AI generated video of Darshan and Dhanveer: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ʼಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಿದ್ದಂತೆ, ಶಾಕಿಂಗ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ನಾನು 41 ಧರಿಸೋದು... ಇಲ್ಲೇ ಕೊಡ್ಲಾ ಅಥವಾ ಎಲ್ಲರ ಮುಂದೆ ಕೊಡ್ಲಾ? ನಟಿ ಖುಷ್ಬೂ ಶಾಕಿಂಗ್ ಹೇಳಿಕೆ
ನಟ ದರ್ಶನ್ ಅಭಿಮಾನಿಗಳು ʼಡಿಬಾಸ್ʼ ಎಂದು ಅಭಿಮಾನವನ್ನು ಮೆರೆಯುತ್ತಿದ್ದರೆ, ಇತ್ತಕಡೆ ದರ್ಶನ್ ಹಾಗೂ ಧನ್ವೀರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಎಐ ಟೆಕ್ನಾಲಜಿಯ ವಿಡಿಯೋ ಇದಾಗಿದ್ದು, ಇದರಲ್ಲಿ ಅಕ್ಕಪಕ್ಕ ಕುಳಿತಿರುವ ದರ್ಶನ್ ಹಾಗೂ ಧನ್ವೀರ್ ಲಿಪ್ ಲಾಕ್ ಮಾಡಿರುವುದನ್ನು ತೋರಿಸಲಾಗಿದೆ.
ಅಂದಹಾಗೆ ಈ ವಿಡಿಯೋ ಹರಿದಾಡುತ್ತಿದ್ದಂತೆ ಡಿ ಬಾಸ್ ಫ್ಯಾನ್ಸ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ಈ ವಿಡಿಯೋ ಮಾಡಿದವರು ಯಾರು? ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದರ್ಶನ್ – ಧನ್ವೀರ್ ಫ್ಯಾನ್ಸ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಿ ಅಮಿತಾಭ್ ಬಚ್ಚನ್ ತನ್ನ ಶತಕೋಟಿ ಆಸ್ತಿಯನ್ನು ಬರೆದಿರೋದು ಯಾರ ಹೆಸರಿಗೆ ಗೊತ್ತಾ?
AI (ಕೃತಕ ಬುದ್ಧಿಮತ್ತೆ) ನಿಂದಾಗಿ ಇಂತಹ ವಿಡಿಯೋ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಸಿನಿಮಾ ತಾರೆಯರ ಖಾಸಗಿ ಬದುಕಿಗೆ ಭಾರೀ ಅಪಾಯವನ್ನು ತಂದೊಡ್ಡುತ್ತಿದೆ. ಕೆಲ ಸಮಯದ ಹಿಂದೆಷ್ಟೇ ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಸಾರಾ ತೆಂಡೂಲ್ಕರ್ ಸೇರಿದಂತೆ ಅನೇಕ ನಟಿಯರ ಫೋಟೋ, ವಿಡಿಯೋಗಳನ್ನು ಎಐ ಟೆಕ್ನಾಲಜಿ ಬಳಸಿಕೊಂಡು ಡೀಪ್ ಫೇಕ್ ಮಾಡಲಾಗಿತ್ತು. ಇದೀಗ ದರ್ಶನ್ ಮತ್ತು ಧನ್ವೀರ್ ಈ ಸುಳಿಗೆ ಸಿಲುಕಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.