ಲೈಲಾ ಖಾನ್ ಅವರ ತಂದೆ ನಾದಿರ್ ಪಟೇಲ್ ಅವರು ತಮ್ಮ ಮಗಳು ಮತ್ತು ಮಾಜಿ ಪತ್ನಿ ಕಾಣೆಯಾಗಿದ್ದಾಳೆ ಅಂತ ಓಶಿವಾರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಜುಲೈ 8, 2012 ರಂದು ಕಾಶ್ಮೀರದಲ್ಲಿ ಆರೋಪಿಗಳ ಬಂಧನವಾಗಿತ್ತು. 

ಆರೋಪಿ ತಕ್ ವಿರುದ್ಧ ಪ್ರಾಸಿಕ್ಯೂಷನ್ 40 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಂಕಜ್ ಚವಾಣ್ ಅವರು ಈ ಪ್ರಕರಣದಲ್ಲಿ ಮರಣದಂಡನೆ ವಿಧಿಸುವಂತೆ ಕೋರಿದರು. ಕ್ರೂರ ಹಿಂಸಾಚಾರದಲ್ಲಿ ಒಂದು ಕುಟುಂಬದ ಆರು ಸದಸ್ಯರನ್ನು ಕೊಂದು ಅವರ ದೇಹವನ್ನು ವಿಲೇವಾರಿ ಮಾಡಲಾಗಿದೆ ಎಂದು ಚವಾಣ್ ಅವರು ಆರೋಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News