Tapsee Pannu: ಮದುವೆ ಯಾವಾಗ ಅಂದಿದ್ದಕ್ಕೆ.. "ನಾನಿನ್ನು ಪ್ರೆಗ್ನೆಂಟ್‌ ಆಗಿಲ್ಲ" ಎಂದ ನಟಿ ತಾಪ್ಸಿ.!

Tapsee Pannu Marriage: ಇತ್ತೀಚಿನ ವರ್ಷಗಳಲ್ಲಿ, ನಟಿಯರು ಗರ್ಭಿಣಿಯಾದಾಗ ತಮ್ಮ ಮದುವೆಯನ್ನು ಘೋಷಿಸುವುದು ಸಾಮಾನ್ಯ ಎಂಬಂತಾಗಿದೆ. ಅವರು ಇದನ್ನು ಬಹಿರಂಗವಾಗಿ ಹೇಳದಿದ್ದರೂ, ಕೆಲವೇ ತಿಂಗಳುಗಳಲ್ಲಿ ಸತ್ಯವು ಮುನ್ನೆಲೆಗೆ ಬರುತ್ತದೆ. ಹೀಗಿರುವಾಗ ಮದುವೆಯ ಪ್ರಶ್ನೆಗೆ ತಾಪ್ಸಿ ಕೊಟ್ಟಿರುವ ಉತ್ತರ ಜನಕ್ಕೆ ಅಚ್ಚರಿ ಮೂಡಿಸಿದೆ.   

Written by - Chetana Devarmani | Last Updated : Jul 19, 2023, 04:24 PM IST
  • ಮದುವೆ ಯಾವಾಗ ಎಂದು ಕೇಳಿದ ಫ್ಯಾನ್ಸ್‌
  • "ನಾನಿನ್ನು ಪ್ರೆಗ್ನೆಂಟ್‌ ಆಗಿಲ್ಲ" ಎಂದ ನಟಿ ತಾಪ್ಸಿ.!
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
Tapsee Pannu: ಮದುವೆ ಯಾವಾಗ ಅಂದಿದ್ದಕ್ಕೆ.. "ನಾನಿನ್ನು ಪ್ರೆಗ್ನೆಂಟ್‌ ಆಗಿಲ್ಲ" ಎಂದ ನಟಿ ತಾಪ್ಸಿ.!   title=
Tapsee Pannu

Tapsee Pannu : ಬಾಲಿವುಡ್ ನಟಿ ತಾಪ್ಸಿ ಪನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿರುವಾಗ ಆಘಾತಕಾರಿ ವಿಷಯ ಹೇಳಿದ್ದಾರೆ. ಇತ್ತೀಚೆಗಷ್ಟೇ ಈ ಸಂಭಾಷಣೆಯ ವೇಳೆ ತಾಪ್ಸಿಗೆ ಯಾವಾಗ ಮದುವೆಯಾಗುತ್ತೀರಾ ಎಂದು ಕೇಳಲಾಗಿತ್ತು. ಈ ಬಗ್ಗೆ ತಾಪ್ಸಿ ನಾನು ಇನ್ನೂ ಗರ್ಭಿಣಿಯಾಗಿಲ್ಲ ಎಂದು ಶಾಕಿಂಗ್ ಆಗಿ ಹೇಳಿದ್ದಾರೆ. ಕಳೆದ ಹಲವು ವರ್ಷಗಳಿಂದ ಡ್ಯಾನಿಶ್ ಬ್ಯಾಡ್ಮಿಂಟನ್ ಆಟಗಾರ ಮತ್ತು ಕೋಚ್ ಮಥಿಯಾಸ್ ಬೋ ಅವರೊಂದಿಗೆ ತಾಪ್ಸಿ ಸಂಬಂಧದಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ತಾಪ್ಸಿ ಕೂಡ ಈ ಸಂಬಂಧವನ್ನು ಎಂದಿಗೂ ಮರೆಮಾಚಲಿಲ್ಲ. ಆದರೆ ತಾಪ್ಸಿ ಪನ್ನುಗೆ 35 ವರ್ಷ ವಯಸ್ಸಾಗಿದೆ.  

ಇದನ್ನೂ ಓದಿ: ಮಹೇಶ್ ಬಾಬು ʼಪುತ್ರಿʼ ಸುದ್ದಿಗೋಷ್ಠಿಗೆ ಧರಿಸಿದ ಡ್ರೆಸ್ ಬೆಲೆಗೆ ʼಲೇಟೆಸ್ಟ್ ಐಫೋನ್ʼ ಬರ್ತಿತ್ತು..!

ಸೋಮವಾರ, ತಾಪ್ಸಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ 'ಆಸ್ಕ್ ಮಿ ಎನಿಥಿಂಗ್' ಸೆಷನ್‌ ಅನ್ನು ನಡೆಸಿದರು. ಈ ಸಮಯದಲ್ಲಿ, ಜನರು ಶಾರುಖ್ ಖಾನ್ ಅವರ ಡಂಕಿ ಮತ್ತು ಇತರ ಚಿತ್ರಗಳ ಬಗ್ಗೆ ಅವರನ್ನು ಪ್ರಶ್ನಿಸಿದರು. ಆಗ ಅಭಿಮಾನಿಯೊಬ್ಬರು ನೀವು ಯಾವಾಗ ಮದುವೆಯಾಗುತ್ತೀರಿ ಎಂದು ಕೇಳಿದರು. ಇದಕ್ಕೆ ತಾಪ್ಸಿ, "ಹಾಗಾದರೆ ನಾನು ಯಾವಾಗ ಮದುವೆಯಾಗುತ್ತೇನೆ? ನಾನು ಇನ್ನೂ ಗರ್ಭಿಣಿಯಾಗಿಲ್ಲ. ಆದ್ದರಿಂದ ಬೇಗ ಅಂತೂ ಅಲ್ಲ" ಎಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ನಟಿಯರು ಗರ್ಭಿಣಿಯಾಗಿದ್ದಾಗ ಮದುವೆಯಾದರು ಎಂಬುದು ಗಮನಾರ್ಹ. ಮದುವೆಯಾದ ಕೆಲವು ತಿಂಗಳ ನಂತರ ತಾಯಿಯಾದರು.  

ತಾಪ್ಸಿ ತಮ್ಮ ಜೀವನದ ಬಗ್ಗೆ ಬೋಲ್ಡ್ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವು ಸಮಯದ ಹಿಂದೆ ತಾಪ್ಸಿ ಸಂದರ್ಶನವೊಂದರಲ್ಲಿ, ಮದುವೆಯಾಗದೆ ಮಕ್ಕಳಿಗೆ ಜನ್ಮ ನೀಡುವುದನ್ನು ನಾನು ಯಾವಾಗಲೂ ತಪ್ಪು ರೀತಿಯಲ್ಲಿ ನೋಡುವುದಿಲ್ಲ ಎಂದು ಹೇಳಿದ್ದರು. ತಾಯಿಯಾಗಲು ಸಿದ್ಧ ಎಂದು ಅನಿಸಿದಾಗಲೇ ಮದುವೆಯಾಗುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ, ತಾನು ಬಹಳಷ್ಟು ಜನರ ನಡುವೆ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವುದಿಲ್ಲ, ಆದರೆ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಣ್ಣ ಸಮಾರಂಭದಲ್ಲಿ ಮದುವೆಯಾಗಲು ಬಯಸುತ್ತೇನೆ ಎಂದು ಅವರು ಹೇಳಿದರು.  

ಇದನ್ನೂ ಓದಿ: Bigg Boss: ʻರೈಟ್ ಲೆಫ್ಟ್ ಇಸ್ ರಾಂಗ್...ʼ ಬಿಗ್ ಬಾಸ್ ಲೇಟೆಸ್ಟ್ ಪ್ರೋಮೋ ರಿಲೀಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News