ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ಬಳುಕೋ ಬಳ್ಳಿ...! ಈ ದಂತದ ಗೊಂಬೆಗೆ ಈಗ ವಯಸ್ಸೆಷ್ಟು ಗೊತ್ತಾ? ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ?

Baby Shamili Then and Now: ಜಗತ್ತು ಸಂಪೂರ್ಣವಾಗಿ ತಿಳಿದಿಲ್ಲದ ವಯಸ್ಸಿನಲ್ಲಿಯೂ ಅದೆಷ್ಟೋ  ಅಭಿಮಾನಿಗಳನ್ನು ಮನಗೆದ್ದಿದ್ದು ಸುಳ್ಳಲ್ಲ. ಆಗ ಬೇಬಿ ಶಾಮಿಲಿಗೆ ವಿಶಿಷ್ಟವಾದ ಐಡೆಂಟಿಟಿ ಇತ್ತು. ಆ ಮಗುವಿನ ಅಭಿನಯ ನೋಡಲು ಜನ ಥಿಯೇಟರ್‌ʼಗಳಿಗೆ ಬರುತ್ತಿದ್ದರು.

Written by - Bhavishya Shetty | Last Updated : Aug 4, 2024, 07:41 PM IST
    • ಬಾಲ ಕಲಾವಿದೆಯಾಗಿ ಹಲವು ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದ ನಟಿ
    • ಬೇಬಿ ಶಾಮಿಲಿಗೆ ವಿಶಿಷ್ಟವಾದ ಐಡೆಂಟಿಟಿ ಇತ್ತು.
    • ಆ ಮಗುವಿನ ಅಭಿನಯ ನೋಡಲು ಜನ ಥಿಯೇಟರ್‌ʼಗಳಿಗೆ ಬರುತ್ತಿದ್ದರು.
ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ಬಳುಕೋ ಬಳ್ಳಿ...! ಈ ದಂತದ ಗೊಂಬೆಗೆ ಈಗ ವಯಸ್ಸೆಷ್ಟು ಗೊತ್ತಾ? ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ? title=
Baby Shamili

Baby Shamili: ಬೇಬಿ ಶಾಮಿಲಿ... ಒಂದು ಕಾಲದಲ್ಲಿ ಬಾಲ ಕಲಾವಿದೆಯಾಗಿ ಹಲವು ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದ ನಟಿ. ಮಧುರವಾದ ಮಾತುಗಳು ಮತ್ತು ಮುಗ್ಧ ಅಭಿನಯದ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಿದ್ದರು. ಈ ಮುದ್ದಾದ ಹುಡುಗಿ 90ರ ದಶಕದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ: ನಟಿ ದೀಪಿಕಾ ಪಡುಕೋಣೆ ತಂಗಿಯನ್ನು ನೋಡಿದ್ದೀರಾ? ಚಂದದಲ್ಲಿ ಅಕ್ಕನನ್ನೇ ಮೀರಿಸುವಷ್ಟು ಅಂದಗಾತಿ... ಇವರು ದೇಶದ ಪ್ರಖ್ಯಾತ ಆಟಗಾರ್ತಿ!

ಜಗತ್ತು ಸಂಪೂರ್ಣವಾಗಿ ತಿಳಿದಿಲ್ಲದ ವಯಸ್ಸಿನಲ್ಲಿಯೂ ಅದೆಷ್ಟೋ  ಅಭಿಮಾನಿಗಳನ್ನು ಮನಗೆದ್ದಿದ್ದು ಸುಳ್ಳಲ್ಲ. ಆಗ ಬೇಬಿ ಶಾಮಿಲಿಗೆ ವಿಶಿಷ್ಟವಾದ ಐಡೆಂಟಿಟಿ ಇತ್ತು. ಆ ಮಗುವಿನ ಅಭಿನಯ ನೋಡಲು ಜನ ಥಿಯೇಟರ್‌ʼಗಳಿಗೆ ಬರುತ್ತಿದ್ದರು.

ಬೇಬಿ ಶಾಮಿಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿದ್ದರು. ಆದರೆ ಆ ನಂತರ ಚಿತ್ರರಂಗದಿಂದ ದೂರವಾದರು. ಹಲವು ವರ್ಷಗಳ ನಂತರ ಸಿದ್ಧಾರ್ಥ್ ಅಭಿನಯದ ಓಯ್ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯವಾದರು.

ಆದರೆ ಬಾಲ್ಯದಲ್ಲಿ ಬಂದ ಮನ್ನಣೆ ದೊಡ್ಡವರಾದ ಮೇಲೆ ಬರಲಿಲ್ಲ. ʼಓಯ್ʼ ಚಿತ್ರ ಪಾಸಿಟಿವ್ ಟಾಕ್ ಪಡೆದರೂ ಶಾಮಿಲಿ ಅಷ್ಟಾಗಿ ಕ್ಲಿಕ್ ಆಗಲಿಲ್ಲ. ಇದರಿಂದಾಗಿ ನಾಯಕಿಯಾಗಿ ಅವಕಾಶಗಳು ವಿರಳವಾದವು.

ಇದನ್ನೂ ಓದಿ: ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ! 7.5 ಕೋಟಿ ಆಸ್ತಿ ಹೊಂದಿರುವ ಈ ಹೈಫೈ ಬೆಗ್ಗರ್‌ ಭಾರತದವನೇ..

ಶಾಮಿಲಿ 10 ಜುಲೈ 1987 ರಂದು ಕೇರಳದಲ್ಲಿ ಜನಿಸಿದ ಅವರಿಗೆ ಈಗ 37 ವರ್ಷ ವಯಸ್ಸು. ತಮ್ಮ ಮೂರನೇ ವಯಸ್ಸಿನಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಹಲವು ಚಿತ್ರಗಳಲ್ಲಿ ನಟಿಸಿದ್ದರೂ ನಾಯಕಿಯಾಗಿ ಒಂದೇ ಒಂದು ಸಿನಿಮಾ ಮಾಡಿದ್ದಾರೆ. ಆ ನಂತರ ಶಾಮಿಲಿ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಅಂದಹಾಗೆ ಆಕೆ ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News