Kagney linn karter : ಪೋರ್ನ್ ಸ್ಟಾರ್ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆ..! ದುಃಖದಲ್ಲಿ ಅಭಿಮಾನಿಗಳು

Kagney Linn Karter : ಖ್ಯಾತ ನೀಲಿ ಚಿತ್ರ ತಾರೆ, ಗಾಯಕಿ, ನೃತ್ಯ ಗಾರ್ತಿ ಕೆನಿ ಲಿನ್‌ ಕಾರ್ಟರ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. 36 ವರ್ಷದ ನಟಿ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ..

Written by - Krishna N K | Last Updated : Feb 21, 2024, 05:08 PM IST
  • ಖ್ಯಾತ ನೀಲಿ ಚಿತ್ರ ತಾರೆ ಆತ್ಮಹತ್ಯೆ
  • ಕೆನಿ ಲಿನ್‌ ಕಾರ್ಟರ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ
  • ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೆನಿ
Kagney linn karter : ಪೋರ್ನ್ ಸ್ಟಾರ್ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆ..! ದುಃಖದಲ್ಲಿ ಅಭಿಮಾನಿಗಳು title=

Kagney Linn Karter death : ಖ್ಯಾತ ನಿಲಿ ಚಿತ್ರ ನಟಿ ಕೆನಿ ಲಿನ್ ಕಾರ್ಟರ್ (36) ಆತ್ಮಹತ್ಯೆಗೆ ಶರಣಾಗಿದ್ದು, ಮೃತ ನಟಿ ಹಲವು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ನೆಚ್ಚಿನ ನಟಿಯ ಸಾವಿಗೆ ಅವರ ಅಭಿಮಾನಿಗಳು, ಸಹ ನಟ-ನಟಿಯರು ಕಂಬನಿ ಮಿಡಿದಿದ್ದಾರೆ.

ಹೌದು.. ಕೆನಿ ಯನೈಟೆಡ್ ಸ್ಟೇಟ್ಸ್ ನ ಪಾರ್ಮಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಾನಸಿಕ ಆರೋಗ್ಯ ಸಮಸ್ಯೆಯೇ ಅವರ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಕೆನಿ ಲಿನ್ ಪೋರ್ನ್‌ ಚಿತ್ರಗಳಲ್ಲಿ ಅಲ್ಲದೆ, ನೃತ್ಯಗಾರ್ತಿ ಮತ್ತು ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: ನಿರ್ಮಾಪಕ ಉಮಾಪತಿಗೆ 'DBoss' ಬೆದರಿಕೆ ಆರೋಪ : ನಟ ದರ್ಶನ್ ವಿರುದ್ಧ ದೂರು

ಔಟ್ಲೆಟ್ ಪ್ರಕಾರ, ಕಾರ್ಟರ್ ಮಾರ್ಚ್ 28, 1987 ರಂದು ಜನಿಸಿದರು. ಕೆನಿ ನಟನೆ ಮತ್ತು ಗಾಯನವನ್ನು ಮುಂದುವರಿಸಲು ಕ್ಯಾಲಿಫೋರ್ನಿಯಾಗೆ ತೆರಳಿದರು. ಕೆಲವು ಮಾಡೆಲಿಂಗ್ ಕೆಲಸಗಳನ್ನ ಮಾಡಿದ್ರೂ ಯಶಸ್ಸು ಕಾಣಲಿಲ್ಲ. ಇದರಿಂದಾಗಿ ಅವರು 2008 ರಲ್ಲಿ ವಯಸ್ಕ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು ಎನ್ನಲಾಗಿದೆ. ಅಲ್ಲದೆ, ವಯಸ್ಕ ಚಲನಚಿತ್ರೋದ್ಯಮದಲ್ಲಿ ಕೊಡಮಾಡುವ ಹಲವಾರು ಪ್ರಶಸ್ತಿಗಳನ್ನು ತಮ್ಮ ಮಡಿಗೇರಿಸಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News