Asha Parekh: ಹಿಂದಿ ಚಿತ್ರರಂಗದ ದಿಗ್ಗಜ ನಟಿ ಆಶಾ ಪಾರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Dadasaheb Phalke Award 2022: ಬಾಲಿವುಡ್ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಚಿತ್ರ ಜಗತ್ತಿಗೆ ಅವರು ನೀಡಿರುವ ಉತ್ಕೃಷ್ಟ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Written by - Nitin Tabib | Last Updated : Sep 27, 2022, 05:04 PM IST
  • ಮನರಂಜನಾ ಲೋಕದ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  • ಚಿತ್ರ ಜಗತ್ತಿಗೆ ಅವರು ನೀಡಿದ ಉತ್ಕೃಷ್ಟ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ಸಂದಿದೆ.
Asha Parekh: ಹಿಂದಿ ಚಿತ್ರರಂಗದ ದಿಗ್ಗಜ ನಟಿ ಆಶಾ ಪಾರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ title=
Dadasabheb Phalke Award 2022

Dadasaheb Phalke Award 2022: ಮನರಂಜನಾ ಲೋಕದ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಚಿತ್ರ ಜಗತ್ತಿಗೆ ಅವರು ನೀಡಿದ ಉತ್ಕೃಷ್ಟ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ಸಂದಿದೆ. ಆಶಾ ಪರೇಖ್ ಅವರು ತಮ್ಮ ಚಲನಚಿತ್ರ ವೃತ್ತಿಜೀವನದಲ್ಲಿ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ, ಅವರ ಚಿತ್ರಗಳು ಬಾಲಿವುಡ್ ಅನ್ನು ಹೊಸ ಆಯಾಮವನ್ನೇ ನೀಡಿವೆ. ಭಾರತೀಯ ಚಿತ್ರರಂಗದ ಪಿತಾಮಹ ಎಂದು ಕರೆಯಲ್ಪಡುವ ದಾದಾಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ಪ್ರತಿ ವರ್ಷ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕಳೆದ ವರ್ಷ ರಜನಿಕಾಂತ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಈ ವರ್ಷ ಆಶಾ ಪಾರೇಖ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಮಾಹಿತಿ ನೀಡಿದ ಕೇಂದ್ರ ಸಚಿವ 
ಈ ವರ್ಷ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಖ್ಯಾತ ನಟಿ ಆಶಾ ಪಾರೇಖ್ ಅವರಿಗೆ ನೀಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. 1992 ರಲ್ಲಿ ಅವರು ಚಿತ್ರರಂಗಕ್ಕೆ ನೀಡಿದ ಸೇವೆಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸಹ ಅವರಿಗೆ ನೀಡಲಾಗಿದೆ.

 

 

ತನ್ನ ಜೀವನದ 10 ವಯಸ್ಸಿನಲ್ಲಿಯೇ ವೃತ್ತಿ ಜೀವನಕ್ಕೆ ಕಾಲಿಟ್ಟ ಆಶಾ 
ಆಶಾ ಪಾರೇಖ್ ಹಿಂದಿ ಚಲನಚಿತ್ರಗಳ ಇತಿಹಾಸದಲ್ಲಿ ಅತ್ಯಂತ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. 1960 ಮತ್ತು 1970 ರ ನಡುವೆ ಆಶಾ ಪಾರೇಖ್ ಅವರು ತನ್ನ ವೃತ್ತಿ ಜೀವನದ ಉತ್ತುಂಗ ಶಿಖರದಲ್ಲಿದ್ದರು. ಆಶಾ ಪಾರೇಖ್ ಅವರು ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅವರು ಕೇವಲ 10 ವರ್ಷ ವಯಸ್ಸಿನವರಾಗಿದ್ದಾಗ ಚಲನಚಿತ್ರ ನಿರ್ಮಾಪಕ ಬಿಮಲ್ ರಾಯ್ ಅವರು 'ಮಾ' (1952) ಚಿತ್ರದಲ್ಲಿ ನಟಿಸಿದ್ದರು. ನಂತರ ಕೆಲವು ಭಿತ್ರಗಳಲ್ಲಿ ನಟಿಸಿದ ನಂತರ, ಆಶಾ ತನ್ನ ಅಧ್ಯಯನವನ್ನು ಪೂರ್ಣಗೊಳಿಸಲು ಚಿತ್ರಗಳಿಂದ ವಿರಾಮ ತೆಗೆದುಕೊಂಡರು. ಬಳಿಕ ಓರ್ವ ನಾಯಕ ನಟಿಯಾಗಿ ಬೆಳ್ಳಿ ತೆರೆಗೆ ಮತ್ತೆ ಮರಳಿದರು. ನಾಯಕ ನಟಿಯಾಗಿ ಅವರ ಮೊದಲ ಚಿತ್ರ 'ದಿಲ್ ದೇಕೆ ದೇಖೋ' (1959). ಈ ಚಿತ್ರದಲ್ಲಿ ಶಮ್ಮಿ ಕಪೂರ್ ಎದುರು ಆಶಾ ನಾಯಕ ನತಿಯಾಗಿದ್ದರು ಮತ್ತು ಚಿತ್ರವನ್ನು ನಾಸಿರ್ ಹುಸೇನ್ ನಿರ್ದೇಶಿಸಿದ್ದಾರೆ.

ಆಶಾ ನಟಿಸಿದ ಕೆಲ ಹಿಟ್ ಚಲನಚಿತ್ರಗಳು ಇಲ್ಲಿವೆ
'ದಿಲ್ ದೇಕೆ ದೇಖೋ' ಚಿತ್ರದ ಬಳಿಕ ಆಶಾ ಮತ್ತು ಹುಸೇನ್ ಒಟ್ಟಿಗೆ ಬಾಲಿವುಡ್ ನಲ್ಲಿ ಹಲವು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ- 'ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ' (1961), 'ಫಿರ್ ವಹೀ ದಿಲ್ ಲಯಾ ಹೂ' (1963), 'ತೀಸ್ರಿ ಮಂಜಿಲ್' (1966), 'ಬಹಾರೊಂ ಕೆ ಸಪ್ನೆ' (1967) , 'ಪ್ಯಾರ್ ಕಾ ಮೌಸಮ್' (1969), ಮತ್ತು 'ಕಾರವಾನ್' (1971). ರಾಜ್ ಖೋಸ್ಲಾ ಅವರ 'ದೋ ಬದನ್' (1966), 'ಚಿರಾಗ್' (1969) ಮತ್ತು 'ಮೈ ತುಳಸಿ ತೇರೆ ಆಂಗನ್ ಕಿ' (1978), ಶಕ್ತಿ  ಸಾಮಂತ್  ಅವರ 'ಕಟಿ ಪತಂಗ್' ಚಿತ್ರದಿಂದ ಅವರ ಸ್ಕ್ರೀನ್ ಇಮೇಜ್ ನಲ್ಲಿ ಸಾಕಷ್ಟು ಬದಲಾವಣೆ ಕಂಡಿತು. ನಂತರ ಅವರು ಗಂಭೀರ ಹಾಗೂ ದುಃಖ ಭರಿತ ಪಾತ್ರಗಳಲ್ಲಿನ ನಟನೆಗೆ ಹೆಸರುವಾಸಿಯಾದರು.

ಇದನ್ನೂ ಓದಿ-DKD6 ವಿಜೇತರಾಗಿ 'ಪವರ್ ಸ್ಟಾರ್ ಟ್ರೋಫಿ' ಪಡೆದ ಸಧ್ವಿನ್-ಶಾರಿಕಾ

ಟಿವಿ ಲೋಕದಲ್ಲೂ ಕೈ ಆಜಮಾಯಿಸಿದ ಆಶಾ
ಆಶಾ ಪಾರೆಖ ಗುಜರಾತಿ, ಪಂಜಾಬಿ ಮತ್ತು ಕನ್ನಡ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಕೆಲ ಕಾಲ ಅವರು ದೂರದರ್ಶನ ಮಾಧ್ಯಮದಲ್ಲಿಯೂ ಕೂನಿಸಿಕೊಂಡರು ಮತ್ತು ನಂತರ ತನ್ನದೇ ಆದ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು. ಅವರು ಗುಜರಾತಿ ಧಾರಾವಾಹಿ 'ಜ್ಯೋತಿ' (1990) ಅನ್ನು ನಿರ್ದೇಶಿಸಿದರು ಮತ್ತು 'ಪಲಾಶ್ ಕೆ ಫೂಲ್', 'ಬಜೆ ಪಾಯಲ್', 'ಕೋರಾ ಕಾಗಜ್' ಮತ್ತು 'ದಾಲ್ ಮೇ ಕಾಲಾ' ಮುಂತಾದ ಕಾರ್ಯಕ್ರಮಗಳನ್ನು ನಿರ್ಮಿಸಿದರು.

ಇದನ್ನೂ ಓದಿ-Aishwarya Rai Pregnant: ಮತ್ತೆ ತಾಯಿಯಾಗ್ತಿದ್ದಾರೆ ಬಾಲಿವುಡ್ ನಟಿ ಐಶ್ವರ್ಯಾ ರೈ?!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾಗಿದೆ. ಆಶಾಗೂ ಮುನ್ನ ಈ ಪ್ರಶಸ್ತಿ ಸ್ವೀಕರಿಸಿದವರಲ್ಲಿ ರಾಜ್ ಕಪೂರ್, ಯಶ್ ಚೋಪ್ರಾ, ಲತಾ ಮಂಗೇಶ್ಕರ್, ಮೃಣಾಲ್ ಸೇನ್, ಅಮಿತಾಬ್ ಬಚ್ಚನ್ ಮತ್ತು ವಿನೋದ್ ಖನ್ನಾ ಶಾಮೀಲಾಗಿದ್ದಾರೆ. ದೇವಿಕಾ ರಾಣಿ ಈ ಪ್ರಶಸ್ತಿ ಪಡೆದ ಮೊದಲ ನಟಿಯಾಗಿದ್ದಾರೆ.  ನಟ ರಜನಿಕಾಂತ್ ಅವರು ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಇತ್ತೀಚಿನ ವಿಜೇತರಾಗಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News