Avatara Purusha 2: ʻಅವತಾರ ಪುರುಷʼಗೂ IPL ಎಫೆಕ್ಟ್:‌ ರಿಲೀಸ್‌ ಡೇಟ್‌ ಮುಂದೂಡಿದ ಚಿತ್ರತಂಡ!

Avatara Purusha Release Date: ಚಂದನವನದ ನಟ ಶರಣ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಅವತಾರ ಪುರುಷ-2 ಸಿನಿಮಾದ ರಿಲೀಸ್‌ ಡೇಟ್‌ ಮುಂದೂಡಲಾಗಿದೆ. ಹಾಗಾದ್ರೇ ಈ ಚಿತ್ರದ ರಿಲೀಸ್‌ ಆಗುವುದರ ಯಾವಾಗ? ಪೋಸ್ಟ್‌ಪೋನ್‌ ಆಗಿದು ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Mar 19, 2024, 05:13 PM IST
  • ಅವತಾರ ಪುರುಷ-2 ಒಳ್ಳೆಯ ಸಬ್ಜೆಕ್ಟ್ ಇರೋ ಈ ಸಿನಿಮಾದ ಎರಡನೇ ಭಾಗ ಇನ್ನಷ್ಟೂ ಚೆನ್ನಾಗಿಯೇ ಸಲ್ಪ ತಡವಾಗಿಯೇ ತೆರೆಗೆ ಬರಲು ಸಜ್ಜಾಗಿದೆ.
  • ಆದರೆ ಮಾರ್ಚ್‌ 22 ರಿಂದ IPL ಪಂದ್ಯ ಪ್ರಾರಂಭವಾಗುತ್ತಿದ್ದು, ಪ್ರೇಕ್ಷಕರು ಕೂಡ ಮ್ಯಾಚ್‌ ಕಡೆಗೆನೇ ವಾಲುತ್ತಾರೆ.
  • ನಟ ಶರಣ್‌ ಹಾಗೂ ನಟಿ ಆಶಿಕಾ ರಂಗನಾಥ್ ಜೋಡಿಯ, ಮತ್ತೆ ಶ್ರೀನಗರ ಕಿಟ್ಟಿಯ ಮಂತ್ರವಾದಿಯ ಪಾತ್ರ ಈ ಚಿತ್ರದಲ್ಲಿ ತುಂಬಾನೆ ವೈಬ್ರಂಟ್ ಆಗಿದೆ.
Avatara Purusha 2: ʻಅವತಾರ ಪುರುಷʼಗೂ IPL ಎಫೆಕ್ಟ್:‌ ರಿಲೀಸ್‌ ಡೇಟ್‌ ಮುಂದೂಡಿದ ಚಿತ್ರತಂಡ! title=

Avatara Purusha Release Date Postponed: ಸ್ಯಾಂಡಲ್‌ವುಡ್‌ ಹಾಸ್ಯನಟ ಶರಣ್‌ ಅಭಿನಯದ ಅವತಾರ ಪುರುಷ-2 ಸಿನಿಮಾದ ರಿಲೀಸ್‌ ಡೇಟ್‌ ಪೋಸ್ಟ್‌ಪೋನ್‌ ಮಾಡಲಾಗಿದೆ. ಅವತಾರ ಪುರುಷ ಮೊದಲ ಭಾಗ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಆದರೆ ಕೆಲವರಿಗೆ ಈ ಚಿತ್ರ ಅಷ್ಟೇನು ಇಷ್ಟವಾಗಿರಲಿಲ್ಲ. ಇಂತಹ ಒಳ್ಳೆಯ ಸಬ್ಜೆಕ್ಟ್ ಇರೋ ಈ ಸಿನಿಮಾದ ಎರಡನೇ ಭಾಗ ಇನ್ನಷ್ಟೂ ಚೆನ್ನಾಗಿಯೇ ಸಲ್ಪ ತಡವಾಗಿಯೇ ತೆರೆಗೆ ಬರಲು ಸಜ್ಜಾಗಿದೆ.

ಅವತಾರ ಪುರುಷ ಎರಡನೇ ಭಾಗ ಇದೇ ಮಾರ್ಚ್‌ 22 ರಂದು ರಾಜ್ಯಾದ್ಯಂತ ತೆರೆಗೆ ಬರಲು ರೆಡಿಯಾಗಿತ್ತು. ಆದರೆ ಮಾರ್ಚ್‌ 22 ರಿಂದ IPL ಪಂದ್ಯ ಪ್ರಾರಂಭವಾಗುತ್ತಿದ್ದು, ಪ್ರೇಕ್ಷಕರು ಕೂಡ ಮ್ಯಾಚ್‌ ಕಡೆಗೆನೇ ವಾಲುತ್ತಾರೆ. ಯಾಕೆಂದರೇ ಜನರಿಗೆ ಅಲ್ಲಿಯೇ ಎಂಟರಟೈನಮೆಂಟ್ ಸಿಗುತ್ತಿದ್ದು, ಇನ್ನೊಂದೆಡೆ  ನಟ ಶರಣ್‌ ನಟನೆಯ ಛೂಮಂತರ್ ಚಿತ್ರವೂ ಸಹ ಅಂದೇ ರಿಲೀಸ್‌ ಆಗಲು ರೆಡಿಯಾಗಿದೆ.

 
 
 
 

 
 
 
 
 
 
 
 
 
 
 

A post shared by Su Ni (@simplesuni)

ಇದನ್ನೂ ಓದಿ: ಇಬ್ಬರು ನಟರ ಜೊತೆ​ ಅನಿಮಲ್ ನಟಿ ತೃಪ್ತಿ ರೊಮ್ಯಾನ್ಸ್‌..! ಲೀಕ್‌ ಆಯ್ತು ಫೋಟೋ

ಇವೆಲ್ಲಾ ಕಾರಣದಿಂದ ಅವತಾರ ಪುರುಷ-2 ಸಿನಿಮಾದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ಈ ಚಿತ್ರದ ರಿಲೀಸ್‌ ಡೇಟ್‌ ಒಂದು ತಿಂಗಳು ಮುಂದಕ್ಕೆ ಪೋಸ್ಟ್‌ಪೂನ್‌ ಮಾಡಲಾಗಿದೆ. ಈ ವಿಚಾರವನ್ನು ಡೈರೆಕ್ಟರ್‌ ಸಿಂಪಲ್‌ ಸುನಿ ಒಂದು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ರಿವೀಲ್‌ ಮಾಡಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ಅಂದರೇ ಏಪ್ರಿಲ್‌ 5 ರಂದು ಯುಗಾದಿಗೆ ತೆರೆಗೆ ಅಪ್ಪಳಿಸಲು ತಯಾರಾಗಿದೆ.

ನಟ ಶರಣ್‌ ಹಾಗೂ ನಟಿ ಆಶಿಕಾ ರಂಗನಾಥ್ ಜೋಡಿಯ, ಮತ್ತೆ ಶ್ರೀನಗರ ಕಿಟ್ಟಿಯ ಮಂತ್ರವಾದಿಯ ಪಾತ್ರ ಈ ಚಿತ್ರದಲ್ಲಿ ತುಂಬಾನೆ ವೈಬ್ರಂಟ್ ಆಗಿದೆ. ಶ್ರೀನಗರ ಕಿಟ್ಟಿ ಪಾತ್ರ  ಮೊದಲ ಭಾಗಕ್ಕಿಂತ ಅವತಾರ ಪುರುಷ ಎರಡನೇ ಭಾಗದಲ್ಲಿ ಇನ್ನಷ್ಟು ಭಯಂಕರವಾಗಿಯೇ ಮೂಡಿ ಬಂದಿದೆ. ಈ ಸಿನಿಮಾದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ್‌ ಗೆದ್ದಿದ್ದು, ಚಿತ್ರವೂ ಸಹ ಅದರಂತೆ ಚೆನ್ನಾಗಿಯೇ ಬಂದಿದೆ. ಅವತಾರ ಪುರುಷ ಮೊದಲ ಭಾಗವನ್ನು ಇಷ್ಟ ಪಡದೆವರು ಕೂಡ ಎರಡನೇ ಭಾಗವನ್ನು ಮೆಚ್ಚುಗೆ ಸೂಚಿಸಬಹುದು ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News