ಖ್ಯಾತ ನಟಿಗೆ ಕಿಸ್‌ ಕೊಟ್ಟ ಅಲ್ಲು ಅರ್ಜುನ್‌ ತಮ್ಮ..! ಫೋಟೋ ವೈರಲ್

ನಟಿ ಮಂಚು ಲಕ್ಷ್ಮಿ ಚಿತ್ರರಂಗದ ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಾರೆ. ಮತ್ತೊಂದೆಡೆ, ಲಕ್ಷ್ಮಿ ತಂದೆ ಹಿರಿಯ ನಟ ಮೋಹನ್ ಬಾಬು ಮತ್ತು ಸೂಪರ್‌ ಸ್ಟಾರ್‌ ನಟ ಚಿರಂಜೀವಿ ನಡುವೆ ಕೆಲವು ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗುತ್ತದೆ. ಇದರ ಬೆನ್ನಲ್ಲೆ ಅಲ್ಲು ಅರ್ಜುನ್‌ ಸಹೋದರ ಲಕ್ಷ್ಮಿಗೆ ಮುತ್ತಿಟ್ಟಿರುವ ಫೋಟೋ ವೈರಲ್‌ ಆಗುತ್ತಿದೆ.

Written by - Krishna N K | Last Updated : Nov 14, 2023, 06:35 PM IST
  • ನಟಿ ಮಂಚು ಲಕ್ಷ್ಮಿ ಕೆನ್ನೆಗೆ ಮುತ್ತಿಟ್ಟ ಅಲ್ಲು ಅರ್ಜುನ್‌ ಸಹೋದರ.
  • ಸೋಷಿಯಲ್‌ ಮೀಡಿಯಾದಲ್ಲಿ ಅಲ್ಲು ಸಿರೀಶ್‌ ಲಕ್ಷ್ಮಿ ಫೋಟೋ ವೈರಲ್‌.
  • ಅಲ್ಲು ಸಿರೀಶ್‌ ಕೂಡ ಒಬ್ಬ ನಟ, ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಖ್ಯಾತ ನಟಿಗೆ ಕಿಸ್‌ ಕೊಟ್ಟ ಅಲ್ಲು ಅರ್ಜುನ್‌ ತಮ್ಮ..! ಫೋಟೋ ವೈರಲ್ title=

Allu Sirish kissed Manchu Lakshmi : ಟಾಲಿವುಡ್‌ ನಟ ಸ್ಟೈಲೀಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಸಹೋದರ ಅಲ್ಲು ಸಿರೀಶ್‌ ಕೂಡ ಒಬ್ಬ ನಟ. ಸಿರೀಶ್‌ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಧ್ಯ ತೆಲುಗು ಹಿರಿಯ ನಟ ಮೋಹನ್ ಬಾಬು ಅವರ ಪುತ್ರಿ ಮಂಚು ಲಕ್ಷ್ಮಿಗೆ ಸಿರೀಶ್‌ ಮುತ್ತಿಟ್ಟಿರುವ ಫೋಟೊ ಒಂದು ವೈರಲ್‌ ಆಗಿದೆ.

ನಟಿ ಮಂಚು ಲಕ್ಷ್ಮಿ ಚಿತ್ರರಂಗದ ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಾರೆ. ಮತ್ತೊಂದೆಡೆ, ಮೋಹನ್ ಬಾಬು ಮತ್ತು ಚಿರಂಜೀವಿ ನಡುವೆ ಕೆಲವು ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗುತ್ತದೆ. ಕೆಲ ಕಾರ್ಯಕ್ರಮಗಳಲ್ಲಿ ಇಬ್ಬರ ಮಾತಿನಲ್ಲೂ ವ್ಯತ್ಯಾಸ ಕಂಡು ಬರುತ್ತಿತ್ತು. ಆದರೆ ಇವರಿಬ್ಬರ ನಡುವೆ ಏನೇ ನಡೆದರೂ ಅವರ ಮಕ್ಕಳು ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಾರೆ.

 
 
 
 

 
 
 
 
 
 
 
 
 
 
 

A post shared by Manchu Lakshmi Prasanna (@lakshmimanchu)

ವಿಶೇಷವಾಗಿ ಮನೋಜ್ ಮತ್ತು ಮಂಚು ಲಕ್ಷ್ಮಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮೆಗಾ ಹೀರೋಗಳ ಬಗ್ಗೆ ಯಾವಾಗ್ಲೂ ಒಳ್ಳೆಯ ಮಾತುಗಳನ್ನಾಡುತ್ತಾರೆ. ಅಲ್ಲದೆ, ಆಗಾಗ ಮೆಗಾ ಫ್ಯಾಮೀಲಿ ಸಮಾರಂಭದಲ್ಲಿ ಕಾಣಿಸಿಕೊಂಡು ತಮ್ಮ ನಡುವೆ ಯಾವುದೇ ಬಿನ್ನಾಭಿಪ್ರಾಯವಿಲ್ಲ ಎನ್ನುವ ಸಂದೇಶವನ್ನು ಪ್ಯಾನ್ಸ್‌ಗೆ ನೀಡುತ್ತಿರುತ್ತಾರೆ.

ಇತ್ತೀಚಿಗೆ ರಾಮ್ ಚರಣ್ ದೀಪಾವಳಿ ಮರುದಿನ ಪಾರ್ಟಿ ಮಾಡಿದ್ರು.. ಆ ಪಾರ್ಟಿಗೆ ಲಕ್ಷ್ಮಿ ಮಂಚು ಕೂಡ ಹಾಜರಾಗಿದ್ದರು. ಈ ಈವೆಂಟ್‌ನ ಫೋಟೋಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಲಕ್ಷ್ಮಿ ಜೊತೆ ರಾಮ್ ಚರಣ್ ಮತ್ತು ವೆಂಕಟೇಶ್ ಕಾಣಿಸಿಕೊಂಡಿದ್ದಾರೆ. ಸಧ್ಯ ಗಮನಸೆಳೆದ ಫೋಟೋ ಅಂದ್ರೆ, ಅಲ್ಲು ಶಿರಿಶ್ ಮಂಚು ಲಕ್ಷ್ಮಿ ಕೆನ್ನೆಗೆ ಮುತ್ತಿಟ್ಟ ಫೋಟೋ..

ಇದನ್ನೂ ಓದಿ: ಮೃಣಾಲ್ ಜೊತೆಗಿನ ಡೇಟಿಂಗ್ ಗುಟ್ಟು ರಟ್ಟು ಮಾಡಿದ ರ‍್ಯಾಪರ್..! ʼಫ್ಯಾನ್ಸ್‌ ಶಾಕ್‌ ಬಾದ್‌ ಶಾ ರಾಕ್‌ʼ 

ಹೌದು... ನೀವು ಕೇಳಿದ್ದು ಸರಿ. ಒಂದು ಫೋಟೋದಲ್ಲಿ ಅಲ್ಲು ಶಿರಿಶ್ ಮಂಚು ಲಕ್ಷ್ಮಿ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಆ ಫೋಟೋವನ್ನು ಮಂಚು ಲಕ್ಷ್ಮಿ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ. ಒಳಗೊಳಗೆ ಎಷ್ಟು ಭಿನ್ನಾಭಿಪ್ರಾಯಗಳಿವೆಯೋ ಗೊತ್ತಿಲ್ಲ, ಆದರೆ ಹೊರಗಿನಿಂದ ನೋಡಿದರೆ ಮಂಚು ಫ್ಯಾಮಿಲಿ, ಮೆಗಾ ಫ್ಯಾಮಿಲಿ, ಅಲ್ಲು ಫ್ಯಾಮಿಲಿ ಒಬ್ಬರಿಗೊಬ್ಬರು ಚೆನ್ನಾಗಿಯೇ ಇದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News