ಸಲ್ಮಾನ್ ಖಾನ್ 'ಸಿಕಂದರ್' ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !

Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್‌ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.

Written by - Chetana Devarmani | Last Updated : May 28, 2024, 01:10 PM IST
  • ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರ
  • ಖಳನಾಯಕನಾಗಿ ಸ್ಟಾರ್‌ ನಟನೊಬ್ಬ ಎಂಟ್ರಿ
  • ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ
ಸಲ್ಮಾನ್ ಖಾನ್ 'ಸಿಕಂದರ್' ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !  title=

Baahubali Kattappa aka Sathyaraj: ಸಲ್ಮಾನ್ ಖಾನ್ ಆಕ್ಷನ್ ಎಂಟರ್‌ಟೈನರ್ 'ಸಿಕಂದರ್' ಸಿನಿಮಾ ಮಾಡುವುದಾಗಿ ಘೋಷಿಸಿದಾಗಿನಿಂದ ಎಲ್ಲರ ಚಿತ್ತ ಈ ಚಿತ್ರದಮೇಲೆಯೇ ನೆಟ್ಟಿದೆ. ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು,  ಈಗ ಖಳನಾಯಕನಾಗಿ ಸ್ಟಾರ್‌ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.

ಬಾಹುಬಲಿ ಕಟ್ಟಪ್ಪನ ಪಾತ್ರದಿಂದ ಹೆಸರುವಾಸಿಯಾದ ಸತ್ಯರಾಜ್ ಅವರು ಸಿಕಂದರ್‌ನಲ್ಲಿ ಸಲ್ಮಾನ್ ಖಾನ್ ಎದುರು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಸತ್ಯರಾಜ್ ಪಾತ್ರದ ಬಗ್ಗೆ ನಿರ್ಮಾಪಕರಾಗಲಿ, ಚಿತ್ರತಂಡವಾಗಲಿ ಅಧಿಕೃತ ದೃಢೀಕರಣವನ್ನು ನೀಡಿಲ್ಲ.

ಇದನ್ನೂ ಓದಿ:  ನಟ ವಿಜಯ್‌ ದಳಪತಿ ತಂದೆ ತಾಯಿ ಇವರೇ ನೋಡಿ.! 

ಈದ್ 2025 ರ ಸಮಯದಲ್ಲಿ  'ಸಿಕಂದರ್' ಸಿನಿಮ ಬಿಡುಗಡೆಯಾಗುವ ನಿರೀಕ್ಷೆಯಿದೆ. ಎಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಮುರುಗದಾಸ್, ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‌ಗಳ ಜೊತೆಗೆ, ಇದು ಭಾವನೆಗಳಿಂದ ತುಂಬಿರುತ್ತದೆ. ಶಕ್ತಿಯುತ ಸಾಮಾಜಿಕ ಸಂದೇಶವನ್ನು ಸಹ ಹೊಂದಿರುತ್ತದೆ ಎಂದಿದ್ದಾರೆ. 

ಇದು ಪ್ಯಾನ್-ಇಂಡಿಯಾ ಚಿತ್ರವಾಗಿರುತ್ತದೆ. ಸಲ್ಮಾನ್ ಖಾನ್ ಮತ್ತು ನಾನು ಐದು ವರ್ಷಗಳ ಹಿಂದೆ ಈ ಯೋಜನೆಯ ಬಗ್ಗೆ ಚರ್ಚಿಸಿದ್ದೆವು. ಆದರೆ ಆ ಸಮಯದಲ್ಲಿ ನಾವು ಮುಂದುವರಿಯಲು ಸಾಧ್ಯವಾಗಲಿಲ್ಲ ಎಂದು ಮುರುಗದಾಸ್ ಹೇಳಿದ್ದಾರೆ.

ಇದನ್ನೂ ಓದಿ: ಈ ಸಿನಿಮಾದಲ್ಲಿ ಮೆಂಟಲ್ ಕ್ಯಾರೆಕ್ಟರ್ ಮಾಡಲಿದ್ದಾರಾ ರಶ್ಮಿಕಾ ಮಂದಣ್ಣ ?  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News