ವಿವಾಹಕ್ಕೆ ಸಿದ್ಧವಾದ ಮತ್ತೊಂದು ಸ್ಯಾಂಡಲ್ ವುಡ್ ಸ್ಟಾರ್ ಜೋಡಿ

ಶೀಘ್ರದಲ್ಲೇ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ವಿವಾಹ.

Last Updated : Oct 9, 2017, 04:04 PM IST
ವಿವಾಹಕ್ಕೆ ಸಿದ್ಧವಾದ ಮತ್ತೊಂದು ಸ್ಯಾಂಡಲ್ ವುಡ್ ಸ್ಟಾರ್ ಜೋಡಿ title=

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಸ್ಟಾರ್ ಜೋಡಿ ವಿವಾಹಕ್ಕೆ ಸಿದ್ಧವಾಗಿದೆ. ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ನಿಶ್ಚಿತಾರ್ಥ ಇದೇ ತಿಂಗಳ 22ಕ್ಕೆ ನಡೆಯಲಿದ್ದು, ಡಿಸೆಂಬರ್ 6 ಕ್ಕೆ ವಿವಾಹ ನಡೆಯಲಿದೆ. 

ಎರಡು ವರ್ಷಗಳಿಂದ ಪ್ರೇಮಾಂಕುರದಲ್ಲಿ ಸಿಕ್ಕಿದ್ದ ಇವರ ವಿವಾಹಕ್ಕೆ ಎರಡೂ ಕುಟುಂಬಗಳು ಹಸಿರು ನಿಶಾನೇ ತೋರಿಸಿದ್ದು. ಇದೀಗ ನಿಶ್ಚಿತಾರ್ಥದ ತಯಾರಿ ಭರ್ಜರಿಯಿಂದ ಸಾಗಿದೆ. 

ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಇವರಿಬ್ಬರು 'ಆಟಗಾರ' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಮೇಘನಾ ರಾಜ್ ಕನ್ನಡದ ಹಿರಿಯ ನಟ ಸುಂದರ್ ರಾಜ್ ಮತ್ತು ಖ್ಯಾತ ನಟಿ ಪ್ರಮೀಳ ಜೋಷಿ ಅವರ ಪುತ್ರಿ.

Trending News