close

News WrapGet Handpicked Stories from our editors directly to your mailbox

ಅಸ್ಸಾಂ ಪ್ರವಾಹ: ಎರಡು ಕೋಟಿ ರೂ ನೆರವು ಘೋಷಿಸಿದ ನಟ ಅಕ್ಷಯ್ ಕುಮಾರ್

ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಅಸ್ಸಾಂನ ಜನರಿಗೆ ಮತ್ತು ಕಾಜಿರಂಗ ಉದ್ಯಾನಕ್ಕೆ ತಲಾ 1 ಕೋಟಿ ರೂ ದಂತೆ ಒಟ್ಟು ಎರಡು ಕೋಟಿ ರೂ ಸಹಾಯ ದನವನ್ನು ನೀಡುವುದಾಗಿ ತಮ್ಮ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ.

Updated: Jul 17, 2019 , 06:03 PM IST
ಅಸ್ಸಾಂ ಪ್ರವಾಹ: ಎರಡು ಕೋಟಿ ರೂ ನೆರವು ಘೋಷಿಸಿದ ನಟ ಅಕ್ಷಯ್ ಕುಮಾರ್

ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಅಸ್ಸಾಂನ ಜನರಿಗೆ ಮತ್ತು ಕಾಜಿರಂಗ ಉದ್ಯಾನಕ್ಕೆ ತಲಾ 1 ಕೋಟಿ ರೂ ದಂತೆ ಒಟ್ಟು ಎರಡು ಕೋಟಿ  ರೂ ಸಹಾಯ ದನವನ್ನು ನೀಡುವುದಾಗಿ ತಮ್ಮ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ.

ಈಗ ತಮ್ಮ ಟ್ವಿಟ್ಟರ್ ನಲ್ಲಿ ಘೋಷಿಸಿಕೊಂಡಿರುವ ಅಕ್ಷಯ್ ಕುಮಾರ್  'ಅಸ್ಸಾಂನಲ್ಲಿನ ಪ್ರವಾಹದಿಂದ ಉಂಟಾದ ವಿನಾಶ ನಿಜಕ್ಕೂಹೃದಯ ವಿದ್ರಾವಕವಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ಪೀಡಿತ, ಮಾನವರು ಅಥವಾ ಪ್ರಾಣಿಗಳು, ಈ ಸಂಕಷ್ಟದ ಸಮಯದಲ್ಲಿ ಬೆಂಬಲಕ್ಕೆ ಅರ್ಹ. ಆದ್ದರಿಂದ ನಾನು ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಕಾಜಿರಂಗ ಪಾರ್ಕ್ ಪಾರುಗಾಣಿಕಾಕ್ಕೆ ತಲಾ ಒಂದು ಕೋಟಿ ದಾನ ಮಾಡಲು ಬಯಸುತ್ತೇನೆ' ಎಂದು ಹೇಳಿದ್ದಾರೆ. ಅಲ್ಲದೆ ಪ್ರತಿಯೊಬ್ಬರೂ ಇಂತಹ ಸಂಕಷ್ಟದ ಸಮಯದಲ್ಲಿ ನೆರವಿನ ಸಹಾಯ ಹಸ್ತಚಾಚಲು ಅವರು ಮನವಿ ಮಾಡಿಕೊಂಡಿದ್ದಾರೆ.

ಬ್ರಹ್ಮಪುತ್ರಾ ನದಿ ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಭೂಕುಸಿತದಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು 46 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ. ಕಾಜಿರಂಗದಲ್ಲಿ 10 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ಮೇಲೆ ಇದು ಪರಿಣಾಮ ಬಿರಿದೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಸುಮಾರು ಶೇ 90ರಷ್ಟು ಭಾಗವು ಈಗ ನೀರಿನಲ್ಲಿ ಮುಳುಗಿದೆ ಎನ್ನಲಾಗಿದೆ. ಇನ್ನೊಂದೆಡೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಟ್ವೀಟ್ ಮಾಡಿ ಅಸ್ಸಾಂ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರವು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.