Bigg Boss: ʻರೈಟ್ ಲೆಫ್ಟ್ ಇಸ್ ರಾಂಗ್...ʼ ಬಿಗ್ ಬಾಸ್ ಲೇಟೆಸ್ಟ್ ಪ್ರೋಮೋ ರಿಲೀಸ್

Bigg Boss New Promo: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಶೀಘ್ರದಲ್ಲೇ ಹೊಸ ಸೀಸನ್ ನಿಮ್ಮ ಮುಂದೆ ಬರಲಿದೆ. ಇತ್ತೀಚೆಗಷ್ಟೇ ಇದಕ್ಕೆ ಸಂಬಂಧಿಸಿದ ಪ್ರೋಮೋವನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.  

Written by - Chetana Devarmani | Last Updated : Jul 19, 2023, 03:19 PM IST
  • ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್
  • ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ
  • ಬಿಗ್ ಬಾಸ್ ಲೇಟೆಸ್ಟ್ ಪ್ರೋಮೋ ರಿಲೀಸ್
Bigg Boss: ʻರೈಟ್ ಲೆಫ್ಟ್ ಇಸ್ ರಾಂಗ್...ʼ ಬಿಗ್ ಬಾಸ್ ಲೇಟೆಸ್ಟ್ ಪ್ರೋಮೋ ರಿಲೀಸ್   title=

Bigg Boss Season 7 : ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss 7 Telugu) ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಈ ಮೆಗಾ ಶೋ ತನ್ನ ಏಳನೇ ಸೀಸನ್‌ನೊಂದಿಗೆ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ. ಈಗಾಗಲೇ ಆರು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಏಳನೇ ಸೀಸನ್‌ ಶುರುವಾಗಲಿದೆ. ಇತ್ತೀಚೆಗಷ್ಟೇ ಇದಕ್ಕೆ ಸಂಬಂಧಿಸಿದ ಪ್ರೋಮೋವನ್ನು ಆಯೋಜಕರು ಬಿಡುಗಡೆ ಮಾಡಿದ್ದಾರೆ. ಟಾಲಿವುಡ್ ಸ್ಟಾರ್ ಹೀರೋ ಹಾಗೂ ಕಾರ್ಯಕ್ರಮ ನಿರೂಪಕ ಅಕ್ಕಿನೇನಿ ನಾಗಾರ್ಜುನ ಇದರಲ್ಲಿ ಕಾಣಿಸಿಕೊಂಡು ಹವಾ ಕ್ರಿಯೇಟ್ ಮಾಡಿದ್ದಾರೆ. ಈ ಬಾರಿ ಕಾರ್ಯಕ್ರಮದ ವಾಡಿಕೆಗಿಂತ ವಿಭಿನ್ನವಾಗಿ ಹೊಸ ಪರಿಕಲ್ಪನೆಯೊಂದಿಗೆ ಬರಲಿದ್ದಾರೆ ಎಂಬ ಸುಳಿವು ನೀಡಿದರು. ʻರೈಟ್ ಲೆಫ್ಟ್ ಇಸ್ ರಾಂಗ್...ʼ ಎನ್ನುವ ಮೂಲಕ ಈ ಶೋ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. 

ಇದನ್ನೂ ಓದಿ: ಜನಾಂಗೀಯ ನಿಂದನೆ ಪದ ಬಳಸಿದ ಕಾಜೋಲ್.. ನೆಟ್ಟಿಗರಿಂದ ಕ್ಲಾಸ್‌!

ಆದರೆ ಬಿಗ್ ಬಾಸ್ ಸೀಸನ್ 7 ಅನ್ನು ಯಾರು ಹೋಸ್ಟ್ ಮಾಡುತ್ತಾರೆ ಎಂಬ ಗೊಂದಲದಲ್ಲಿ ಪ್ರೇಕ್ಷಕರು ಇದ್ದರು. ಇತ್ತೀಚಿನ ಪ್ರೋಮೋ ಮೂಲಕ ಇದಕ್ಕೆಲ್ಲ ಉತ್ತರ ಸಿಕ್ಕಂತಾಗಿದೆ. ಮೊದಲ ಸೀಸನ್ ಅನ್ನು ಯಂಗ್ ಟೈಗರ್ ಎನ್ ಟಿಆರ್ ಮತ್ತು ಎರಡನೇ ಸೀಸನ್ ಅನ್ನು ನ್ಯಾಚುರಲ್ ಸ್ಟಾರ್ ನಾನಿ ಹೋಸ್ಟ್ ಮಾಡಿದ್ದಾರೆ. ಮೂರರಿಂದ ಆರು ಸೀಸನ್‌ಗಳಲ್ಲಿ ನಾಗಾರ್ಜುನ ಹೋಸ್ಟ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಮತ್ತೊಮ್ಮೆ ಅವರು ಮನರಂಜನೆ ನೀಡಲು ಸಿದ್ಧರಾಗಿದ್ದಾರೆ. ಈ ಮೆಗಾ ಶೋ ಜನಪ್ರಿಯ OTT ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್‌ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

 

 

ಸ್ಪರ್ಧಿಗಳ ವಿಚಾರಕ್ಕೆ ಬಂದರೆ... ನಾನಾ ಹೆಸರುಗಳು ವೈರಲ್ ಆಗುತ್ತಿವೆ. ಈ ಬಾರಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರೊಬ್ಬರು ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಅವರೇ ಆಂಧ್ರದ ಆಟಗಾರ ವೇಣುಗೋಪಾಲ ರಾವ್. ಅವರು ಕ್ರಿಕೆಟ್‌ನಿಂದ ದೂರ ಉಳಿದು ಬಹಳ ದಿನಗಳಾಗಿವೆ. ಅದನ್ನು ಈ ಪ್ರದರ್ಶನಕ್ಕೆ ತರಲು ನಿರ್ಮಾಪಕರು ಶ್ರಮಿಸುತ್ತಿದ್ದಾರೆ. ಆದರೆ, ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ಇದನ್ನೂ ಓದಿ: Soundarya: ಸಾವಿನ ಸಮಯದಲ್ಲಿ 2 ತಿಂಗಳ ಗರ್ಭಿಣಿ ಆಗಿದ್ರು ನಟಿ ಸೌಂದರ್ಯ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News