'ಇಂದಿರಾ' ಎಂಟ್ರಿಗೆ ಕೌಂಟ್‌ಡೌನ್: ಪ್ರೇಕ್ಷಕರ ಗಮನ ಸೆಳೆಯುತ್ತಿದೆ 'ಸ್ಟೆಪ್ಸ್ ಟು ಡೆಸ್ಟಿನಿ'

ಸ್ಯಾಂಡಲ್‌ವುಡ್‌ ಕಳೆಗಟ್ಟಿದೆ, ಕೊರೊನಾ ಕಂಟಕ ತೊಲಗುತ್ತಿದ್ದಂತೆ ಮತ್ತೆ ಚಂದನವನ ಕಲರ್‌ಫುಲ್‌ ಆಗುತ್ತಿದೆ.ಸಾಲು ಸಾಲು ಚಿತ್ರಗಳು ಕನ್ನಡ ಸಿನಿ ರಸಿಕರಿಗೆ ಎಂಟರ್‌ಟೈನ್ಮೆಂಟ್‌ ನೀಡಲು ಸಜ್ಜಾಗಿವೆ.ಈ ಸಾಲಿಗೆ ಮತ್ತೊಂದು ಸೇರ್ಪಡೆಯೇ ʼಇಂದಿರಾʼ.

Written by - Malathesha M | Last Updated : Feb 14, 2022, 07:49 PM IST
  • ಸ್ಯಾಂಡಲ್‌ವುಡ್‌ ಕಳೆಗಟ್ಟಿದೆ, ಕೊರೊನಾ ಕಂಟಕ ತೊಲಗುತ್ತಿದ್ದಂತೆ ಮತ್ತೆ ಚಂದನವನ ಕಲರ್‌ಫುಲ್‌ ಆಗುತ್ತಿದೆ.ಸಾಲು ಸಾಲು ಚಿತ್ರಗಳು ಕನ್ನಡ ಸಿನಿ ರಸಿಕರಿಗೆ ಎಂಟರ್‌ಟೈನ್ಮೆಂಟ್‌ ನೀಡಲು ಸಜ್ಜಾಗಿವೆ.ಈ ಸಾಲಿಗೆ ಮತ್ತೊಂದು ಸೇರ್ಪಡೆಯೇ ʼಇಂದಿರಾʼ.
 'ಇಂದಿರಾ' ಎಂಟ್ರಿಗೆ ಕೌಂಟ್‌ಡೌನ್: ಪ್ರೇಕ್ಷಕರ ಗಮನ ಸೆಳೆಯುತ್ತಿದೆ 'ಸ್ಟೆಪ್ಸ್ ಟು ಡೆಸ್ಟಿನಿ' title=

ಬೆಂಗಳೂರು: ಸ್ಯಾಂಡಲ್‌ವುಡ್‌ ಕಳೆಗಟ್ಟಿದೆ, ಕೊರೊನಾ ಕಂಟಕ ತೊಲಗುತ್ತಿದ್ದಂತೆ ಮತ್ತೆ ಚಂದನವನ ಕಲರ್‌ಫುಲ್‌ ಆಗುತ್ತಿದೆ.ಸಾಲು ಸಾಲು ಚಿತ್ರಗಳು ಕನ್ನಡ ಸಿನಿ ರಸಿಕರಿಗೆ ಎಂಟರ್‌ಟೈನ್ಮೆಂಟ್‌ ನೀಡಲು ಸಜ್ಜಾಗಿವೆ.ಈ ಸಾಲಿಗೆ ಮತ್ತೊಂದು ಸೇರ್ಪಡೆಯೇ ʼಇಂದಿರಾʼ.

ಅಂದಹಾಗೆ ಚಂದನವನದ ಚೆಂದದ ಬ್ಯೂಟಿ ಅನಿತಾ ಭಟ್ ನಟನೆಗೂ ಸೈ.. ನಿರ್ಮಾಣಕ್ಕೂ ಜೈ ಅಂದಿದ್ದಾಗಿದೆ. ಈಗಾಗಲೇ ಅನಿತಾ ಭಟ್ ತಮ್ಮದೇ ಬ್ಯಾನರ್ ಅಡಿ ʼಸಮುದ್ರಂʼ ಸಿನಿಮಾ ನಿರ್ಮಾಣ ಮಾಡಿದ್ದರು. ಸದ್ಯ ʼಇಂದಿರಾʼ ಚಿತ್ರದ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ. ಈ ಹಿಂದೆ ʼಇಂದಿರಾʼ ಫಸ್ಟ್ ಲುಕ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಸದ್ಯ ʼಇಂದಿರಾʼಳ ಮೊದಲ ಹಾಡು ಪ್ರೇಕ್ಷಕರ ನಿರೀಕ್ಷೆಗಳನ್ನ ಡಬಲ್‌ ಮಾಡಿದೆ.

ಇದನ್ನೂ ಓದಿ : ಜಾತಿಗಣತಿ ವರದಿಯಿಂದ ಒಬಿಸಿ ಮೀಸಲಾತಿ ಅಡ್ಡಿ ಪರಿಹರಿಸಬಹುದು: ಸಿದ್ದರಾಮಯ್ಯ

'ಸ್ಟೆಪ್ಸ್ ಟು ಡೆಸ್ಟಿನಿ'
ಹೌದು, ಇಂದಿರಾ ಚಿತ್ರದ ಮೊದಲ ಹಾಡು ಅಬ್ಬಬ್ಬಾ ಎನ್ನುವಂತಿದೆ. ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಸ್ಟೆಪ್ಸ್ ಟು ಡೆಸ್ಟಿನಿ ಹಾಡು ಕೇಳುಗರ ಗಮನಸೆಳೆಯುತ್ತಿದೆ. ಚಿತ್ರದ ನಿರ್ದೇಶಕ ರಿಷಿಕೇಶ್ ಸ್ವತಃ ಈ ಹಾಡಿಗೆ ಲಿರಿಕ್ಸ್ ಬರೆದಿದ್ದು, ಲೋಹಿತ್ ನಾಯ್ಕ್ ಲಿರಿಕ್ಸ್ ಕಂಪೋಸ್ ಮಾಡಿದ್ದಾರೆ. ಸುಪ್ರಿಯಾ ರಾಮ್ ಕಂಠದಲ್ಲಿ ಮೂಡಿಬಂದಿರುವ 'ಸ್ಟೆಪ್ಸ್ ಟು ಡೆಸ್ಟಿನಿ' ಸಖತ್‌ ಹವಾ ಎಬ್ಬಿಸಿದೆ. ಇಷ್ಟೇ ಅಲ್ಲ ಸಸ್ಪೆನ್ಸ್ ಅಂಶಗಳಿಂದಲೂ ಈ ಹಾಡು ಕೇಳುಗರಿಗೆ ಅಟ್ರ್ಯಾಕ್ಟ್ ಆಗುತ್ತಿದೆ.

ಸೈಕಲಾಜಿಕಲ್‌ ಥ್ರಿಲ್ಲರ್‌ 
ʼಇಂದಿರಾʼ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ʼಇಂದಿರಾʼ ನಿರ್ಮಾಣವಾಗುತ್ತಿದೆ. ಸಿನಿಮಾದ ತಾರಾಗಣವನ್ನ ನೋಡೋದಾದ್ರೆ ಅನಿತಾ ಭಟ್ ಸೇರಿದಂತೆ ಚಕ್ರವರ್ತಿ ಚಂದ್ರಚೂಡ್‌, ನೀತು ಹಾಗೂ ಶಫಿ ಬಣ್ಣ ಹಚ್ಚಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News