Sreeleela: ಮೊದಲ ಬಾರಿ ಲೈವ್ ಬಂದು ಸಪ್ರೈಸ್ ಕೊಟ್ಟ ಶ್ರೀಲೀಲಾ!

Sreeleela Twitter Live: ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ ನಟಿ ಶ್ರೀಲೀಲಾ, ‘ತೆಲುಗು ನಟರಾದ ವೈಷ್ಣವ್ ತೇಜ್, ರಾಮ್ ಪೊಥಿನೆನಿ, ನಿತಿನ್, ಕಿರೀಟಿ ರೆಡ್ಡಿ ಜೊತೆಗೆ ನಟಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

Written by - Puttaraj K Alur | Last Updated : Dec 26, 2022, 08:27 PM IST
  • ಮೊದಲ ಬಾರಿಗೆ ಟ್ವಿಟರ್‍ನಲ್ಲಿ ಲೈವ್ ಬಂದು ಅಭಿಮಾನಿಗಳಿಗೆ ಉತ್ತರಿಸಿದ ನಟಿ ಶ್ರೀಲೀಲಾ
  • ನಾನು ಸ್ಯಾಂಡಲ್‍ವುಡ್‍ಗೆ ಬರ್ತಾ ಇಲ್ಲಾ, ನಾನು ಬಂದಿರುವುದೇ ಸ್ಯಾಂಡಲ್‍ವುಡ್‍ನಿಂದ
  • ತೆಲುಗು ಸೂಪರ್ ಸ್ಟಾರ್ ರವಿತೇಜರ ‘ಧಮಾಕ’ ಸಿನಿಮಾ ಶೂಟಿಂಗ್ ಅನುಭವ ಹಂಚಿಕೊಂಡ ನಟಿ
Sreeleela: ಮೊದಲ ಬಾರಿ ಲೈವ್ ಬಂದು ಸಪ್ರೈಸ್ ಕೊಟ್ಟ ಶ್ರೀಲೀಲಾ!  title=
ಅಭಿಮಾನಿಗಳಿಗೆ ಉತ್ತರಿಸಿದ ನಟಿ ಶ್ರೀಲೀಲಾ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಒಂದೆರಡು ಸಿನಿಮಾಗಳಲ್ಲಿ ನಟಿಸಿ ಈಗ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವ ಯುವ ನಟಿ ಶ್ರೀಲೀಲಾ ಮೊದಲ ಬಾರಿಗೆ ಟ್ವಿಟರ್‍ನಲ್ಲಿ ಲೈವ್ ಬಂದು ಅಭಿಮಾನಿಗಳಿಗೆ ಸಪ್ರೈಸ್‍ ನೀಡಿದ್ದಾರೆ.

ತೆಲುಗು ಸೂಪರ್ ಸ್ಟಾರ್ ರವಿತೇಜ ಜೊತೆಗೆ ನಟಿಸಿರುವ ‘ಧಮಾಕ’ ಸಿನಿಮಾದ ಬಗ್ಗೆ ಮುಕ್ತವಾಗಿ ಮಾತನಾಡಿರುವ ನಟಿ ಶ್ರೀಲೀಲಾ ಅನೇಕ ವಿಚಾರಗಳನ್ನು ಫ್ಯಾನ್ಸ್ ಜೊತೆಗೆ ಹಂಚಿಕೊಂಡಿದ್ದಾರೆ. ಟ್ವಿಟರ್ ಲೈವ್‍ನಲ್ಲಿ ಅಭಿಮಾನಿಗಳು ಕೇಳಿದ ಪ್ರತಿಯೊಂದು ಪ್ರಶ್ನೆಗೆ ಖುಷಿಯಿಂದಲೇ ಉತ್ತರಿಸಿದ ಶ್ರೀಲೀಲಾ ಹತ್ತು-ಹಲವು ಇಂಟರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಧಮಾಕ’ ಸಿನಿಮಾದಲ್ಲಿ ನಟಿಸಿದ್ದು ನನಗೆ ಅದ್ಭುತ ಅನುಭವ ನೀಡಿತು. ನಾನು ತುಂಬಾ ಎಂಜಾಯ್ ಮಾಡಿದೆ. ಸಿನಿಮಾಗೆ ಪ್ರೇಕ್ಷಕರಿಂದ ಬಂದ ಪ್ರತಿಕ್ರಿಯಿಂದ ನನಗೆ ತುಂಬಾ ಖುಷಿಯಾಗಿದೆ. ‘ಧಮಾಕ’ ಸಿನಿಮಾದ ಎಲ್ಲಾ ಹಾಡುಗಳು ಅದ್ಭುತವಾಗಿವೆ. ಹೀಗಾಗಿ ಸಂಗೀತ ನಿರ್ದೇಶಕರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆಂದು' ಹೇಳಿದ್ದಾರೆ.  

ಇದನ್ನೂ ಓದಿ: ನಟ ದರ್ಶನ ಮೇಲೆ ಚಪ್ಪಲಿ ಎಸೆತ ಪ್ರಕರಣ : ಮೂವರ ಜನರ ಬಂಧನ

ಟಾಲಿವುಡ್ ಖ್ಯಾತ ನಟ ರವಿತೇಜ ಜೊತೆಗಿನ ಮೊದಲ ಸೀನ್‍ನ ಶೂಟಿಂಗ್ ವೇಳೆ ನನಗೆ ತುಂಬಾ ಭಯವಾಗಿತ್ತು. ಈ ವೇಳೆ ಚಿತ್ರತಂಡವು ನನಗೆ ಧೈರ್ಯ ತುಂಬಿತು. ಹೀಗಾಗಿ ನಾನು ಚೆನ್ನಾಗಿ ನಟಿಸಲು ಸಾಧ್ಯವಾಯಿತು. ರವಿತೇಜ ಸರ್ ಕೂಡ ನನಗೆ ಪ್ರೋತ್ಸಾಹ ನೀಡಿದರು. ‘ಧಮಾಕ’ ಸಿನಿಮಾದ ಹಾಡು ಮತ್ತು ಡ್ಯಾನ್ಸ್ ಅದ್ಭುತವಾಗಿತ್ತು. ಸಿನಿಮಾಗೆ ಪ್ರೇಕ್ಷಕರಿಂದ ಬಂದ ಪ್ರತಿಕ್ರಿಯೆ ಕಂಡು ನನಗೆ ಶಾಕ್ ಆಗಿತ್ತು. ಹೀಗಾಗಿ ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತೇನೆಂದು' ಶ್ರೀಲೀಲಾ ಹೇಳಿದ್ದಾರೆ.

ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ ನಟಿ ಶ್ರೀಲೀಲಾ, ‘ತೆಲುಗು ನಟರಾದ ವೈಷ್ಣವ್ ತೇಜ್, ರಾಮ್ ಪೊಥಿನೆನಿ, ನಿತಿನ್, ಕಿರೀಟಿ ರೆಡ್ಡಿ ಜೊತೆಗೆ ನಾನು ನಟಿಸುತ್ತಿದ್ದೇನೆ. ಹಲವು ಪ್ರೊಡಕ್ಷನ್ ಹೌಸ್ ಜೊತೆಗೆ ಮಾತುಕತೆ ನಡೆಯುತ್ತಿದೆ. ಸದ್ಯಕ್ಕೆ ಹಲವಾರು ಸಿನಿಮಾಗಳನ್ನು ನಾನು ಬ್ಯುಸಿಯಾಗಿದ್ದೇನೆ. ರಾಮ್ ಪೊಥಿನೆನಿ ಜೊತೆಗಿನ ಮುಂದಿನ ಸಿನಿಮಾ ಬಗ್ಗೆ ನಾನು ಉತ್ಸುಕಳಾಗಿದ್ದೇನೆ ಅಂತಾ ಹೇಳಿದ್ದಾರೆ. ಇನ್ನು ಇದೇ ವೇಳೆ ಕನ್ನಡ ಚಿತ್ರರಂಗದ ಬಗ್ಗೆಯೂ ನಟಿ ಶ್ರೀಲೀಲಾ ಮಾತನಾಡಿದ್ದಾರೆ. ನೀವು ವಾಪಸ್ ಕನ್ನಡ ಚಿತ್ರರಂಗಕ್ಕೆ ಯಾವಾಗ ಬರುತ್ತೀರಿ ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ನಟಿ, ‘ನಾನು ಸ್ಯಾಂಡಲ್‍ವುಡ್‍ಗೆ ಬರ್ತಾ ಇಲ್ಲಾ, ನಾನು ಬಂದಿರೋದೇ ಸ್ಯಾಂಡಲ್‍ವುಡ್‍ನಿಂದ. ನಾನು ಸ್ಯಾಂಡಲ್‍ವುಡ್‍ನಲ್ಲಿಯೇ ಇದ್ದೇನೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ವಿಗ್ ಹಾಕಿದ್ರಾ ಅಥವಾ ಕೂದಲು ಕಸಿ ಮಾಡಿಸಿಕೊಂಡ್ರಾ ಡಿಬಾಸ್ ದರ್ಶನ್...?

ಶೂಟಿಂಗ್ ಮತ್ತು ಓದಿ ಎರಡನ್ನೂ ಹೇಗೆ ಮ್ಯಾನೇಜ್ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ಶ್ರೀಲೀಲಾ, ‘ನಾನು ಓದು ಮತ್ತು ಶೂಟಿಂಗ್ ಎರಡನ್ನೂ ಚೆನ್ನಾಗಿ ಮ್ಯಾನೇಜ್ ಮಾಡುತ್ತೇನೆಇತ್ತೀಚೆಗಷ್ಟೇ ನಾನು ಎಕ್ಸಾಂ ಬರೆದಿದ್ದೇನೆ. ನನಗೆ ಯಾವುದೇ ರೀತಿ ತೊಂದರೆಯಾಗಿಲ್ಲ. ಅದು ನನ್ನ ಲೈಫ್‍ಸ್ಟೈಲ್ ಆಗಿದೆ. ಗುಡ್ ಮ್ಯೂಸಿಕ್ ಮೈ ಎನರ್ಜಿ ಅಂತಾ ಹೇಳಿದ್ದಾರೆ. ಇನ್ನೂ ಡ್ರೀಮ್ ರೋಲ್‍ ಬಗ್ಗೆಯೂ ಮಾತನಾಡಿರುವ ನಟಿ ಶ್ರೀಲೀಲಾ, ‘ಹಿಸ್ಟೋರಿಕ್ ಮತ್ತು ಹಳ್ಳಿ ಲವ್ ಸ್ಟೋರಿ ನನ್ನ ಡ್ರೀಮ್ ರೋಲ್ ಆಗಿದೆ. ಮುಂದೊಂದು ದಿನ ಆ ರೀತಿಯ ಕಥೆಗಳು ಬಂದರೆ ನಾನು ಖುಷಿಯಿಂದ ನಟಿಸುತ್ತೇನೆಂದು ಹೇಳಿದ್ದಾರೆ. ಇದೇ ವೇಳೆ ಇಷ್ಟದ ಆಹಾರದ ಬಗ್ಗೆಯೂ ತಿಳಿಸಿರುವ ನಟಿ, ನನಗೆ ಬಿರಿಯಾನಿ ಅಂದರೆ ತುಂಬಾ ಇಷ್ಟ ಅಂತಾ ಹೇಳಿದ್ದಾರೆ.

ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀಲೀಲಾ ಬಳಿಕ ಮತ್ತೊಂದು ಪೋಸ್ಟ್ನಲ್ಲಿ, ‘ನಾನು ಇದೇ ಮೊದಲ ಬಾರಿಗೆ ಲೈವ್ ಬಂದಿದ್ದು, ನಿಮಗೆ ಖುಷಿಯಾಗಿದೆ ಎಂದು ನಾನು ಭಾವಿಸಿದ್ದೇನೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ನಾನು ಪ್ರಯತ್ನಿಸಿದ್ದೇನೆ. ನನ್ನ ಮೇಲೆ ಪ್ರೀತಿ ತೋರಿದ್ದಕ್ಕೆ ನಿಮಗೆ ಧನ್ಯವಾದಗಳು’ ಅಂತಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News