ತೆರೆಗೆ ಬರಲು ಸಜ್ಜಾದ ಮತ್ತೊಂದು ವಿವಾದಾತ್ಮಕ ಸಿನಿಮಾ ʼಅಜ್ಮೀರ್‌ 92ʼ; ಕಥೆ ಏನು?

Ajmer 92 : ಸಾಕಷ್ಟು ವಿವಾದಗಳನ್ನು ಮೀರಿ ತೆರೆಕಂಡ ʼದಿ ಕೇರಳ ಸ್ಟೋರಿʼ ಸಿನಿಮಾ ನಂತರ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುವ ಮತ್ತೊಂದು ಬಾಲಿವುಡ್‌ ಚಿತ್ರ ತೆರೆಕಾಣಲು ಸಿದ್ಧವಾಗಿದೆ.   

Written by - Savita M B | Last Updated : Jun 6, 2023, 01:34 PM IST
  • ಅಜ್ಮೀರ್‌ 92 ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.
  • ಬಿಡುಗಡೆಗೂ ಮುನ್ನವೇ ಈ ಸಿನಿಮಾಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ
  • ಈ ಸಿನಿಮಾವನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ.
ತೆರೆಗೆ ಬರಲು ಸಜ್ಜಾದ ಮತ್ತೊಂದು ವಿವಾದಾತ್ಮಕ ಸಿನಿಮಾ ʼಅಜ್ಮೀರ್‌ 92ʼ; ಕಥೆ ಏನು?  title=

Bollywood : 30 ವರ್ಷಗಳ ಹಿಂದೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ ಎಂದು ಹೇಳಲಾದ ಘಟನೆಯೊಂದನ್ನು ಆಧರಿಸಿದ ಸಿನಿಮಾ ಅಜ್ಮೀರ್‌ 92. ಈ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಆದರೆ ಈ ಸಿನಿಮಾ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದು ಜಮೀಯತ್‌ ಉಲಮಾ ಈ ಹಿಂದ್‌ ಸಂಘಟನೆಯು ಆತಂಕ ವ್ಯಕ್ತಪಡಿಸಿದೆ. 

ಬಿಡುಗಡೆಗೂ ಮುನ್ನವೇ ಈ ಸಿನಿಮಾಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ಸಿನಿಮಾವನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಜಮೀಯತ್‌ ಉಲಮಾ ಈ ಹಿಂದ್‌ ಸಂಘಟನೆಯು ಈ ಚಿತ್ರದ ಬಿಡುಗಡೆಯನ್ನು ತಡೆಯಬೇಕು ಎಂದು ಒತ್ತಾಯಿಸುತ್ತಿದೆ. 

ಇದನ್ನೂ ಓದಿ-Actor Kishor : ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ, ನಮ್ಮ ಸರ್ಕಾರ

"ಅಪರಾಧಗಳ ಘಟನೆಗಳನ್ನು ಧರ್ಮದ ಜೊತೆ ಸೇರಿಸುವ ಬದಲು ಅಪರಾಧಗಳ ವಿರುದ್ಧ ಒಗ್ಗಟ್ಟಿನ ಕ್ರಮದ ಅಗತ್ಯವಿದೆ ಎಂದು ಸಂಘಟನೆಯ ಅಧ್ಯಕ್ಷ ಮಹಮೂದ್‌ ಮದನಿ ಹೇಳಿದ್ದಾರೆ. ಇಂತಹ ಸಿನಿಮಾಗಳು ಸಮಾಜದಲ್ಲಿ ಬಿರುಕು ಮೂಡಿಸುತ್ತವೆ. ಕೇಂದ್ರ ಸರ್ಕಾರವು ಈ ಚಿತ್ರವನ್ನು ನಿಷೇಧಿಸುವ ಮೂಲಕ ಕೋಮುಭಾವನೆಗಳನ್ನು ಕೆರಳಿಸುವ ಸಮಾಜವನ್ನು ವಿಭಜಿಸುವ ಪ್ರಯತ್ನವನ್ನು ವಿಫಲಗೊಳಿಸಬೇಕು" ಎಂದು ಮದನಿ ಮನವಿಮಾಡಿದ್ದಾರೆ. 

ಅಜ್ಮೀರ್‌ನಲ್ಲಿರುವ ಖ್ವಾಜಾ ಮುಈನುದ್ದೀನ್‌ ಷರೀಫ್‌ ಚಿಪ್ತಿ ದರ್ಗಾವು ದೇಶದ ಹಿಂದೂ-ಮುಸ್ಲಿಂ ಏಕತೆಗೆ ಸಾಕ್ಷಿಯಾಗಿದೆ. ಖ್ವಾಜಾ ಮುಈನುದ್ದೀನ್‌ ಷರೀಫ್‌ ಅವರು ಭಾರತ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯದ ದೇವದೂತ ಎಂದೆನಿಸಿಕೊಂಡಿದ್ದರು. ಎಂದು ಮದನಿ ಅವರು ಬಣ್ಣಿಸಿದ್ದಾರೆ. ಈ ಅಜ್ಮೀರ್‌ ಸಿನಿಮಾವನ್ನು ಪುಷ್ಪೇಂದ್ರ ನಿರ್ದೇಶಿಸಿದ್ದು, ಜರೀನಾ ವಹಾಬ್‌ ಸಯಾಜಿ ಶಿಂಧೆ, ಮನೋಜ್‌ ಜೋಶಿ ಹಾಗೂ ರಾಜೇಶ್‌ ಶರ್ಮಾ ನಟಿಸಿದ್ದಾರೆ. 

ಇದನ್ನೂ ಓದಿ-Viral video : ಉರ್ಫಿ ಜಾವೇದ್‌ನೆ ಮೀರಿಸ್ತಾರಾ ಈ ನಟಿ?; ಶೆರ್ಲಿನ್‌ ಲುಕ್‌ಗೆ ಫ್ಯಾನ್ಸ್‌ ಗರಂ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News