ಕೊನೆಗೂ ಕೂಡಿಬಂತು ಖ್ಯಾತ ನಿರೂಪಕಿಗೆ ಕಂಕಣ ಭಾಗ್ಯ! ರಾಜ್ಯದ ಜನರ ಮನ ಗೆದ್ದ ಮನೆಮಗಳ ಕೈ ಹಿಡಿಯಾಲಿರೋ ವರ ಯಾರು ಗೊತ್ತಾ..?

Famous Anchor Marriage: ಇತ್ತೀಚೆಗೆ ಹೊಸ ವರ್ಷಕ್ಕೆ ಅನೇಕ ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಅದೇ ರೀತಿ ಇದೀಗ ಪ್ರಖ್ಯಾತ ನಿರೂಪಕಿಯೊಬ್ಬರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ..  

Written by - Savita M B | Last Updated : Jan 9, 2025, 04:47 PM IST
  • ಕಿರುತೆರೆ ಆ್ಯಂಕರ್ ರಶ್ಮಿ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.
  • ಜಬರ್ತಸ್ತ್ ಶೋನಲ್ಲಿ ಆ್ಯಂಕರ್ ಆಗಿ ಕಾಣಿಸಿಕೊಂಡ ನಂತರ ರಶ್ಮಿಯ ಜಾತಕ ಬದಲಾಯಿತು.
ಕೊನೆಗೂ ಕೂಡಿಬಂತು ಖ್ಯಾತ ನಿರೂಪಕಿಗೆ ಕಂಕಣ ಭಾಗ್ಯ! ರಾಜ್ಯದ ಜನರ ಮನ ಗೆದ್ದ ಮನೆಮಗಳ ಕೈ ಹಿಡಿಯಾಲಿರೋ ವರ ಯಾರು ಗೊತ್ತಾ..? title=

Anchor Rashmi: ಕಿರುತೆರೆ ಆ್ಯಂಕರ್ ರಶ್ಮಿ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕೆರಿಯರ್ ಆರಂಭಿಸಿದ ರಶ್ಮಿ, ಸಿನಿಮಾಗಳಲ್ಲಿ ಸರಿಯಾದ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ಹಿರಿತೆರೆಯಲ್ಲಿ ಆ್ಯಂಕರ್ ಪಾತ್ರವನ್ನು ನಿಭಾಯಿಸಿದರು. ಜಬರ್ತಸ್ತ್ ಶೋನಲ್ಲಿ ಆ್ಯಂಕರ್ ಆಗಿ ಕಾಣಿಸಿಕೊಂಡ ನಂತರ ರಶ್ಮಿಯ ಜಾತಕ ಬದಲಾಯಿತು. ಜಬರ್ತಸ್ತ್ ಶೋ ರಶ್ಮಿಗೆ ಫುಲ್ ಜನಪ್ರಿಯತೆ ತಂದುಕೊಟ್ಟಿತ್ತು. ಅದರಲ್ಲೂ ರಶ್ಮಿ ಮತ್ತು ಸುಧೀರ್ ನಡುವಿನ ಕೆಮಿಸ್ಟ್ರಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆ.

 ರಶ್ಮಿ-ಸುಧೀರ್ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದಾರೆ ಎಂದೇ ಹೇಳಬೇಕು. ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡರೆ ಶೋ ಸೂಪರ್ ಹಿಟ್‌ ಎನ್ನುವ ರೇಂಜ್‌ಗೆ ಇವರ ಕ್ರೇಜ್ ಬದಲಾಗಿದೆ. ಈ ಕಾರ್ಯಕ್ರಮಗಳ ಜನಪ್ರಿಯತೆಯಿಂದಾಗಿ ಇಬ್ಬರಿಗೂ ಹಲವು ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕಿವೆ. ಆದರೆ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬುದು ಹಲವರ ಅಭಿಪ್ರಾಯ. ಶೂಟಿಂಗ್ ನಂತರ ಇಬ್ಬರೂ ಭೇಟಿಯಾದ ಹಲವು ವಿಡಿಯೋಗಳು ವೈರಲ್ ಆಗಿವೆ.

ಇದನ್ನೂ ಓದಿ-ಫಿನಾಲೆ ತಲುಪಬೇಕಿದ್ದ ಸ್ಪರ್ಧಿಯೇ ಏಕಾಏಕಿ ಔಟ್..‌ ಬಿಗ್‌ಬಾಸ್‌ನಲ್ಲಿ ಶಾಕಿಂಗ್‌ ಎಲಿಮಿನೇಷನ್!‌

 ರಶ್ಮಿ ಮತ್ತು ಸುಧೀರ್ ಒಟ್ಟಿಗೆ ಕಾರ್ಯಕ್ರಮಗಳನ್ನು ಮಾಡದಿದ್ದರೂ, ಅವರು ಪ್ರತಿದಿನ ಕರೆ ಮಾಡಿ ಮಾತನಾಡುತ್ತಾರೆ ಎನ್ನಲಾಗಿದೆ.. ಆದರೆ ಇದಕ್ಕೆ ಪ್ರತಿಕ್ರಿಯಿಸಿ ತೆರೆಯ ಮೇಲೆ ಅಭಿಮಾನಿಗಳನ್ನು ರಂಜಿಸಲು ಆ ರೀತಿ ನಟಿಸುತ್ತಿದೇವೆ ಹೊರತು ತಮ್ಮ ನಡುವೆ ಬೇರೇನೂ ಇಲ್ಲ ಎಂದು ಇಬ್ಬರೂ ಘೋಷಿಸಿದ್ದಾರೆ. ಈ ನಡುವೆ ಕಳೆದ ಕೆಲವು ವರ್ಷಗಳಿಂದ ರಶ್ಮಿ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ರಶ್ಮಿ ತನ್ನ ಬಾಯ್ ಫ್ರೆಂಡ್ ಜೊತೆಗಿನ ಪ್ರೀತಿಯನ್ನು ಮದುವೆಯಾಗಿ ಪರಿವರ್ತಿಸಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.. 

 ಇದರೊಂದಿಗೆ ರಶ್ಮಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ರಶ್ಮಿ ಗೌತಮ್ ಮದುವೆ ಅಮೆರಿಕದ ವ್ಯಕ್ತಿಯೊಂದಿಗೆ ನಡೆಯಲಿದೆಯಂತೆ. ಇಬ್ಬರ ಮನೆಯವರು ಮದುವೆಗೆ ಒಪ್ಪಿಗೆ ಸೂಚಿಸಿರುವುದರಿಂದ ಇದೇ ವರ್ಷ ಇವರ ಮದುವೆ ನಡೆಯುವ ಸಾಧ್ಯತೆ ಇದೆಯಂತೆ. ಸದ್ಯದಲ್ಲೇ ಮದುವೆ ಘೋಷಣೆಯೂ ಬರಲಿದೆಯಂತೆ. ಆದರೆ ಇದುವರೆಗೂ ರಶ್ಮಿ ಮದುವೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಶ್ಮಿ ತನ್ನ ಮದುವೆಯ ಸುದ್ದಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.

ಇದನ್ನೂ ಓದಿ-ಫಿನಾಲೆ ತಲುಪಬೇಕಿದ್ದ ಸ್ಪರ್ಧಿಯೇ ಏಕಾಏಕಿ ಔಟ್..‌ ಬಿಗ್‌ಬಾಸ್‌ನಲ್ಲಿ ಶಾಕಿಂಗ್‌ ಎಲಿಮಿನೇಷನ್!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News