Aishwarya Rai : ಪೊನ್ನಿಯಿನ್ ಸೆಲ್ವನ್ 2 ಗಾಗಿ ಐಶ್ವರ್ಯಾ ರೈ ಪಡೆದ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!

Aishwarya Rai Remuneration for Ponniyin Selvan 2 : 100 ಕೋಟಿ ಕ್ಲಬ್‌ ಸೇರುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿರುವ ಪೊನ್ನಿಯಿನ್ ಸೆಲ್ವನ್ 2 ಸಿನಿಮಾದಲ್ಲಿ ಐಶ್ವರ್ಯಾ ರೈ ನಟನೆಗೆ ಅನೇಕರು ಮನಸೋತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟ ಗೊತ್ತಾ?   

Written by - Chetana Devarmani | Last Updated : May 1, 2023, 09:33 PM IST
  • ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದ ಪೊನ್ನಿಯಿನ್ ಸೆಲ್ವನ್ 2
  • ಐಶ್ವರ್ಯಾ ರೈ ಪಡೆದ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!
  • ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟ ಗೊತ್ತಾ?
Aishwarya Rai : ಪೊನ್ನಿಯಿನ್ ಸೆಲ್ವನ್ 2 ಗಾಗಿ ಐಶ್ವರ್ಯಾ ರೈ ಪಡೆದ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!  title=
ಪೊನ್ನಿಯಿನ್ ಸೆಲ್ವನ್ 2

Aishwarya Rai Ponniyin Selvan 2 Remuneration: ಕಳೆದ ಕೆಲವು ತಿಂಗಳುಗಳಲ್ಲಿ, ಬಾಲಿವುಡ್‌ನಲ್ಲಿ ಇಂತಹ ಅನೇಕ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿ ಭಾರಿ ಹಣವನ್ನು ಗಳಿಸಿವೆ. ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಆದಾಯಗಳಿಸಿದೆ. 100 ಕೋಟಿ ಕ್ಲಬ್‌ ಸೇರಿದೆ. ಐಶ್ವರ್ಯಾ ರೈ ಬಚ್ಚನ್ ಅಭಿನಯದ 'ಪೊನ್ನಿಯಿನ್ ಸೆಲ್ವನ್ 2' ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿದೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 1 ರ ಎರಡನೇ ಭಾಗ, PS2 ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಈ ಚಿತ್ರಕ್ಕೆ ಐಶ್ವರ್ಯಾ ರೈ ಸಂಭಾವನೆ ಎಷ್ಟು ಎಂಬುದು ಇದೀಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. 

ಇದನ್ನೂ ಓದಿ: ಪ್ರೀತಿ, ಜಗಳ.. ಮದುವೆಗೂ ಮುನ್ನ ಬ್ರೇಕಪ್! ಅನುಷ್ಕಾ - ವಿರಾಟ್‌ ಮತ್ತೆ ಒಂದಾಗಿದ್ದೇ ಅಚ್ಚರಿ!!

PS2 ನಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಪೊನ್ನಿಯಿನ್ ಸೆಲ್ವನ್ 2 ಚಿತ್ರದ ಪಾತ್ರವರ್ಗದಲ್ಲಿ ಅನೇಕ ಸ್ಟಾರ್‌ ನಟ - ನಟಿಯರಿದ್ದಾರೆ. ಆದರೆ ತಾರಾಗಣದ ಸಂಭಾವನೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, 'ಪೊನ್ನಿಯಿನ್ ಸೆಲ್ವನ್ 2' ಗೆ 'ನಂದಿನಿ' ಪಾತ್ರವನ್ನು ನಿರ್ವಹಿಸಿರು ಐಶ್ವರ್ಯಾ ರೈ ತಮ್ಮ ನಟನೆಯಿಂದ ಎಲ್ಲರ ಮನಗೆದ್ದಿದ್ದಾರೆ. ಐಶ್ವರ್ಯಾ ರೈ ಈ ಪಾತ್ರಕ್ಕಾಗಿ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗ್ತಿದೆ. ಪೊನ್ನಿಯಿನ್ ಸೆಲ್ವನ್ 2 ನಲ್ಲಿ ವಿಕ್ರಮ್ ಮಾತ್ರ 12 ಕೋಟಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 3 Idiots ನಲ್ಲಿ ಕರೀನಾ ಪಾತ್ರಕ್ಕೆ ಅನುಷ್ಕಾ ಶರ್ಮಾ ನೀಡಿದ್ದ ಆಡಿಷನ್ ವಿಡಿಯೋ ವೈರಲ್‌!

ರೆಕಾರ್ಡ್‌ ಬರೆದ ಪೊನ್ನಿಯಿನ್ ಸೆಲ್ವನ್ 2 ಬಾಕ್ಸ್ ಆಫೀಸ್ ಕಲೆಕ್ಷನ್ : 

ಈಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ 'ಪೊನ್ನಿಯಿನ್ ಸೆಲ್ವನ್ 2' ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಅನೇಕ ದಾಖಲೆಗಳನ್ನು ಉಡೀಸ್‌ ಮಾಡಿದೆ. ಏಪ್ರಿಲ್ 28 ರಂದು ಬಿಡುಗಡೆಯಾದ ಪೊನ್ನಿಯಿನ್ ಸೆಲ್ವನ್ 2 ಮೊದಲ ಎರಡು ದಿನಗಳಲ್ಲಿ 50 ಕೋಟಿ ಗಳಿಸಿ ಮೂರನೇ ದಿನ 30 ಕೋಟಿ ಗಳಿಸಿದೆ. ಭಾರತದಲ್ಲಿ ಚಿತ್ರದ ಕಲೆಕ್ಷನ್ 80 ಕೋಟಿ ಗಡಿ ದಾಟಿದೆ. ಜಾಗತಿಕ ಮಟ್ಟದಲ್ಲಿ 'ಪೊನ್ನಿಯಿನ್ ಸೆಲ್ವನ್ 2' 100 ಕೋಟಿ ರೂಪಾಯಿ ಗಡಿ ದಾಟಿದೆ. ಈ ಮೂಲಕ ನೂರು ಕೋಟಿ ಕ್ಲಬ್‌ ಸೇರಿತು.

ಇದನ್ನೂ ಓದಿ: ಅಬ್ಬಬ್ಬಾ.! ನಟಿ ಸಮಂತಾ ಒಂದು ಚಿತ್ರಕ್ಕೆ ಪಡೆವ ಸಂಭಾವನೆ ಇಷ್ಟು ಕೋಟಿನಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News