ʼಅಭಿಷೇಕ್‌ ಜೊತೆ ಮನಸ್ಥಾಪ ಇದೆ.. ಹಾಗಾಗಿ..ʼ ವಿಚ್ಛೇದನ ವದಂತಿ ಮಧ್ಯವೇ ದಾಂಪತ್ಯದ ಸತ್ಯ ಬಿಚ್ಚಿಟ್ಟ ಐಶ್ವರ್ಯಾ ರೈ!

  Aishwarya Rai revealed the real truth: ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸದ್ಯ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..   

Written by - Savita M B | Last Updated : Nov 28, 2024, 09:33 PM IST
  • ಇತ್ತೀಚೆಗೆ ಅಭಿಷೇಕ್‌ ಬಚ್ಚನ್‌ ವಿಚ್ಛೇದನದ ಪೋಸ್ಟ್‌ವೊಂದನ್ನು ಲೈಕ್‌ ಮಾಡಿ ಎಲ್ಲರಿಗೂ ಶಾಕ್‌ ನೀಡಿದ್ದರು
  • ಹೀಗೆ ವಿಚ್ಛೇದನ ಸುದ್ದಿಗೆ ಪುಷ್ಠಿ ನೀಡುವಂತೆ ಒಂದಾದ ಮೇಲೊಂದು ಮಾಹಿತಿ ಹರಿದುಬರುತ್ತಿವೆ.
ʼಅಭಿಷೇಕ್‌ ಜೊತೆ ಮನಸ್ಥಾಪ ಇದೆ.. ಹಾಗಾಗಿ..ʼ ವಿಚ್ಛೇದನ ವದಂತಿ ಮಧ್ಯವೇ ದಾಂಪತ್ಯದ ಸತ್ಯ ಬಿಚ್ಚಿಟ್ಟ ಐಶ್ವರ್ಯಾ ರೈ!  title=

Aishwarya Rai: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಆಗಮಿಸಿದಕ್ಕಾಗಿ ಈ ದಂಪತಿಗಳು ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿದ್ದಾರೆ.. ಇಲ್ಲಿಂದ ಅವರ ಡಿವೋರ್ಸ್‌ ರೂಮರ್ಸ್‌ ಸಖತ್‌ ವೈರಲ್‌ ಆಗುತ್ತಿದೆ.. 

ಇತ್ತೀಚೆಗೆ ಅಭಿಷೇಕ್‌ ಬಚ್ಚನ್‌ ವಿಚ್ಛೇದನದ ಪೋಸ್ಟ್‌ವೊಂದನ್ನು ಲೈಕ್‌ ಮಾಡಿ ಎಲ್ಲರಿಗೂ ಶಾಕ್‌ ನೀಡಿದ್ದರು ಅಲ್ಲದೇ ಐಶ್ವರ್ಯಾ ಬಚ್ಚನ್ ಕುಟುಂಬದೊಂದಿಗೆ ಮಾತ್ರವಲ್ಲದೆ ಅಭಿಷೇಕ್ ಜೊತೆಗೂ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ಚರ್ಚೆಗಳು ಹೆಚ್ಚು ತೀವ್ರವಾಗಿವೆ... ಹೀಗೆ ವಿಚ್ಛೇದನ ಸುದ್ದಿಗೆ ಪುಷ್ಠಿ ನೀಡುವಂತೆ ಒಂದಾದ ಮೇಲೊಂದು ಮಾಹಿತಿ ಹರಿದುಬರುತ್ತಿವೆ.  

ಇದನ್ನೂ ಓದಿ-"ಮುಂಗಾರು ಮಳೆ" ನಂತರ "ಮನದ ಕಡಲು" 

ಐಶ್ವರ್ಯಾ ರೈ, ಬಚ್ಚನ್ ಕುಟುಂಬ ಮತ್ತು ಅಭಿಷೇಕ್ ಬಚ್ಚನ್ ಜೊತೆಗಿನ ಪ್ರತ್ಯೇಕತೆಯ ಸುದ್ದಿಗಳ ನಡುವೆ, ನಟಿ ಪತಿ ಅಭಿಷೇಕ್‌ ಜೊತೆಗೆ ತುಂಬಾ ಜಗಳವಾಡುತ್ತಾರೆ ಎಂದು ಹೇಳುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಬಚ್ಚನ್ ಕುಟುಂಬ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದರಂತೆ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಐಶ್ವರ್ಯಾ ತನ್ನ ಮತ್ತು ಅಭಿಷೇಕ್ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವ ವಿಷಯದ ಬಗ್ಗೆ ಮಾತನಾಡಿದ್ದಾಳೆ.. 

 

ಇದನ್ನೂ ಓದಿ-ಅದ್ಧೂರಿಯಾಗಿ ಜರುಗಿದ ಯುವ "ಎಕ್ಕ" ಸಿನಿಮಾದ ಮೂಹೂರ್ತ..!

'ನಾವಿಬ್ಬರೂ ತುಂಬಾ ಬಲವಾದ, ಚಿಂತನಶೀಲ ವ್ಯಕ್ತಿತ್ವವನ್ನು ಹೊಂದಿದ್ದೇವೆ.. ನಾವು ಇನ್ನೂ ವಾದ ಮತ್ತು ಚರ್ಚೆಯ ನಡುವಿನ ವ್ಯತ್ಯಾಸವನ್ನು ಕಲಿಯುತ್ತಿದ್ದೇವೆ.. ಹೀಗಾಗಿ ಎಂತದ್ದೇ ವಿಚಾರಗಳಿದ್ದರೂ ವಾದಕ್ಕಿಂತ ಮೊದಲು ಚರ್ಚೆ ಮಾಡುತ್ತೇವೆ.. ಅಭಿಷೇಕ್‌ ಜೊತೆ ಮನಸ್ಥಾಪ ಇರೋದು ನಿಜ ಆದರೆ ನಾವಿಬ್ಬರೂ ಚರ್ಚೆ ಮಾಡಿ ಬಳಿಕ ಮುಂದಿನದನ್ನು ನೋಡುತ್ತೆವೆ" ಎಂದು ಐಶ್ ಹೇಳಿಕೊಂಡಿದ್ದಾರೆ.. 
 
2007ರಲ್ಲಿ ವಿವಾಹವಾದ ಈ ದಂಪತಿಗಳು ತಮ್ಮ ಆಳವಾದ ಪ್ರೀತಿ ಮತ್ತು ಪರಸ್ಪರ ಗೌರವಕ್ಕೆ ಹೆಸರುವಾಸಿಯಾಗಿದ್ದಾರೆ.. ಸಾಮಾನ್ಯವಾಗಿ ಎಲ್ಲರ ಸಂಬಂಧದಂತೆ, ಅವರ ನಡುವೆ ಅನೇಕ ವಿಷಯಗಳಲ್ಲಿ ಜಗಳಗಳು ಮತ್ತು ಭಿನ್ನಾಭಿಪ್ರಾಯಗಳಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News