ಸ್ಯಾಂಡಲ್ವುಡ್ ನಟಿ ಮೇಲೆ ಆಟೋ ಚಾಲಕನ ಹಲ್ಲೆ

ನಟಿ ಆಶ್ರಿನ್​ ಮೆಹ್ತಾ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Last Updated : Sep 19, 2018, 02:21 PM IST
ಸ್ಯಾಂಡಲ್ವುಡ್ ನಟಿ ಮೇಲೆ ಆಟೋ ಚಾಲಕನ ಹಲ್ಲೆ  title=

ಬೆಂಗಳೂರು: ಸ್ಯಾಂಡಲ್ವುಡ್ ನಟಿಯ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ನಡೆಸಿದ ಘಟನೆ ಮಂಗಳವಾರ ರಾತ್ರಿ ಉತ್ತನಹಳ್ಳಿ ಬಳಿ ನಡೆದಿದೆ.

ಕನ್ನಡದ 'ಬ್ಲಡ್ ಸ್ಟೋರಿ' ಚಿತ್ರದ ನಾಯಕಿ ಆಶ್ರಿನ್​ ಮೆಹ್ತಾ ಅವರೇ ಆಟೋ ಚಾಲಕನಿಂದ ಹಲ್ಲೆಗೊಳಗಾದ ನಟಿ. ಉತ್ತರಹಳ್ಳಿ ಬಳಿ ನಟಿ ಕೆಲಸದ ನಿಮಿತ್ತ ಆಟೋ ಹತ್ತಿದ ನಟಿ ಆಶ್ರಿನ್​ ಮೆಹ್ತಾ ಅವರು, ಆಟೋ ಚಾಲಕನಿಗೆ ಡಬಲ್ ಚಾರ್ಜ್ ತೆಗೆದುಕೊಳ್ಳದಂತೆ ತಿಳಿಸಿದ್ದಾರೆ. ಆದರೆ ಇಷ್ಟಕ್ಕೇ ಕೋಪಗೊಂಡ ಆಟೋ ಚಾಲಕ ನಟಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ‌ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ನಟಿ ಆಶ್ರಿನ್​ ಮೆಹ್ತಾ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

Trending News