ನವದೆಹಲಿ: ಇಂದು ಭಾರತ - ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ದೇಶ ಸಜ್ಜಾಗುತ್ತಿದ್ದಂತೆ ಎಲ್ಲ ಕಡೆ ಉತ್ಸಾಹದ ಅಲೆ ದ್ವಿಗುಣಗೊಂಡಿದೆ.ಇಡೀ ದೇಶದ ಜನರು ವಯಸ್ಸು, ವೃತ್ತಿ, ಜಾತಿ, ಲಿಂಗ, ಸ್ಥಳವನ್ನು ಲೆಕ್ಕಿಸದೆ, ಭಾರತ ತಂಡವನ್ನು ಬೆಂಬಲಿಸುತ್ತಿದೆ.
ಆಯುಷ್ಮಾನ್ ಖುರಾನಾ ಅವರು ಆರ್ಟಿಕಲ್ 15 ರ ಇತ್ತೀಚಿನ ಪ್ರೋಮೋ ವೀಡಿಯೊದಲ್ಲಿ ಇಂದು ದೇಶವು ಹೇಗೆ ಒಗ್ಗೂಡಿ ನಿಂತಿದೆ ಮತ್ತು ಸಂವಿಧಾನದ 15 ನೇ ವಿಧಿ ದೇಶಕ್ಕೆ ಎಷ್ಟು ಸುಂದರವಾಗಿ ಅನ್ವಯಿಸುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ, ನಾವೆಲ್ಲರೂ ಎಲ್ಲಾ ರೀತಿಯ ತಾರತಮ್ಯಗಳನ್ನು ತೊಡೆದುಹಾಕಲು ಮತ್ತು ಐಕ್ಯವಾಗಿರಲು ಸಮರ್ಥರಾಗಿದ್ದೇವೆ ಎನ್ನುವ ಸಂದೇಶವನ್ನು ಸಾರುತ್ತದೆ.
India Pakistan Match Ke Din Hum Sab Indian Hote hain. Sahi Maayene Mein Indian!
Toh Kyun Na bhed bhaav Bhool Kar, Roz Hi Sirf Indian Banein?
#UnitedByArticle15@anubhavsinha #IshaTalwar @sayanigupta @Mdzeeshanayyub @ZeeStudios_ @ZeeMusicCompany @sirfgaurav pic.twitter.com/Vxlm3LEf2u
— Ayushmann Khurrana (@ayushmannk) June 16, 2019
ಆಯುಷ್ಮಾನ್ ಖುರಾನಾ ಪ್ರೊಮೋ ಶೇರ್ ಮಾಡಿ "ಭಾರತ ಪಾಕಿಸ್ತಾನ ಪಂದ್ಯ ಕೆ ದಿನ್ ಹಮ್ ಸಬ್ ಇಂಡಿಯನ್ ಹೊತೆ ಹೈ. ಸಾಹಿ ಮಾಯೆಂಗೆ ಮೇ ಇಂಡಿಯನ್! ತೋಹ್ ಕ್ಯುನ್ ನಾ ಭೆದ್ ಭಾವ್ ಭೂಲ್ ಕರ್, ರೋಜ್ ಹಾಯ್ ಸಿರ್ಫ್ ಇಂಡಿಯನ್ ಬನೈನ್?" ಎಂದು ಟ್ವೀಟ್ ಮಾಡಿದ್ದಾರೆ.
ಆರ್ಟಿಕಲ್ 15 ಚಲನಚಿತ್ರದ ಶೀರ್ಷಿಕೆ ನಮ್ಮ ಸಂವಿಧಾನದಲ್ಲಿ ಅದೇ ಹೆಸರಿನ ಕಲಂನಲ್ಲಿ ಜಾತಿ, ಧರ್ಮ ಮತ್ತು ಲಿಂಗಗಳ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಮೂವರು ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಮತ್ತು ಹತ್ಯೆಯ ಸುತ್ತ ಕಥೆ ಸುತ್ತುತ್ತದೆ. ಈ ಚಿತ್ರದಲಿ ಆಯುಷ್ಮಾನ್ ತನಿಖಾ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ಚಿತ್ರದಲ್ಲಿ ಇಶಾ ತಲ್ವಾರ್, ಎಂ ನಾಸರ್, ಮನೋಜ್ ಪಹ್ವಾ, ಸಯಾನಿ ಗುಪ್ತಾ, ಕುಮುದ್ ಮಿಶ್ರಾ ಮತ್ತು ಮೊಹಮ್ಮದ್ ಅಯೂಬ್ ನಟಿಸಿದ್ದಾರೆ. ಜೂನ್ 28, 2019 ರಂದು ಈ ಚಿತ್ರ ಬಿಡುಗಡೆಯಾಗಲಿದೆ.