Saanya Iyer: ತಮಿಳು ಸ್ಟಾರ್‌ ನಟನ ಜೊತೆಗೆ ಪುಟ್ಟಗೌರಿ: ಕಾಲಿವುಡ್‌ಗೆ ಹಾರಿದ್ರಾಯೆಂದು ಫ್ಯಾನ್ಸ್‌!

Saanya Iyer With Ajith: ಕನ್ನಡ ಕಿರುತೆರೆಯ ನಟಿ ಸಾನ್ಯಾ ಐಯ್ಯರ್‌ ಇತ್ತೀಚೆಗೆ ತಮಿಳು ನಟ ಅಜಿತ್‌ ಜೊತೆಗ ಫೋಟೋ ತೆಗೆಸಿಕೊಂಡು ಪೋಸ್ಟ್‌ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಈ ನಟಿ ಕಾಲಿವುಡ್‌ಗೆ ಹಾರಿದ್ರಾ ಅಂತ ಪ್ರಶ್ನೆ ಮಾಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Mar 23, 2024, 06:00 PM IST
  • ನಟಿ ಸಾನ್ಯಾ ಐಯ್ಯರ್‌ ಇತ್ತೀಚೆಗೆ ಕಾಲಿವುಡ್‌ ಸ್ಟಾರ್‌ ನಟ ಅಜಿತ್‌ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.
  • ನಟಿ ಸಾನ್ಯಾ ಐಯ್ಯರ್‌ ಅಜಿತ್‌ ಜೊತೆಯ ಫೋಟೋ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ ಈ ನಟನನ್ನು ಹಾಡಿ ಹೊಗಳಿದ್ದಾರೆ.
  • ಡೈರೆಕ್ಟರ್​ ಇಂದ್ರಜಿತ್ ಲಂಕೇಶ್​ ʻಗೌರಿʼ ಸಿನಿಮಾದಲ್ಲಿ ಸಾನ್ಯಾ ಅಯ್ಯರ್​ ನಾಯಕ ನಟಿಯಾಗಿ ಕಾಣಿಸಕೊಳ್ಳಲಿದ್ದಾರೆ.
Saanya Iyer: ತಮಿಳು ಸ್ಟಾರ್‌ ನಟನ ಜೊತೆಗೆ ಪುಟ್ಟಗೌರಿ: ಕಾಲಿವುಡ್‌ಗೆ ಹಾರಿದ್ರಾಯೆಂದು ಫ್ಯಾನ್ಸ್‌! title=

Saanya Iyer With Tamil Actor Ajith: ಕನ್ನಡ ಕಿರುತೆರೆಯ ಪುಟ್ಟಗೌರಿ ಮದುವೆ ಧಾರವಾಹಿಯ ಮೂಲಕ ಖ್ಯಾತಿ ಪಡೆದ ನಟಿ ಸಾನ್ಯಾ ಐಯ್ಯರ್‌ ಇತ್ತೀಚೆಗೆ ಕಾಲಿವುಡ್‌ ಸ್ಟಾರ್‌ ನಟ ಅಜಿತ್‌ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡು ಸೋಶಿಯಲ್‌ ಮಿಡಯಾದಲ್ಲಿ ಶೇರ್‌ ಮಾಡಿದ್ದಾರೆ. 

ನಟ ಅಜಿತ್‌ ಜೊತೆಗೆ ಸಾನ್ಯಾ ಐಯ್ಯರ್‌ ಮಾತ್ರವಲ್ಲದೇ ಆಕೆಯ ತಾಯಿ ದೀಪ ಐಯ್ಯರ್‌ ಹಾಗೂ ಶಿಲ್ಪ ಐಯ್ಯರ್‌ ಕೂಡ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಇತ್ತೀಚೆಗ ಸಾನ್ಯಾ ಕೊಡಗಿಗೆ ವೇಕೇಶನ್‌ ಕಳೆಯಲು ಫ್ಯಾಮಿಲಿ ಜೊತೆಗೆ ಹೋಗಿದ್ದು ಅಲ್ಲಿಯೇ ಈ ನಟನ  ಜೊತೆಗೆ ಫೋಟೋ ಕ್ಲಿಕ್‌ ಮಾಡಿಸಿಕೊಂಡಿದ್ದಾರೆ ಅಂತ ಅನಿಸುತ್ತದೆ.

 
 
 
 

 
 
 
 
 
 
 
 
 
 
 

A post shared by Saanya Iyer | ಸಾನ್ಯ ಅಯ್ಯರ್ (@saanyaiyer)

ಇದನ್ನೂ ಓದಿ: ಕಾಂತಾರದಲ್ಲಿನ ರಿಷಬ್‌ ಸ್ಟೈಲ್‌ ಎನ್‌ಟಿಆರ್‌ ‘ದೇವರ’ ಸಿನಿಮಾದಲ್ಲಿ..! ಹಾಗಿದ್ರೆ ಸಿನಿಮಾ ಕಥೆ ಅದೇನಾ..?

ನಟಿ ಸಾನ್ಯಾ ಐಯ್ಯರ್‌ ಅಜಿತ್‌ ಜೊತೆಯ ಫೋಟೋ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ ಈ ನಟನನ್ನು ಹಾಡಿ ಹೊಗಳಿದ್ದಾರೆ. ಈ ಪೋಸ್ಟ್‌ಗೆ ಸಾವಿರಾರು ಲೈಕ್ಸ್‌ಗಳ ಸುರಿಮಳೆಯಾಗಿದೆ. ಸದ್ಯ ಈ ಫೋಟೋಗಳು ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು, ಇದನ್ನು ನೋಡಿದ ಫ್ಯಾನ್ಸ್‌ ಕನ್ಫೂಸ್​ ಆಗಿ ಈ ನಟಿ ಕಾಲಿವುಡ್‌ಗೆ ಹಾರಿಬಿಟ್ರಾ ಅಂತ ಕಾಮೆಂಟ್‌ ಮಾಡಿದ್ದಾರೆ.

ಸದ್ಯ ಸಾನ್ಯಾ ಐಯ್ಯರ್‌ ಸ್ಟಾರ್‌ ನಟ ಅಜಿತ್‌ ಭೇಟಿಯಿಂದ ಖುಷಿಯಾಗಿದ್ದಾರೆ. ಈ ನಟಿ ಧಾರವಾಹಿ, ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನಗೆದ್ದ ಮೇಲೆ, ಇದೀಗ ಬೆಳ್ಳಿತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಡೈರೆಕ್ಟರ್​ ಇಂದ್ರಜಿತ್ ಲಂಕೇಶ್​ ʻಗೌರಿʼ ಸಿನಿಮಾದಲ್ಲಿ ಸಾನ್ಯಾ ಅಯ್ಯರ್​ ನಾಯಕ ನಟಿಯಾಗಿ ಕಾಣಿಸಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News