‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಸಿನಿಮಾದ ಟ್ರೈಲರ್ ರಿಲೀಸ್; ಹೇಗಿದೆ ಗೊತ್ತಾ ಹವಾ..?

ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡಾ ದಿಗಂತ್ ನಟನೆಯ ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು, ಸಿನಿ ಪ್ರೇಮಿಗಳಿಂದ ಭಾರೀ ಮೆಚ್ಚುಗೆ ಗಳಿಸಿದೆ.

Written by - YASHODHA POOJARI | Edited by - Puttaraj K Alur | Last Updated : Nov 23, 2022, 01:23 PM IST
  • ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ
  • ಮಾನವ ಸಂಬಂಧ, ನಗು, ಭಾವನೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರುವ ಸಿನಿಮಾ
  • ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡಾ ದಿಗಂತ್ ನಟನೆಯ ಸಿನಿಮಾ
‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಸಿನಿಮಾದ ಟ್ರೈಲರ್ ರಿಲೀಸ್; ಹೇಗಿದೆ ಗೊತ್ತಾ ಹವಾ..? title=
‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಟ್ರೈಲರ್ ಬಿಡುಗಡೆ

ಬೆಂಗಳೂರು: ಯಾಕೋ ಏನೋ ಗೊತ್ತಿಲ್ಲ ಒಂದಷ್ಟು ದಿನಗಳಿಂದ ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಟೈಟಲ್ ಹೊಂದಿರೋ ಸಿನಿಮಾ ಎಲ್ಲರನ್ನು ಹೆಚ್ಚು ಹೆಚ್ಚು ಕಾಡುತ್ತಿದೆ. ಯಾಕಂದ್ರೆ ಈ ಸಿನಿಮಾದಲ್ಲಿ ಪ್ರತಿಯೊಬ್ಬರ ಎಮೋಷನ್ ಕೇಂದ್ರೀಕೃತವಾಗಿರುತ್ತೆ ಅಂದ್ರೆ ತಪ್ಪಾಗಲ್ಲ. ಬರೀ ಹೊಡಿಬಡಿ ಸಿನಿಮಾಗಳೇ ಇತ್ತೀಚಿಗೆ ಹೆಚ್ಚಾಗಿಹೋಗಿದೆ. ಮಾನವ ಸಂಬಂಧ, ನಗು, ಭಾವನೆ ಇವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರೋ ಸಿನಿಮಾ ಅಂದ್ರೆ ಅದು ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’.

ಟೀಸರ್  ಮತ್ತು ಹಾಡುಗಳಿಂದಲೇ ಸುದ್ದಿಯಾಗಿದ್ದ ಈ ಚಿತ್ರದ ಟ್ರೈಲರ್ ಫೈನಲಿ ರಿಲೀಸ್ ಆಗಿದ್ದು, ಸಿನಿಮಾ ಬಗೆಗಿನ ನಿರೀಕ್ಷೆ ಇದೀಗ ದುಪ್ಪಟ್ಟು ಆಗಿದೆ. 30 ವರ್ಷಗಳ ನಂತರ ಮೊಮ್ಮಗನನ್ನು ಭೇಟಿಯಾಗುವ ತಾತ ಮೊಮ್ಮಗನ ನಡುವಿನ ಫೈಟ್, ಕಿರಿಕ್, ಪ್ರೀತಿ-ತುಂಟಾಟ, ಹಠ-ಆಟ ಹೀಗೆ ಎಲ್ಲವೂ ಈ ಸಿನಿಮಾದಲ್ಲಿ ಅಡಗಿರೋದು ಟ್ರೈಲರ್ ಮೂಲಕ ಗೊತ್ತಾಗುತ್ತಿದೆ.

ಇದನ್ನೂ ಓದಿ: ಬಾಲಿವುಡ್‍ನ ಬಿಗ್ ಆಫರ್‍ಗೆ ಬೇಡ ಅಂದರೇಕೆ ಬನಾರಸ್ ಹೀರೋ?

ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡಾ ದಿಗಂತ್ ಮತ್ತೇ ಈ ಚಿತ್ರದ ಮೂಲಕ ಹಿಟ್ ಜೋಡಿಗಳು ಅನ್ನೋ ಹೆಸರನ್ನು ಶಾಶ್ವತವಾಗಿ ಉಳಿಸುವುದು ಕನ್ಫರ್ಮ್ ಆಗಿದೆ. ತಾತ-ಮೊಮ್ಮಗನ ಪಾತ್ರವು ಜನತೆಗೆ ಕೂಡ 100% ಇಷ್ಟ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಅನಂತ್‌ ನಾಗ್‌ ಹಾಗೂ ದಿಗಂತ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ತಿಮ್ಮಯ್ಯ ಅಂಡ್‌ ತಿಮ್ಮಯ್ಯ’ ಚಿತ್ರವು ಡಿ.2ರಂದು ಬಿಡುಗಡೆಯಾಗುತ್ತಿದೆ. ಸಂಜಯ್‌ ಶರ್ಮಾ ಈ ಸಿನಿಮಾದ ನಿರ್ದೇಶಕರು. ರಾಜೇಶ್‌ ಶರ್ಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅನಂತ್‌ ನಾಗ್‌ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿದ್ದಾರೆ. ಡಿಸೆಂಬರ್ 2ರವರೆಗೆ ಕಾದು ಈ ಸಿನಿಮಾ ನೋಡಿ ನೀವೂ ಖುಷಿ ಪಡಿ.

ಇದನ್ನೂ ಓದಿ: ಮಾಸ್ಕ್‌ ಧರಿಸಿ ಕಡಲೆಕಾಯಿ ಪರಿಷೆ ಸುತ್ತಿದ ಸಪ್ತಮಿಗೌಡ : ವಿಡಿಯೋ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News